ಪಡಿತರ ಅಕ್ರಮ ದಾಸ್ತಾನು ವಶ
ಬಳ್ಳಾರಿ: ಅಕ್ರಮವಾಗಿ ದಾಸ್ತಾನು ಮಾಡಿದ್ದ 30 ಕ್ವಿಂಟಲ್ ಪಡಿತರ ಅಕ್ಕಿ ಹಾಗೂ 5 ಕ್ವಿಂಟಲ್ ಗೋದಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಗರದ ನಾಗಯ್ಯ ಚೌಧರಿ ಶಾಲೆ ಹಿಂದುಗಡೆ ನಡೆದಿದೆ. ನಾಗಯ್ಯ ಚೌಧರಿ ಶಾಲೆಯ ಹಿಂದುಗಡೆಯ ಗುಡಿಸಲಿನಲ್ಲಿ ಅಕ್ರಮವಾಗಿ ಪಡಿತರ ಧಾನ್ಯಗಳನ್ನು ದಾಸ್ತಾನು ಮಾಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ರವಿಕುಮಾರ್ ಹಾಗೂ ಕೌಲ್ಬಜಾರ್ ಪೊಲೀಸರು ಜಂಟಿಯಾಗಿ ದಾಳಿ ಮಾಡಿ, ರು. 34 ಸಾವಿರ ಮೌಲ್ಯದ ಅಕ್ಕಿ ಹಾಗೂ ಗೋದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೌಲ್ಬಜಾರ್ನ ಕವಾಡಿಬೀದಿ ನಿವಾಸಿ ಇಲಿಯಾಸ್ ಎಂಬುವವರು ದಾಸ್ತಾನು ಮಾಡಿದ್ದರು. ಈ ಕುರಿತಾಗಿ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: ಮಹಿಳೆ ಬಂಧನ
ಬಳ್ಳಾರಿ: ಮಟ್ಕಾ ಜೂಜಾಟ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, ಆರೋಪಿಯೊಬ್ಬನನ್ನು ಬಂಧಿಸಿರುವ ಘಟನೆ ಸಿರುಗುಪ್ಪದ ಸಂತೆ ಮಾರ್ಕೆಟ್ನಲ್ಲಿ ನಡೆದಿದೆ. ಸಿರುಗುಪ್ಪದ ಸಂತೆ ಮಾರ್ಕೆಟ್ನಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೆರೆಗೆ ಸಿರುಗುಪ್ಪ ಪೊಲೀಸರು ದಾಳಿ ಮಾಡಿ, ರಾಧಮ್ಮ ಎನ್ನುವ ಆರೋಪಿಯನ್ನು ಬಂಧಿಸಿ, ಬಂಧಿತರಿಂದ ರು. 8470ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: 9 ಜನರ ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 9 ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಕೊರ್ಲಗುಂದಿಯಲ್ಲಿ ನಡೆದಿದೆ. ಕೊರ್ಲಗುಂದಿ ಗ್ರಾಮದ ಕೃಷಿ ಇಲಾಖೆಯ ವಸತಿ ಗೃಹದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮೋಕಾ ಪಿಎಸ್ಐ ಶಿವಾನಂದ ಶೆಟ್ಟಿ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ, ವಿ. ನಾಗನಗೌಡ, ಆರ್. ಮಲ್ಲಾರೆಡ್ಡಿ, ಕುಮಾರ ರೆಡ್ಡಿ, ಕೆ. ಬಸವನಗೌಡ, ಬಿ. ವೆಂಕಟೇಶ್, ನಾರಾಯಣ ರೆಡ್ಡಿ, ಕೆ. ಸಿದ್ದಪ್ಪ, ಪಿ. ಗನಿಸಾಬ್, ಪಿ. ರಾಜಣ್ಣ ಎಂಬ ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ ರು. 6560 ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಮಹಿಳೆ ಸಾವು
ಬಳ್ಳಾರಿ: ಬಳ್ಳಾರಿ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಮೋಟ್ನ ಪದ್ಮಶಾಲಿ ಕಲ್ಯಾಣ ಮಂಟಪ ಬಳಿಯ ಗೋಡೆ ಪಕ್ಕದಲ್ಲಿ 50 ವರ್ಷದ ಅಪರಿಚಿತ ಮಹಿಳೆಯೊಬ್ಬರು ಪ್ರಜ್ಞಾಹೀನಳಾಗಿ ಮಲಗಿರುವುದನ್ನು ಕಂಡು 108 ಆಂಬುಲೆನ್ಸ್ ಮೂಲಕ ವಿಮ್ಸ್ಗೆ ದಾಖಲಿಸಿದಾಗ ಮೃತಪಟ್ಟಿರುತ್ತಾಳೆ ಎಂದು ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಮೃತ ಮಹಿಳೆಯು 5 ಅಡಿ ಎತ್ತರ, ತಿಳಿ ಗೋದಿ ಮೈಬಣ್ಣದವಳಾಗಿರುತ್ತಾಳೆ. ಉದ್ದನೆಯ ಮುಖ, ತೆಳುವಾದ ಮೈಕಟ್ಟು, ಮೈಮೇಲೆ ಹಳದಿ ಬಣ್ಣದ ಸೀರೆ ಹಾಗೂ ಹಳದಿ ಕುಪ್ಪಸ ಧರಿಸಿರುತ್ತಾಳೆ. ನಾಗಾರ್ಜುನ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ದೂ-08392-258400, 258837, 272322, 272022, 250033ಗೆ ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

