ಬಳ್ಳಾರಿ

ಉತ್ತಮ ಆಡಳಿತ: ಹರ್ಷವರ್ಧನ್

Published On :

ಕೊಟ್ಟೂರು: ಜೆಡಿಎಸ್‌ನಲ್ಲಿ ಗುರುತಿಸಿಕೊಳ್ಳುವ ಮೂಲಕ ಪಟ್ಟಣ ಪಂಚಾಯಿತಿ ಆಡಳಿತವನ್ನು ಹೊಂದಿ ಜನತೆಗೆ ಉತ್ತಮ ಆಡಳಿತ ನೀಡುತ್ತೇವೆ. ಇದನ್ನು ಹೊರತುಪಡಿಸಿ ಬೇರೆ ಯಾವ ಯೋಚನೆ ಇಲ್ಲ ಎಂದು ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಸ್ಪಷ್ಟಪಡಿಸಿದರು.
ಮಂಗಳವಾರ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಕಾಲಕ್ಕೆ ತಮ್ಮೊಂದಿಗೆ ಪಪಂನ ಬಹುತೇಕ ಸದಸ್ಯರು ಜೆಡಿಎಸ್ ಸೇರ್ಪಡೆಗೊಂಡು  ಭೀಮಾನಾಯ್ಕ ಗೆಲವಿಗೆ ಶ್ರಮಿಸಿದೆವು. ಅವರ ನೇತೃತ್ವದಲ್ಲಿ ಇದೀಗ ಈ ಪಕ್ಷದ ಮೂಲಕ ಅಧಿಕಾರ ಹೊಂದುತ್ತೇವೆ. 18 ಸದಸ್ಯರನ್ನು ಜೆಡಿಎಸ್ ಹೊಂದಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಎಸ್‌ಟಿ), ಉಪಾಧ್ಯಕ್ಷ ಸ್ಥಾನ 2ಎ (ಓಬಿಸಿ)ಗೆ ನಿಗಧಿಗೊಂಡಿದೆ. ಎರಡೂ ಸ್ಥಾನಕ್ಕು ಸರ್ವಸಮ್ಮತವಾಗಿ ಆಯ್ಕೆ ಮಾಡುತ್ತೇವೆ. ಯಾವುದೇ ಗೊಂದಲವಿಲ್ಲದೇ ಆಯ್ಕೆ ನಡೆಯಲಿದೆ ಎಂದು ಹೇಳಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಹೊಣೆ ಶಾಸಕ ಭೀಮಾನಾಯ್ಕ ಮತ್ತು ತಮ್ಮ ಮೇಲಿದೆ. ಪ್ರತಿ ಸದಸ್ಯರು ತಮ್ಮಿಬ್ಬರ ಆಯ್ಕೆಗೆ ಒಲವು ತೋರಿಸಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ 8 ಆಕಾಂಕ್ಷಿಗಳಾಗಿದ್ದಾರೆ. ಯಾರೊಬ್ಬರೂ ಅಸಮಧಾನಗೊಳ್ಳದ ರೀತಿ ಆಯ್ಕೆ ಪ್ರಕ್ರಿಯೆ ನಡೆಸುತ್ತೇವೆ. ಪಟ್ಟಣದ ಜನತೆ ವಿಶ್ವಾಸ ಹೊಂದಿ ತಮ್ಮನ್ನು ಬೆಂಬಲಿಸಿದ್ದಾರೆ. ಜನತೆಯ ವಿಶ್ವಾಸಕ್ಕೆ ಎಂದೂ ದ್ರೋಹ ಬಗೆಯದೆ ಮಾದರಿ ಆಡಳಿತ ನೀಡುವತ್ತ ಗಮನ ಹರಿಸುವಂತೆ ಈಗಾಗಲೆ ಎಲ್ಲ ಸದಸ್ಯರಿಗೆ ತಾವು ಸೂಚಿಸಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.