2 ಲಕ್ಷ ರೊಟ್ಟಿ ದೇಣಿಗೆ
ಕೂಡ್ಲಿಗಿ: ಹಗರಿಬೊಮ್ಮನಹಳ್ಳಿಯ್ಲಲಿ ಫೆ.18ರವರೆಗೆ ನಡೆಯಲಿರುವ ಪಂಚಮಸಾಲಿ ಜಗದ್ಗುರುಗಳ 5ನೇ ವರ್ಷದ ಪೀಠಾರೋಹಣ ಕಾರ್ಯಕ್ರಮಕ್ಕೆ ತಾಲೂಕಿನ ವೀರಶೈವ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ 5 ದಿನಗಳ ದಾಸೋಹಕ್ಕಾಗಿ 2 ಲಕ್ಷ ರೊಟ್ಟಿಗಳನ್ನು ಪೂಜೆ ಸಲ್ಲಿಸುವ ಮೂಲಕ ಕಳುಹಿಸಲಾಯಿತು.
ಪೀಠಾರೋಹಣ ಕಾರ್ಯಕ್ರಮದ ಸಲುವಾಗಿ ಪಂಚಮಸಾಲಿ ತಾಲೂಕು ಘಟಕದ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಹೊಸಹಳ್ಳಿ, ಗುಡೇಕೋಟೆ, ಕೂಡ್ಲಿಗಿಯಿಂದ ಉಚಿತ ಬಸ್ ಸೌಕರ್ಯ ಕಲ್ಪಿಸಿದ್ದು, ಹಗರಿಬೊಮ್ಮನಹಳ್ಳಿಯಲ್ಲಿ ನಡೆಯುವ ಪಂಚಮಸಾಲಿ ಸಮಾಜದ ಕಾರ್ಯಕ್ರಮಕ್ಕೆ ಹೋಗುವವರು ಈ ಬಸ್ನ ಸದುಪಯೋಗ ಪಡೆಯಬೇಕೆಂದು ಪಂಚಮಸಾಲಿ ಮುಖಂಡರು ತಿಳಿಸಿದ್ದಾರೆ. ಗುಳಿಗಿ ವೀರೇಂದ್ರ, ಕೆ. ಸುನೀಲ ಪಾಟೀಲ, ರಜನಿಕಾಂತ್, ಖಾನಾವಳಿ ಕೊಟ್ರೇಶಪ್ಪ, ಟಿ.ಜಿ. ಮಲ್ಲಿಕಾರ್ಜುನಗೌಡ, ಅಂಗಡಿ ವೀರೇಶ, ಎಂ. ಮರುಳಸಿದ್ದಪ್ಪ, ವಿಭೂತಿ ವೀರಣ್ಣ, ಸೋಗಿ ಗುರುಸಿದ್ದಪ್ಪ, ಬಣಕಾರ ಕೊಟ್ರೇಶ, ಕೆ. ವಿಜಯಕುಮಾರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

