ಬಳ್ಳಾರಿ

ನಾಳೆ ರಸಗ್ರಹಣ, ಚಿಗುರು

Published On :

ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಡಿ. 14ರಂದು ರಸಗ್ರಹಣ ಹಾಗೂ ಚಿಗುರು ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 10.30ಕ್ಕೆ ನಗರದ ನಂದಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದು, ಎಸ್.ಕೆ.ಆರ್. ಜಿಲಾನಿ ಬಾಷಾ ಅವರು ನೃತ್ಯ ಪ್ರದರ್ಶಿಸಲಿದ್ದಾರೆ. ಚಿಗುರು ಕಾರ್ಯಕ್ರಮ ಅಂದು ಸಂಜೆ 5 ಗಂಟೆಗೆ ಹೊಸಪೇಟೆ ತಾಲೂಕು ಕಂಪ್ಲಿಯ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಎಂ. ಅಮೂಲ್ಯ ಭರತ ನಾಟ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ತಿಳಿಸಿದ್ದಾರೆ.
ಜೀವಾವಧಿ ಶಿಕ್ಷೆ, ದಂಡ
ಬಳ್ಳಾರಿ: ಸಂಡೂರು ತಾಲೂಕಿನ ಭುಜಂಗನಗರ ಗ್ರಾಮದ ತಿಪ್ಪೇಶ ಎನ್ನುವ ವ್ಯಕ್ತಿಯನ್ನು ದುರುದ್ದೇಶದಿಂದ ವಿಷಪ್ರಾಶನ ಮಾಡಿಸಿ ಕೊಲೆ ಮಾಡಿದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯೊಂದಿಗೆ ದಂಡ ವಿಧಿಸಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ. 11ರಂದು ತೀರ್ಪು ನೀಡಿದೆ.
ಅದೇ ಗ್ರಾಮದ ಆರ್‌ಎಂಪಿ ಡಾಕ್ಟರ್, ಎನ್. ನಾಗರಾಜ್ ಹಾಗೂ ಈತನ ಸ್ನೇಹಿತ ಹಾಲು ರಾಮೇಶ್ವರ ಎಂಬುವರೇ ಶಿಕ್ಷೆಗೊಳಗಾದವರು. ಇತ್ತೀಚೆಗೆ ನಾಗರಾಜನ ವೈದ್ಯಕೀಯ ವೃತ್ತಿ ಸರಿಯಾಗಿ ನಡೆಯುತ್ತಿರಲಿಲ್ಲವಾದ್ದರಿಂದ ಇದಕ್ಕೆಲ್ಲಾ ತಿಪ್ಪೇಶನೇ ಕಾರಣ ಎಂಬ ದುರ್ಬದ್ಧಿಯಿಂದ ಸ್ನೇಹಿತ ಹಾಲು ರಾಮೇಶ್ವರನೊಡಗೂಡಿ ಐಸ್‌ಕ್ರೀಂನಲ್ಲಿ ವಿಷವನ್ನು ಬೆರೆಸಿ ತಿಪ್ಪೇಶನಿಗೆ ತಿನ್ನಿಸಿದ್ದರಿಂದ ವಾಂತಿಯಾಗಿ ಚೇತರಿಸಿಕೊಳ್ಳದೆ ಆತ 2011ರ ಆ. 2ರಂದು ಸಂಜೆ 4.15ಕ್ಕೆ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆಂದು ನ್ಯಾಯಾಧೀಶ ಬಸವರಾಜ ಗುದ್ಲಿ ನಡೆಸಿದ ವಿಚಾರಣೆಯಿಂದ ರುಜುವಾತಾಗಿದೆ. ಹಾಗಾಗಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯೊಂದಿಗೆ ರು. 50 ಸಾವಿರ ದಂಡ ವಿಧಿಸಲಾಗಿದೆ.
ಕಲಂ 302 ಐಪಿಸಿ ಅಡಿ ಈ ಶಿಕ್ಷೆ ನೀಡಲಾಗಿದೆ. ತೋರಣಗಲ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಪ್ರಧಾನ ಸರ್ಕಾರಿ ಅಭಿಯೋಜಕ ಎಂ.ಎ. ಬ್ಯಾಳಿರೊಟ್ಟಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.