ಬಳ್ಳಾರಿ

ಅಪರಿಚಿತ ಶವ ಪತ್ತೆ: ದೂರು

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 20
ಅಪರಿಚಿತ ಮಹಿಳೆಯ ಶವವೊಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
ಠಾಣಾ ವ್ಯಾಪ್ತಿಯ ತಿರುಮಲನಗರ ಬಿ. ಕ್ಯಾಂಪಿನ ಪೊಲೇರಮ್ಮ ಗುಡಿಯ ಬಳಿಯಿರುವ ಬಿಸಲಹಳ್ಳಿ ಆಚಾರಿಯವರ ಹೊಲದ ಕಾಲುವೆ ನೀರಿನಲ್ಲಿ ಆ. 17ರಂದು ಅಪರಿಚಿತ ಮಹಿಳೆಯ ಶವ ಬೋರಲಾಗಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಡಿ. ಸುರೇಂದ್ರಾಚಾರ್ ಅವರ ಲಿಖಿತ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಮೃತ ಮಹಿಳೆಯು ಅಂದಾಜು 45ರಿಂದ 50 ವಯೋವಾನದವಳಾಗಿದ್ದು, 4.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಕಪ್ಪು ಮೈಬಣ್ಣ ಹೊಂದಿದ್ದಾಲೆ. ಹಸಿರು ಬಣ್ಣದ ಕುಪ್ಪಸ, ಕೆಂಪು ಬಣ್ಣದ ಕಾಟನ್ ಲಂಗ ತೊಟ್ಟಿದ್ದಾಳೆ. ಮೃತಳ ವಾರಸುದಾರರು ಇದ್ದಲ್ಲಿ ಕೂಡಲೆ ಪೊಲೀಸ್ ಕಂಟ್ರೋಲ್ ರೂಂ- 08392-258100 ಅಥವಾ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ-08392-276461, 9480803049ನ್ನು ಸಂಪರ್ಕಿಸಬೇಕು ಎಂದು ಪಿಎಸ್‌ಐ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.