ಕಳ್ಳತನ ಪ್ರಕರಣ: ಅಪರಾಧಿ ಬಂಧನ
ಕೊಟ್ಟೂರು: ಅಂಗಡಿಗಳ ಮೇಲ್ಛಾವಣಿ ತೆಗೆದು ಕಳ್ಳತನ ಮಾಡುವುದನ್ನೇ ಕಾಯಕವನ್ನಾಗಿರಿಸಕೊಂಡು ತಿರುಗಾಡುತ್ತಿದ್ದ ಯುವಕನೋರ್ವನನ್ನು ಸೆರೆ ಹಿಡಿದ ಕೊಟ್ಟೂರು ಅಪರಾಧ ವಿಭಾಗದ ಪೊಲೀಸರು ಪಟ್ಟಣದಲ್ಲಿ ಜರುಗಿದ ಅನೇಕ ಕಳ್ಳತನಗಳ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಯುವಕನನ್ನು ಹೂವಿನಹಡಗಲಿ ತಾಲೂಕು ಹೊಳಗುಂದಿ ಗ್ರಾಮದ ಕಾಶಿಮಠದ ಕಲ್ಲೇಶ (20) ಎಂದು ಗುರುತಿಸಲಾಗಿದೆ. ಆತನ ಬಳಿ ಇದ್ದ ಅನೇಕ ವಸ್ತುಗಳನ್ನು ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ದಶರಥ ನೇತೃತ್ವದ ತಂಡ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದೆ.
ಇಲ್ಲಿನ ಗುರುದೇವ ಪ್ರಾಥಮಿಕ ಶಾಲೆಯ ಬೀಗ ಮುರಿದು ಪ್ರತಿದಿನ ಅಲ್ಲಿಯೇ ಮಲಗುವುದಕ್ಕೆ ಆರೋಪಿ ಆಶ್ರಯ ಮಾಡಿಕೊಂಡಿದ್ದ. ಈ ಕುರಿತು ಶಾಲಾ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಸುದ್ದಿ ರವಾನಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಕಲ್ಲೇಶನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪಟ್ಟಣದಲ್ಲಿ ನಡೆದ ಅನೇಕ ಕಳ್ಳತನಕ್ಕೆ ತಾನೇ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾನೆ ಎಂದು ಪಿಎಸ್ಐ ತಿಳಿಸಿದ್ದಾರೆ.
ಕೊಟ್ಟೂರಿನ ಸತ್ಯಾನಾರಾಯಣ ಎಲೆಕ್ಟ್ರಾನಿಕ್ಸ್ನಲ್ಲಿ ರು. 5,750 ಮೌಲ್ಯದ ಟೇಪ್ ರೆಕಾರ್ಡ್ರ್, ಟಿವಿ, ಸ್ಪೀಕರ್, ಸಿಎಂಕೆ ಪಾನ್ ಷಾಪ್, ಶಿವ ಟೆಲಿಲಿಂಕ್ಸ್, ಚಂದನ ಕಂಪ್ಯೂಟರ್ಸ್, ಪ್ರಕಾಶ ಹೋಟೆಲ್, ರೇಣುಕಾ ವಾಚ್ ಸೆಂಟರ್, ಶಿವಮೂರ್ತೆಯ್ಯ ಇವರ ಪಾನ್ ಷಾಪ್ ಅಂಗಡಿಗಳ ಮೇಲ್ಛಾವಣಿ ತೆಗೆದು ಕೆಲ ತಿಂಗಳ ಹಿಂದೆ ಆರೋಪಿ ಕಾಶಿಮಠದ ಕಲ್ಲೇಶ ನಗದು ಹಣ, ಇತರ ಸಾಮಗ್ರಿಗಳನ್ನು ಕಳವು ಮಾಡಿದ್ದ. ಸಿಪಿಐ ವಿ.ಎಚ್. ವಿಜಯಕುಮಾರ್ ಮಾರ್ಗದರ್ಶನದಲ್ಲಿ ಈತನನ್ನು ಬಂಧಿಸಲಾಯಿತು ಎಂದು ಪಿಎಸ್ಐ ದಶರಥ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

