ಬಳ್ಳಾರಿ

ಅರಸು, ರಾಜೀವ್ ಜನ್ಮದಿನಾಚರಣೆ

Published On :

ಬಳ್ಳಾರಿ: ಬಳ್ಳಾರಿಯ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಬುಧವಾರ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ 69ನೇ ಜಯಂತಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರ 98ನೇ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಪಕ್ಷದ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಮಾತನಾಡಿ, ರಾಜೀವ್‌ಗಾಂಧಿಯವರು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಮತದಾನದ ಹಕ್ಕನ್ನು 21ರಿಂದ 18ನೇ ವಯಸ್ಸಿಗೆ ಇಳಿಸಿದರು. ವಿಶೇಷವಾಗಿ ಮಾಹಿತಿ ತಂತ್ರಜ್ಞಾನ, ಕೈಗಾರೀಕರಣ, ಪಂಚವಾರ್ಷಿಕ ಯೋಜನೆಗಳು, ಹೀಗೆ ಅನೇಕ ಕಾರ್ಯಕ್ರಮಗಳನ್ನು ನೀಡಿ ಚಿಕ್ಕ ವಯಸ್ಸಿನಲ್ಲೇ ದೇಶದ ಪ್ರಧಾನಮಂತ್ರಿಗಳಾಗಿದ್ದರು.
ಕಂದಾರಿ ನಾಗರಾಜ್, ಗುಜ್ಜಲ ಗಾದಿಲಿಂಗಪ್ಪ, ಕೊಳಗಲ್ ಅಂಜಿನಿ, ಬಾಪೂಜಿ ನಗರ ವೆಂಕಟೇಶ್, ಜೆ.ಜೆ. ಶಿವಕುಮಾರ್, ಕುರಿಹಟ್ಟಿ ವಿಜಿ, ಕುಡಿತಿನಿ ರಾಮಾಂಜಿನಿ, ಜಯರಾಮರೆಡ್ಡಿ, ಸುಬ್ಬಾರಾಯ್ಡು, ಎಸ್ಪಿ ಸರ್ಕಲ್ ವೆಂಕಟೇಶ್, ಕೃಷ್ಣ, ಶಂಕರ್, ಪಲ್ಲಿಕಮಲ್ಲಿ, ಏಳುಬೆಂಚಿ ಅಂಬರೀಶ್, ಹಲಕುಂದಿ ಕೇಶವ, ಬಿ. ಗಂಗಾಧರ, ಜೆ.ಪಿ.ಜಿ. ವೀರೇಶ್, ರಾಘವೇಂದ್ರ, ಶಿವರಾಮ, ಎಚ್.ಕೆ. ಶ್ರೀಕಾಂತ, ಕಪ್ಪಗಲ್ ಧನಂಜಯ, ವೀರನಗೌಡ ಸೇರಿದಂತೆ ಇತರರಿದ್ದರು. ಬಿ.ಎಂ. ಪಾಟೀಲ್ ನಿರೂಪಿಸಿದರು. ಜೆ.ವಿ. ಮಂಜುನಾಥ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.