ಬಳ್ಳಾರಿ

ಅನಿಲ್ ಲಾಡ್ 288 ಕೋಟಿ ಲಾರ್ಡ್!

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಏ.18
ಐದು ವರ್ಷಗಳಲ್ಲಿ ಅವಧಿಯಲ್ಲಿ ರಾಜ್ಯಸಭಾ ಸದಸ್ಯ, ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಅನಿಲ್ ಲಾಡ್ ಅವರ ಆಸ್ತಿ 111 ಕೋಟಿ ಹೆಚ್ಚಳವಾಗಿದೆ. ಆ ಮೂಲಕ ಇನ್ನೂರು ಕೋಟಿ ರು.ಗಳ ಸರದಾರರಾಗಿದ್ದಾರೆ. ಶ್ರೀರಾಮುಲು ಕೇವಲ 43 ಕೋಟಿ ಗಳಿಸಿದ್ದರೆ, ಅನಿಲ್ ಲಾಡ್ ಅವರ ಆಸ್ತಿ ಶ್ರೀರಾಮುಲು ಅವರಗಿಂತ ಆರು ಪಟ್ಟು ಹೆಚ್ಚು.
ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅನಿಲ್ ಲಾಡ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ತಮ್ಮದು 288.98 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದಾರೆ. 2008ರಲ್ಲಿ ನಡೆದ ಚುನಾವಣೆಯಲ್ಲಿ 177.98 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದರು. ಕಳೆದ ಬಾರಿಗಿಂತ ಈ ಬಾರಿ ರು. 111 ಕೋಟಿ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
ಅವರು ಒಟ್ಟಾರೆಯಾಗಿ 115.49 ಕೋಟಿ ಸ್ಥಿರಾಸ್ತಿ, 144.86 ಕೋಟಿ ಚರಾಸ್ತಿ ಹೊಂದಿದ್ದಾರೆ. 7.67 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರ ಹೊಂದಿದ್ದಾರೆ. (2008ರಲ್ಲಿ 1.15 ಕೋಟಿ ಮೌಲ್ಯದ ಬಂಗಾರ, ಹೆಂಡತಿ ಹೆಸರಿನಲ್ಲಿ 21 ಲಕ್ಷ ಮೌಲ್ಯದ ಚಿನ್ನವಿತ್ತು) 56,996 ನಗದು ಹೊಂದಿದ್ದು, 2.66 ಕೋಟಿ ಮೌಲ್ಯದ ಐಷರಾಮಿ ವಾಹನಗಳನ್ನು ಹೊಂದಿದ್ದಾರೆ. 73.28 ಕೋಟಿ ಸಾಲ ತೋರಿಸಿದ್ದಾರೆ. 120 ಕೋಟಿ ಇತರರಿಗೆ ಸಾಲದ ರೂಪದಲ್ಲಿ ನೀಡಿದ್ದಾರೆ. ಇನ್ನು 35.97 ಕೋಟಿ ಹಣವನ್ನು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. 6.82 ಕೋಟಿ ಮೌಲ್ಯದ ಕೃಷಿ ಭೂಮಿ, 78.74 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, 18.89 ಕೋಟಿ ಮೌಲ್ಯದ ವಾಣಿಜ್ಯ ಮಳಿಗೆಗಳನ್ನು ಹೊಂಂದಿದ್ದಾರೆ.
ಲಾಡ್ ಪತ್ನಿ ಆರತಿ ಹೆಸರಲ್ಲಿ 28.61ಕೋಟಿ ಚರಾಸ್ತಿ ಇದ್ದು, 4.40 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರದ ಅಭರಣಗಳಿವೆ. 45,562 ನಗದು ಇದ್ದು, 98.49 ಲಕ್ಷ ಮೌಲ್ಯದ ವಾಹನ ಹೊಂದಿದ್ದಾರೆ. 5.78 ಕೋಟಿ ಹಣವನ್ನು ನಾನಾ ಕಡೆ ಹೂಡಿಕೆ ಮಾಡಿದ್ದಾರೆ. 1.33 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ ಎಂದು ಘೋಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.