ಇಂದು ಯಕ್ಷಗಾನ ಪ್ರದರ್ಶನ
ಹೊಸಪೇಟೆ: ಇಲ್ಲಿನ ಕರ್ನಾಟಕ ಕಲಾಭಿಮಾನಿ ಸಂಘದಿಂದ ಸನ್ಮಾನ ಸಮಾರಂಭ ಹಾಗೂ ಯಕ್ಷಗಾನ ಪ್ರದರ್ಶನ ನಗರದ ಪಂಪಾ ಕಲಾಮಂದಿರದಲ್ಲಿ ಆ. 3ರಂದು ಸಂಜೆ 6.30ಕ್ಕೆ ನಡೆಯಲಿದೆ. ಕಾಂಗ್ರೆಸ್ ಮುಖಂಡ ದೀಪಕ್ ಕುಮಾರ್ ಸಿಂಗ್ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಪಿ. ಗುರುರಾಜ್ ಭಟ್ ಅಧ್ಯಕ್ಷತೆ ವಹಿಸುವರು. ರಂಗ ಕಲಾವಿದೆ ಎಸ್. ರೇಣುಕಾ ಹಾಗೂ ಯಕ್ಷಗಾನ ಭಾಗವತ ಎಸ್. ರಾಮಕೃಷ್ಣಮಯ್ಯರನ್ನು ಸನ್ಮಾನಿಸಲಾಗುವುದು. ಸಂಘದ ಕಾರ್ಯದರ್ಶಿ ಡಾ. ಮೋಹನ್ ಕುಂಟಾರ್, ಡಾ. ಬಿ.ವಿ. ಭಟ್, ರಂಗ ತಜ್ಞ ಮ.ಬ. ಸೋಮಣ್ಣ ಭಾಗವಹಿಸುವರು. ಸಂಜೆ 7ಕ್ಕೆ ಧರ್ಮಸ್ಥಳದ ನಿಡ್ಲೆಯ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಮಹಾರಥಿ ಕರ್ಣ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಕೂಡ್ಲಿಗಿ: ತಾಲೂಕಿನ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವ ನಿಮಿತ್ತ ವಂದೇಮಾತರಂ ಜನಜಾಗೃತಿ ವೇದಿಕೆ ವತಿಯಿಂದ ಆ.7ರಂದು ಇಲ್ಲಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ವಿವಿಧ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ, ಡಿ. ಇಡಿ., ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ, ಪಿಯುಸಿ ಮತ್ತು ಐಟಿ ಐ ವಿದ್ಯಾರ್ಥಿಗಳಿಗೆ ಭಯೋತ್ಪಾದನೆ, ಖಾಸಗೀಕರಣ, ಮತಾಂಧ ರಾಜಕಾರಣ ಮುಕ್ತ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ, 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ವೀರ ಮಹಿಳೆಯರ ಪಾತ್ರ ಕುರಿತು ಪ್ರಬಂಧ ಏರ್ಪಡಿಸಲಾಗಿದೆ. ಪ್ರತಿ ಕಾಲೇಜಿನಿಂದ ಓರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಅವಕಾಶವಿದೆ. ಕಾಲೇಜು ಮುಖ್ಯಸ್ಥರಿಂದ ಅನುಮತಿ ಪತ್ರದ ಜತೆ ಸ್ವ ವಿವರದೊಂದಿಗೆ ಪಟ್ಟಣದ ಭುವನೇಶ್ವರಿ, ಶಿವು ಬುಕ್ ಸ್ಟಾಲ್, ಬಸವರಾಜ್ ಆರ್ಟ್ಸ್ ಅಂಗಡಿಯಲ್ಲಿ ಆ. 5ರೊಳಗೆ ನೋಂದಾಯಿಸಬೇಕು.
