ಬಳ್ಳಾರಿ

ಕಂಪ್ಲಿ: ಬಿಜೆಪಿ ಪ್ರಚಾರ ಆರಂಭ

Published On :

ಕಂಪ್ಲಿ: ಇಲ್ಲಿಗೆ ಸಮೀಪದ ದೇವಲಾಪುರ ಕಣಿವಿ ಮಾರೆಮ್ಮ ದೇವಿಗೆ ಶುಕ್ರವಾರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿಶೇಷ ಪೂಜೆ ನೆರವೇರಿಸುವುದರೊಂದಿಗೆ, ಬಿಜೆಪಿ ಪಕ್ಷದ ಗೆಲವಿಗಾಗಿ ಟಿಕೆಟ್ ಆಕಾಂಕ್ಷಿಗಳೊಂದಿಗೆ ಮತ ಯಾಚನೆ ಆರಂಭಿಸಿದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಜಿ. ಲಿಂಗನಗೌಡ ಮಾತನಾಡಿ, 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಅವೆಲ್ಲವುಗಳನ್ನು ಮತದಾರರಿಗೆ ತಿಳಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲವಿಗಾಗಿ ಮತ ಯಾಚನೆ ಮಾಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಗಳಿ ಪಂಪಾಪತಿ ಮಾತನಾಡಿದರು. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ. ಶಿವಕುಮಾರ ಮತ್ತು ಸುಗ್ಗೇನಹಳ್ಳಿ ಗ್ರಾಪಂ ಸದಸ್ಯ ಬಿ. ಕರಿಯಪ್ಪ ನಾಯಕ ಜಂಟಿಯಾಗಿ ಮಾತನಾಡಿ, ನಮ್ಮಿಬ್ಬರಲ್ಲಿ ಯಾರೊಬ್ಬರಿಗೆ ಟಿಕೆಟ್ ನೀಡಿದರು ಸಹ ಗೆಲವಿಗಾಗಿ ಅವಿರತ ಶ್ರಮಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ, ಜಿಪಂ ಮಾಜಿ ಉಪಾಧ್ಯಕ್ಷೆ ಮಂಜಮ್ಮ ಮಲ್ಲೇಶ, ಬಿಜೆಪಿ ಮುಖಂಡರಾದ ಸುಗುಣ, ಶಿವಕೃಷ್ಣಮ್ಮ, ಎಸ್. ನಂದೆಪ್ಪ, ಡಿ.ಎಚ್.ಎಂ. ರವೀಂದ್ರ, ಸಿ. ಶರಣಗೌಡ,  ಜೆ. ಶಂಕರ, ವಿ.ಟಿ. ರಾಜು, ಬಂಡಿ ಮಾರೆಪ್ಪ, ಜಿ. ಅಂಜಿನಪ್ಪ, ಕೆ. ಶಿಲ್ಪಾ ನಾಗರಾಜ, ಚಾಗಿ ವೆಂಕಟೇಶ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆ ಆರಂಭ: ಕಂಪ್ಲಿ ಸಮೀಪದ ಮೆಟ್ರಿ ಗ್ರಾಮದ ಸಿದ್ಧಾರೂಢ ಪಾಂಡುರಂಗ ಯುವ ಸೇವಾ ಮಂಡಳಿ ವತಿಯಿಂದ 8ನೇ ವರ್ಷದ ಪಂಡರಾಪುರ ಪಾದಯಾತ್ರೆಯನ್ನು ಶುಕ್ರವಾರ ಆರಂಭಿಸಲಾಯಿತು. ಮೆಟ್ರಿ ಗ್ರಾಮದ ಪಾಂಡುರಂಗ ದೇವರಿಗೆ ಬೆಳಗ್ಗೆ ಪೂಜೆ ಸಲ್ಲಿಸುವುದರೊಂದಿಗೆ, ಪಾದಯಾತ್ರೆ ಆರಂಭಿಸಿದ ಸುಮಾರು 100ಕ್ಕೂ ಹೆಚ್ಚು ಪಾದಯಾತ್ರಿಗಳು ಏ. 21ರವರೆಗೆ ಸತತ 16 ದಿನಗಳ ಕಾಲ ಪಾದಯಾತ್ರೆ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.