ಲೈಂಗಿಕ ಪ್ರಚೋದನೆ: ಧರ್ಮದೇಟು
ಹೂವಿನಹಡಗಲಿ: ಅರೆ ತಿಳಿವಳಿಕೆಯ ಶಾಲಾ ಬಾಲಕಿಯೊಬ್ಬಳಿಗೆ ಲೈಂಗಿಕ ಪ್ರಚೋದನೆ ನೀಡುತ್ತಿದ್ದ ಯುವಕನಿಗೆ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆಯು ತಾಲೂಕಿನ ಹಿರೇಹಡಗಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದಿದೆ. ಧರ್ಮದೇಟು ತಿಂದ ಯುವಕ ಅದೇ ಗ್ರಾಮದ ಶಬ್ಬೀರ್ (24), ಇವನು ಈ ಶಾಲೆಯ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಗೆ ನಿತ್ಯ ಶಾಲೆಗೆ ಬಂದು ಲೈಂಗಿಕ ಪ್ರಚೋದನೆ ನೀಡುತ್ತಿದ್ದಾನೆಂದು ವಿದ್ಯಾರ್ಥಿನಿ ಪೋಷಕರಿಗೆ ತಿಳಿಸಿದ್ದಾಳೆ.ಈ ಕುರಿತು ಪೋಷಕರು ಸಂಬಂಧಪಟ್ಟ ಶಿಕ್ಷಕರಿಗೆ ವಿಷಯ ಕುರಿತು ದೂರಿದ್ದಾರೆ. ಆದರೂ ಶಾಲೆಯ ಶಿಕ್ಷಕರನ್ನು ಕಣ್ಣು ತಪ್ಪಿಸಿ ಊಟ ಮಾಡುವ ವೇಳೆ ಇಲ್ಲ, ಕ್ರೀಡಾ ಚಟುವಟಿಕೆಗಳು ನಡೆಯುವ ಸಂದರ್ಭದಲ್ಲಿ ಈ ಕೃತ್ಯ ಮಾಡುತ್ತಿದ್ದೇನೆಂದು ವಿದ್ಯಾರ್ಥಿನಿ ದೂರಿದ್ದಾಳೆ. ಇದೇ ದೂರನ್ನು ಶಿಕ್ಷಕರಿಗೆ ಪೋಷಕರು ಪುನಃ ದೂರಿದ್ದಾರೆ. ಗ್ರಾಪಂ ಸದಸ್ಯ ಹಲಗೇರಿ ಸೋಮಶೇಖರ, ಯಲಗಚ್ಚಿನ ಪ್ರಕಾಶ, ಬಳ್ಳೊಳ್ಳಿ ವೀರಣ್ಣ, ಕಾಶಿಗವಿ ಕೊಟ್ರಪ್ಪ, ಮುಖಂಡರಾದ ಆಲೂರು ಶಿವಪುತ್ರಪ್ಪ, ಚರಣರಾಜ ಸೇರಿದಂತೆ ಇತರರು ಈ ಬಗ್ಗೆ ಮಂಗಳವಾರ ಈ ವಿಷಯ ಕುರಿತು ಶಿಕ್ಷಕರಿಗೆ ಮೌಖಿಕವಾಗಿ ಎಚ್ಚರಿಸಿದ್ದಾರೆ. ಲೈಂಗಿಕ ಪ್ರಚೋದನೆ ನೀಡುತ್ತಿದ್ದ ಈ ಶಬ್ಬೀರ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿದ್ಯಾರ್ಥಿನಿಯರಿಗೆ ಆಗಾಗ ನೃತ್ಯ, ಹಾಡು, ನಾಟಕ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಕಲಿಸಲು ನೆಪದಲ್ಲಿ ಆಗಾಗ ಶಾಲೆಗೆ ಬರುತ್ತಿದ್ದ ಎನ್ನಲಾಗಿದೆ. ಶಾಲೆ ಅವಧಿಯಲ್ಲಿ ಹೊರಗಿನ ವ್ಯಕ್ತಿಗಳು ವಿನಾಕಾರಣ ಶಾಲಾ ಆವರಣದೊಳಗೆ ಆಗಮಿಸುವುದನ್ನು ಸೂಕ್ಷ್ಮವಾಗಿ ಗಮನಿಸದೇ ಶಾಲಾ ಶಿಕ್ಷಕರು ಬೇಜವಾಬ್ದಾರಿತನವೇ ಇದಕ್ಕೆಲ್ಲಾ ಕಾರಣ ಎಂದು ಗ್ರಾಮಸ್ಥರು ಶಿಕ್ಷಕರ ವಿರುದ್ಧ ಹರಿಹಾಯ್ದಿದ್ದಾರೆ. ಆದರೂ ತನ್ನ ಚಾಳಿಯನ್ನು ಮುಂದುವರೆದ ಪರಿಣಾಮ ಕೊನೆಗೆ ಗ್ರಾಮಸ್ಥರೇ ಈ ಯುವಕನಿಗೆ ಬುಧವಾರ ಧರ್ಮದೇಟು ನೀಡಿದ್ದಾರೆ.
40 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಕುಷ್ಟಗಿ: ಡಿಪಿಟಿ ಚುಚುಮದ್ದು ಹಾಕಿಸಿಕೊಂಡ 40 ವಿದ್ಯಾರ್ಥಿಗಳಿಗೆ ಮೈಕೈ ಊದಿಕೊಂಡು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಜೆ ನಡೆದಿದೆ. ಕಂದಕೂರು ಸ.ಹಿ.ಪ್ರಾ. ಶಾಲೆ 70 ಮಕ್ಕಳಿಗೆ ಗುರುವಾರ ಮಧ್ಯಾಹ್ನ ಕುಷ್ಟಗಿ ಸರ್ಕಾರಿ ಆಸ್ಪತ್ರೆ ನರ್ಸ್ ಚುಚುಮದ್ದು ನೀಡಿದ್ದರು. ಸಂಜೆ ವೇಳೆಗೆ ಮಕ್ಕಳ ದೇಹ ಊದಿಕೊಂಡಿದೆ. ಇದರಿಂದ ಆತಂಕಗೊಂಡ ಪಾಲಕರು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆಗ ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು ಮತ್ತು ಡಾ. ವಿ.ಜಿ. ಹಳ್ಳಳ್ಳಿ ಗ್ರಾಮಕ್ಕೆ ಭೇಟಿ ತಪಾಸಣೆ ಮಾಡಿದರು. ಸದ್ಯ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ. ಡಿಪಿಟಿ ಚುಚ್ಚುಮದ್ದು ನೀಡಿದಾಗ ದೇಹ ಊದಿಕೊಳ್ಳುವುದು ಸ್ವಾಭಾವಿಕ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಆನಂದ ಗೋಟೂರು ತಿಳಿಸಿದ್ದಾರೆ. ಡಾ. ಶಕುಂತಲಾ, ಕೆ.ಎಸ್. ರೆಡ್ಡಿ, ಡಾ. ದಂಡಿನ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