ರುದ್ರೇಶ್ ಕೊಲೆ: ಬಂಧನ
ಹೊಸಪೇಟೆ: ತಾಲೂಕಿನ ಕಮಲಾಪುರದಲ್ಲಿ ಇತ್ತೀಚಿಗೆ ಬೈಲೂರು ರುದ್ರೇಶ್ (35) ಕೊಲೆಗೆ ಸಂಬಂ ಧವಾಗಿ ಐವರನ್ನು ಶುಕ್ರವಾರ ಕಮಲಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಬೈಲೂರು ರುದ್ರೇಶ್ನನ್ನು ಇತ್ತೀಚೆಗೆ ಕೊಲೆ ಮಾಡಿ ದೇಹವನ್ನು ಕಮಲಾಪುರ ಸಮೀಪದಲ್ಲಿರುವ ಎಚ್ಪಿಸಿ ಕಾಲುವೆಯಲ್ಲಿ ಎಸೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕಮಲಾಪುರ ಪೊಲೀಸರು ತನಿಖೆ ನಡೆಸಿ, ಪರಶುರಾಮ, ನೀಲಮ್ಮ, ಪೂಜಾರಿ ನೀಲಪ್ಪ, ಯಲ್ಲಪ್ಪ, ಕೆಂಚಪ್ಪ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ ನೇತೃತ್ವದಲ್ಲಿ ಸಿಪಿಐ ಹನುಮಂತಪ್ಪ ಹಾಗೂ ಪಿಎಸ್ಐ ವೈ.ಎಸ್. ಹನುಮಂತಪ್ಪ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಗತಿಕ ಸ್ತನ್ಯಪಾನ ಜಾಗೃತಿ ಜಾಥಾ, ಬೀದಿ ನಾಟಕ
ಬಳ್ಳಾರಿ: ಜಾಗತಿಕ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ, ಇಂಡಿಯನ್ ಆಕಾಡೆಮಿ ಪಿಡಿಯಾಟ್ರಿಕ್ಸ್, ವಿಮ್ಸ್ ಸೇರಿದಂತೆ ವಿವಿಧ ವೈದ್ಯ ಸಂಘಟನೆಗಳು ಬಳ್ಳಾರಿ ನಗರದಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ಬೀದಿ ನಾಟಕವನ್ನು ಶುಕ್ರವಾರ ಹಮ್ಮಿಕೊಂಡಿದ್ದವು.
ನಗರದ ಐಎಂಎ ಹಾಲ್ನಲ್ಲಿ ಸಭೆ ಸೇರಿದ ಬಳ್ಳಾರಿಯ ಪ್ರಮುಖ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಶುಕ್ರವಾರ ಬೆಳಗ್ಗೆ 9ಕ್ಕೆ ಜಾಗೃತಿ ಜಾಥಾ ಆರಂಭಿಸಿ, ನಗರದ ಗಡಿಗಿ ಚನ್ನಪ್ಪ ವೃತ್ತದ ಮೂಲಕ ಮೋತಿ ಸರ್ಕಲ್ಗೆ ತೆರಳಿದ ಜಾಗೃತಿ ಜಾಥಾ ಜಾಗತಿಕ ಸ್ತನ್ಯಪಾನ ಕುರಿತು ಜಾಗೃತಿ ಮೂಡಿಸಲಾಯಿತು. ಆ. 4ರಂದು ವಿಮ್ಸ್ ಶಿಕ್ಷಕರ ಭವನದಲ್ಲಿ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳಿಗೆ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಆ. 7ರ ವರೆಗೆ ಸ್ತನ್ಯಪಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ. ಯೋಗಾನಂದ ರೆಡ್ಡಿ, ವಿಮ್ಸ್ ನಿರ್ದೇಶಕ ಡಾ. ಲಕ್ಷ್ಮಿನಾರಾಯಣ ರೆಡ್ಡಿ, ವೈದ್ಯರಾದ ಡಾ.ಬಿ.ಕೆ. ಶ್ರೀಕಾಂತ್, ಡಾ. ಮರಿರಾಜ್, ಡಾ. ರವಿಶಂಕರ್, ಡಾ. ಭಾನುಪ್ರಸಾದ್, ಡಾ. ಅಜಿತ್ಕುಲಕರ್ಣಿ, ಡಾ. ಆಶಾರಾಣಿ, ಡಾ. ಅಜಯ್, ಡಾ. ರವಿಶಂಕರ್ ಸೇರಿದಂತೆ 300ಕ್ಕೂ ಹೆಚ್ಚು ವೈದ್ಯರು, ವೈದ್ಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

