ರುದ್ರಾಕ್ಷಿ ಪ್ರದರ್ಶನ, ಮಾರಾಟ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.7
ನಗರದಲ್ಲಿರುವ ಗುಡ್ಲಕ್ ಹೋಟೆಲ್ನಲ್ಲಿ ಆ.7ರಿಂದ ರುದ್ರಾಕ್ಷಿ ಪ್ರದರ್ಶನ ಮೇಳ ಶುರುವಾಗಿದೆ. 50 ರುಪಾಯಿಯ ಪಂಚಮುಖಿ ರುದ್ರಾಕ್ಷಿಯಿಂದ ಹಿಡಿದು 25 ಸಾವಿರ ಮೌಲ್ಯದ 14 ಮುಖಗಳ ರುದ್ರಾಕ್ಷಿಗಳವರೆಗೂ ಇಲ್ಲಿ ತರಹೇವಾರಿ ರುದ್ರಾಕ್ಷಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.
ನೇಪಾಳ ಮೂಲದ ರುದ್ರಾಕ್ಷಿ ಎಂಪೋರಿಯಂ ಗುಲ್ಬರ್ಗಕ್ಕೆ ತರಲಾಗಿದ್ದು ಆ.13ರವರೆಗೂ ಮೇಳ ನಡೆಸಲಾಗುತ್ತದೆ. ಆ.8ರಂದು ಮೇಳಕ್ಕೆ ಬರುವ ಎಲ್ಲರಿಗೂ ಪಂಚಮುಖಿ ರುದ್ರಾಕ್ಷಿ ಉಚಿತವಾಗಿ ನೀಡಲಾಗುತ್ತದೆ ಎಂದು ಮೇಳದ ಮುಖ್ಯಸ್ಥರಾದ ಕಾಶಿ, ಸತ್ಯ ಹಾಗೂ ಶ್ರೀನಿವಾಸ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ತುಳಸಿ ಮಾಲೆ, ಸ್ಫಟಿಕ ಶಿಲೆ, ಸಾಲಿಗ್ರಾಮ ಶಿಲೆಗಳು ಮೂಲ ನೇಪಾಳದ ಗಂಡಕಿ ನದಿಯಿಂದಲೇ ತರಲಾಗಿದ್ದು ಅವುಗಳನ್ನೆಲ್ಲ ಪ್ರದರ್ಶನದಲ್ಲಿ ಇಡಲಾಗಿದೆ ಎಂದು ಹೇಳಿದ್ದಾರೆ. ಏಕಮುಖ ರುದ್ರಾಕ್ಷದಿಂದ ಆರಂಭವಾಗಿ ಚತುರ್ದಶಮುಖ ರುದ್ರಾಕ್ಷಿಗಳವರೆಗೂ ಇಲ್ಲಿ ಪ್ರದರ್ಶನದಲ್ಲಿ ರುದ್ರಾಕ್ಷಿಗಳ ಪ್ರದರ್ಶನವಿದೆ.
ಕಳೆದ 2006ರಿಂದ ಗುಲ್ಬರ್ಗದಲ್ಲಿ ಮೇಳ ನಡೆಸಲಾಗುತ್ತಿದ್ದು ಹೆಚ್ಚಿನ ಸ್ಪಂದನೆ ದೊರಕುತ್ತಿದೆ. ಶ್ರಾವಣ ಮಾಸ ಹಾಗೂ ಶಿವರಾತ್ರಿ ಸುತ್ತಮುತ್ತ ಗುಲ್ಬರ್ಗಕ್ಕೆ ವಾರ, 2 ವಾರ ಬಂದು ಹೋಗುತ್ತೇವೆ ಎಂದು ನೇಪಾಳ ರುದ್ರಾಕ್ಷಿ ಎಂಪೋರಿಯಂ ಸತ್ಯಂ ಹೇಳಿದ್ದಾರೆ. ರುದ್ರಾಕ್ಷಿ ತೈಲವೂ ಪ್ರದರ್ಶನದಲ್ಲಿ ಲಭ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

