ಠೇವಣಿ ಸಂಗ್ರಹ ವಿಶೇಷ ಅಭಿಯಾನ
ಬಳ್ಳಾರಿ: ಸಿಂಡಿಕೇಟ್ ಬ್ಯಾಂಕ್ ತನ್ನ ಗ್ರಾಹಕರ ಹಿತಾಸಕ್ತಿ ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಚಾಲ್ತಿ ಮತ್ತು ಉಳಿತಾಯ ಠೇವಣಿ ಸಂಗ್ರಹಣೆಯ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. ಆ. 20ರಿಂದ ಅಭಿಯಾನ ಪ್ರಾರಂಭವಾಗಿದ್ದು, ಅ. 31ರ ವರೆಗೆ ನಡೆಯಲಿದೆ. ಅಭಿಯಾನದ ಮೂಲಕ ಗ್ರಾಹಕರಿಗೆ ಇನ್ಸೆಂಟ್ ಗ್ಲೋಬಲ್ ಡೆಬಿಟ್ ಕಾರ್ಡ್ (ವೀಸಾ ಮ್ಯಾಸ್ಟ್ರೋ), ಮೊಬೈಲ್ ಬ್ಯಾಂಕಿಂಗ್, ಎಸ್ಎಂಎಸ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎನ್ಇಎಫ್ಟಿ, ಆರ್ಟಿಜಿಎಸ್ ಸೌಕರ್ಯಗಳು, ದೇಶದ ಯಾವುದೇ ಶಾಖೆಯಲ್ಲಿ ವ್ಯವಹರಿಸುವ ಸೌಲಭ್ಯ, ಐಚ್ಚಿಕ ಫ್ಲೆಕ್ಸಿ ಖಾತೆಗಳ ಸೌಲಭ್ಯ, ಉಳಿತಾಯ ಖಾತೆದಾರರಿಗೆ ಸಿಂಡ್ ಸುರಕ್ಷೆ ವಿಮೆ ಸೌಲಭ್ಯ, ಬ್ಯಾಂಕಿನ ಎಲ್ಲ ಗ್ರಾಹಕರಿಗೆ ಸಿಂಡ್ ಆರೋಗ್ಯ ವಿಮೆ ಸೌಲಭ್ಯ (ಮೆಡಿಕ್ಲೇಮ್ ಕವಚ), ವ್ಯಾಪಾರ ಮಳಿಗೆಗಳಲ್ಲಿ ಬ್ಯಾಂಕಿನ ಪಿಓಎಸ್ ಮಷಿನ್ಗಳ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಎ.ವಿ. ವಸಂತಕುಮಾರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸೆ. 15ರಂದು ರಾಷ್ಟ್ರಮಟ್ಟದ ಸ್ಪರ್ಧೆ
ಬಳ್ಳಾರಿ: ಇಂಡಿಯನ್ ಅಬ್ಯಾಕಸ್ ಲೀಗ್ನಿಂದ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಸೆ. 15ರಂದು ಜಿಲ್ಲೆಯ ಹೊಸಪೇಟೆಯ ಸಿದ್ಧಾರ್ಥ ರೆಸಿಡೆನ್ಸಿಯಲ್ಲಿ ಏರ್ಪಡಿಸಿದೆ. ದೇಶದ ಒಟ್ಟು 12 ಪ್ರದೇಶಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಈಗಾಗಲೇ ಮೈಸೂರಿನಲ್ಲಿ ಆಯೋಜಿಸಿದ್ದ ಸ್ಪರ್ಧೆ ಯಶಸ್ವಿಯಾಗಿದೆ. ಎರಡನೇಯದಾಗಿ ಹೊಸಪೇಟೆಯಲ್ಲಿ ಹಮ್ಮಿಕೊಂಡಿದೆ. ಇದಾದ ನಂತರ ಇನ್ನು 8 ಹಂತಗಳಲ್ಲಿ ಸ್ಪರ್ಧೆಯು ನಡೆಯಲಿದೆ. ಪ್ರತಿ ಹಂತದಲ್ಲೂ 10 ಬಹುಮಾನಗಳನ್ನು ವಿತರಿಸಲಾಗುವುದು. ಈ ಸ್ಪರ್ಧೆಯಲ್ಲಿ ವಿಜೇತರಾದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವರು. ಮಾಹಿತಿಗಾಗಿ 8904403494ಗೆ ಸಂಪರ್ಕಿಸಬಹುದು ಎಂದು ಲೀಗ್ನ ಸಂಯೋಜಕಿ ಎಲ್. ನಂದಿನಿ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ತಪಾಸಣೆ
ಬಳ್ಳಾರಿ: ಭಾರತೀಯ ರೆಡ್ಕ್ರಾಸ್ ಸಂಸ್ಥೆ, ವಿಮ್ಸ್, ಬಾಲಕಾರ್ಮಿಕ ಯೋಜನಾ ಸಂಘ, ಹೊಸಪೇಟೆಯ ರೋಟರಿ ಕ್ಲಬ್ ಮತ್ತು ರೋಟರಿ ಇನ್ನರ್ ವ್ಹೀಲ್, ಮತ್ತಿತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆ. 23ರಂದು ಹೊಸಪೇಟೆಯ ರೋಟರಿ ಭವನದಲ್ಲಿ ಬಾಲಕಾರ್ಮಿಕ ಶಾಲೆಯ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಶಿಬಿರ ಏರ್ಪಡಿಸಲಾಗಿದೆ ಎಂದು ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ. ನಾಗರಾಜ್ರಾವ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

