ಬಳ್ಳಾರಿ

ಸಂಗೀತ ಸಾಮವೇದದ ಒಂದು ಭಾಗ

Published On :

ಕನ್ನಡಪ್ರಭ ವಾರ್ತೆ, ಕಂಪ್ಲಿ, ಡಿ. 30
ಚತುರ್ವೇದಗಳಲ್ಲಿ ಒಂದಾದ ಸಾಮವೇದದಲ್ಲಿ ಸಂಗೀತ ಒಂದು ಭಾಗವಾಗಿದೆ ಎಂದು ಕಂಪ್ಲಿ ವೆಂಕಟೇಶ್ವರ ದೇವಸ್ಥಾನದ ಧರ್ಮದರ್ಶಿ ಕೆ. ಸತ್ಯನಾರಾಯಣ ಮೂರ್ತಿ ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಸ್ವರ ಸ್ಮರಣಾಂಜಲಿ ಹಾಗೂ ನೂತನ ಸುನಾದ ಸಂಗೀತ ಪಾಠಶಾಲೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ಚತುರ್ವೇದಗಳಲ್ಲಿ ಒಂದಾದ ಸಾಮವೇದದಲ್ಲಿ ಸಂಗೀತ ಒಂದು ಭಾಗವಾಗಿದೆ. ಸಂಗೀತ ಸಾಧನೆಯಿಂದ ಒಲಿಯುತ್ತದೆ. ಸಂಗೀತ ಪಾಠಶಾಲೆ ವ್ಯವಹಾರಿಕಾವಾಗಬಾರದು. ಕಲಿಸುವವರಲ್ಲಿ ಮತ್ತು ಕಲಿಯುವವರಲ್ಲಿ ಶ್ರದ್ಧೆ ಇದ್ದಾಗ ಮಾತ್ರ ಸಂಗೀತ ಒಲಿಯುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಂಪ್ಲಿ ಹೋಬಳಿ ಘಟಕದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ವಿರೂಪಾಕ್ಷಯ್ಯಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸಂಗೀತ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿ ಬಗ್ಗೆ ವಿದೇಶಿಯರಿಗೆ ಅಪಾರ ಗೌರವವಿದೆ. ವಿಶ್ವ ಮಟ್ಟದಲ್ಲಿ ಭಾರತೀಯ ಸಂಗೀತ ಶ್ರೇಷ್ಠತೆ ಹೊಂದಿದೆ. ಬಯಲಾಟ, ನಾಟಕ, ಸಿನಿಮಾ, ರೇಡಿಯೋ ಹಾಗೂ ದೂರದರ್ಶನಗಳಲ್ಲಿ ಸಂಗೀತಕ್ಕೆ ಹೆಚ್ಚು ಮಹತ್ವ ದೊರೆತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುನಾದ ಸಂಗೀತ ಪಾಠಶಾಲೆ ಪ್ರಾಚಾರ್ಯ ಎಸ್.ಎಸ್.ಎಂ. ಹಿರೇಮಠ, ಸಾಂಗತ್ರಯ ಸಂಸ್ಕೃತ ಪಾಠಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರ ಶಾಸ್ತ್ರಿಗಳು, ಸಾಹಿತ್ಯ ಸಿರಿ ಪ್ರತಿಷ್ಠಾನದ ಮಹ್ಮದ್ ಹನೀಫ್, ಕಸಾಪ ಹೊಸಪೇಟೆ ತಾಲೂಕು ಘಟಕ ಅಧ್ಯಕ್ಷ ಅಗಳಿ ಪಂಪಾಪತಿ, ಬಿ. ಚಂದ್ರಶೇಖರ ಮಾತನಾಡಿದರು. ಬಿ. ಮೌನೇಶ್ ಪ್ರಾಸ್ತಾವಿಕ ಮಾತನಾಡಿದರು.
ಹಗರಿಬೊಮ್ಮನಹಳ್ಳಿಯ ಆದರ್ಶ ಶಾಲೆ ಸಂಗೀತ ಶಿಕ್ಷಕಿ ಸಂಗೀತ ಹಿರೇಮಠ, ಗೆಣಕಿಹಾಳ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಗೋವರ್ಧನ ರೆಡ್ಡಿ ಮತ್ತು ಸಂಗಡಿಗರು ಪಾಲ್ಗೊಂಡು ಜಿಎಸ್‌ಎಸ್ ಅವರ ಭಾವಗೀತೆಗಳನ್ನು, ವಚನಗಳನ್ನು ಹಾಡಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಸ್ವರ ಸ್ಮರಣಾಂಜಲಿ ಸಮರ್ಪಿಸಿದರು.
ಈ ಸಂದರ್ಭ ಕಾದಂಬರಿಕಾರ ರುಕ್ಮಣಬಾಬುರಾಜ್ ಶ್ರೀಖಂಡೆ, ಪ್ರತಿಷ್ಠಾನದ ಶ್ಯಾಂ ಸುಂದರ್, ಎಸ್.ಜಿ. ಚಿತ್ರಗಾರ್, ಎಸ್.ಡಿ. ಬಸವರಾಜ್, ಶಿವಲೀಲಾ ಬಸವರಾಜ್, ನೂಲ್ವಿ ಮಹಾಂತೇಶ್, ಬೂದಗುಂಪಿ ವೀರಭದ್ರಪ್ಪ, ಟಿ. ಪರಶುರಾಮ, ಸಂಗೀತಾಸಕ್ತರು ಭಾಗವಹಿಸಿದ್ದರು.
ಪ್ರತಿಷ್ಠಾನದ ಉಪಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ್ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಜಿ. ಪ್ರಕಾಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.