ಬಳ್ಳಾರಿ

ಇಂದು ತರಬೇತಿ ಶಿಬಿರ

Published On :

ಬಳ್ಳಾರಿ: ನಗರದ ಶ್ರೀ ಸತ್ಯಸಾಯಿ ಧ್ಯಾನ ಮಂಡಳಿಯ ವತಿಯಿಂದ ಜು. 20ರಿಂದ 10 ದಿನಗಳ ಕಾಲ ಧ್ಯಾನ-ವೈದ್ಯ-ಯೋಗ ಶಿಕ್ಷಣ ಕುರಿತು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ನಗರದ ವಿದ್ಯಾನಗರದ ಕಲ್ಯಾಣ ಮಂಟಪದಲ್ಲಿ ಜು. 20ರಿಂದ 10 ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ 5ರಿಂದ 7ರ ವರೆಗೆ, ಸಂಜೆ 6ರಿಂದ 8ರ ವರೆಗೆ ಶಿಬಿರ ಜರುಗಲಿದೆ. ನಗರದ ಗಾಂಧಿಭವನದಲ್ಲಿ ಜು. 21ರಿಂದ 10ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ 5ರಿಂದ 7ರ ವರೆಗೆ, ಸಂಜೆ 6ರಿಂದ 8ರವರೆಗೆ ಶಿಬಿರ ಜರುಗಲಿದೆ.
ಮನೆಕೆಲಸದವಳಿಂದ ಆಭರಣ ಕಳವು: ದೂರು
ಬಳ್ಳಾರಿ: ಮನೆಯಲ್ಲಿ ಟ್ರಾಲಿ ಸೂಟ್‌ಕೇಸ್‌ನಲ್ಲಿದ್ದ 16 ತೊಲೆ ಬಂಗಾರದ ಆಭರಣಗಳನ್ನು ಮನೆಯ ಕೆಲಸದ ಹೆಣ್ಣುಮಗಳು ಕಳವು ಮಾಡಿರುವ ಘಟನೆ ತೋರಣಗಲ್‌ನಲ್ಲಿರುವ ಜಿಂದಾಲ್‌ನ ವಿದ್ಯಾನಗರ ಟೌನ್‌ಶಿಪ್‌ನಲ್ಲಿ ನಡೆದಿದೆ. ಆರ್. ರಾಮಕೃಷ್ಣ ಪರಮಹಂಸ ಅವರು ತೋರಣಗಲ್ ಜಿಂದಾಲ್‌ನ ಪವರ್ ಪ್ಲಾಂಟ್‌ನಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಅವರು ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಈಸ್ಟ್ ಗೋದಾವರಿ ಜಿಲ್ಲೆಯ ಪೆದ್ದಾಪುರ ಗ್ರಾಮಕ್ಕೆ ತನ್ನ ಟ್ರಾಲಿ ಸೂಟ್‌ಕೇಸ್‌ನಲ್ಲಿ ಬಟ್ಟೆಯ ಮಧ್ಯೆ 16 ತೊಲೆ ಬಂಗಾರದ ಆಭರಣ ಇಟ್ಟುಕೊಂಡು ಹೋಗಿ, ಅನಂತರ ಬಂದು ಮನೆಯಲ್ಲಿ ಸೂಟ್‌ಕೇಸ್‌ನಲ್ಲಿ ಇಟ್ಟಿದ್ದರು. ಅಂದು ಮಧ್ಯಾಹ್ನ ಮನೆಯಲ್ಲಿ ಟ್ರಾಲಿ ಸೂಟ್‌ಬ್ಯಾಗ್‌ನಲ್ಲಿ ಇಟ್ಟಿದ್ದ ಬಟ್ಟೆಗಳನ್ನು ಮನೆಯಲ್ಲಿ ಕೆಲಸ ಮಾಡುತ್ತಿದ್ದ ರತ್ನಮ್ಮ ತೊಳೆಯುವುದಕ್ಕೆ ಹೋಗಿದ್ದು, ಅದರಲ್ಲಿದ್ದ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ರಾಮಕೃಷ್ಣ ಪರಮಹಂಸ ತೋರಣಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜೂಜು: ಮೂವರ ಬಂಧನ
ಬಳ್ಳಾರಿ: ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜು ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ ರು. 25,320 ವಶಪಡಿಸಿಕೊಂಡಿದ್ದಾರೆ. ಬಂಧಿತರು ಆನಂದ ರೆಡ್ಡಿ, ಕುಪೇಂದ್ರ ರೆಡ್ಡಿ, ಮೋಹನ್ ರೆಡ್ಡಿ. ಖಚಿತ ಮಾಹಿತಿ ಮೇರೆಗೆ ಬಳ್ಳಾರಿಯ ಡಿಸಿಐಬಿ ಪೊಲೀಸರು ನೇತಾಜಿ ನಗರದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.