ನೀರು ಘಟಕಕ್ಕೆ ಮುತ್ತಿಗೆ
ಹೊಸಪೇಟೆ: ಶುದ್ಧ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಮಂಗಳವಾರ ತಾಲೂಕಿನ ಮರಿಯಮ್ಮನಹಳ್ಳಿ ಹಾಗೂ ಹನುಮನಹಳ್ಳಿ ಗ್ರಾಮಸ್ಥರು ಹನುಮನಹಳ್ಳಿ ನೀರು ಶುದ್ಧೀಕರಣ ಘಟಕಕ್ಕೆ ಮುತ್ತಿಗೆ ಹಾಕಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಸಮಾಜ ಸೇವಕ ಕುರಿ ಶಿವಮೂರ್ತಿ ಮಾತನಾಡಿ, ತುಂಗಭದ್ರಾ ಜಲಾಶಯದ ನೀರನ್ನು ಶುದ್ಧೀಕರಿಸದೇ ನೇರವಾಗಿ ಮರಿಯಮ್ಮನಹಳ್ಳಿ ಹಾಗೂ ಹನುಮನಹಳ್ಳಿಗಳಿಗೆ ಪೂರೈಸುತ್ತಿದ್ದು, ನೀರಿನಲ್ಲಿ ಕಸ-ಕಡ್ಡಿ ಮತ್ತು ವಿಪರೀತ ಮಣ್ಣಿನ ಕಣಗಳು ತುಂಬಿರುತ್ತವೆ. ಈ ನೀರು ಕುಡಿದು ಸಾಕಷ್ಟು ಜನರಿಗೆ ವಾಂತಿ-ಭೇದಿ ಮತ್ತು ಇತರೆ ಸಾಂಕ್ರಾಮಿಕ ರೋಗಗಳು ಹರಡಿಕೊಳ್ಳುತ್ತಿವೆ. ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧವಾದ ಕುಡಿಯುವ ನೀರನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.
ಮರಿಯಮ್ಮನಹಳ್ಳಿ ಹಾಗೂ ಡಣಾಪುರ ಮತ್ತು ಡಣಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸಮುದಾಯ ಆಧಾರಿತ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಶುದ್ಧೀಕರಣ ಘಟಕವು ಇದುವರೆಗೂ ಶುದ್ಧವಾದ ಕುಡಿಯುವ ನೀರು ಪೂರೈಸಿಲ್ಲ. 2 ವರ್ಷಗಳಿಂದ ಅನಿವಾರ್ಯವಾಗಿ ಆಗೊಮ್ಮೆ ಈಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದು, ಎರಡು ತಿಂಗಳಿಂದಲೂ ಅಶುದ್ಧವಾದ ಕುಡಿಯುವ ನೀರು ಪೂರೈಸುತ್ತಿರುವುದರಿಂದ ಶುದ್ಧೀಕರಣ ಘಟಕ್ಕೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋವಿಂದ ಪರಶುರಾಮ ಮಾತನಾಡಿ, ಆಗಸ್ಟ್ 10ರೊಳಗೆ ಶುದ್ಧೀಕರಣ ಘಟಕದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಿದ್ದರೆ 11ರಂದು ರಾಷ್ಟ್ರೀಯ ಹೆದ್ದಾರಿ 13ನ್ನು ತಡೆದು ಪ್ರತಿಭಟನೆ ನಡೆಸಲಾಗುತ್ತದೆ.
ಎಪಿಎಂಸಿ ನಿರ್ದೇಶಕ ತಳವಾರ ಸೋಮಶೇಖರ್, ಮರಿಯಮ್ಮನಹಳ್ಳಿ ಗ್ರಾಪಂ ಸದಸ್ಯ ಬಿ. ಯಮುನೂರ, ಬಾಲಾಜಿ ನಾಯ್ಕ, ಮುಖಂಡರಾದ ಮರಡಿ ಹನುಮಂತ, ಕೆ. ಲೋಕೇಶ್, ಬಿ. ವಿಜಯಕುಮಾರ್, ತಾಯಪ್ಪ, ಬಿ. ಯಮುನೂರ, ಬಿ. ಸೋಮಶೇಖರ್, ಬಿ.ಎಂ.ಎಸ್. ಕೊಟ್ರೇಶ್, ಕೆ. ನಾಗರಾಜ್, ಉದ್ದೇಕಲ್ ವೆಂಕಟೇಶ್, ಹನುಮನಹಳ್ಳಿಯ ಹನುಮಂತಪ್ಪ, ಪಂಪಾಪತಿ, ಕೆ. ವೆಂಕಟೇಶ್, ಡಾಬಾ ಮಂಜುನಾಥ ಮತ್ತು ಜಿಪಂ ಎಂಜಿನಿಯರ್‌ಗಳಾದ ಬಸವನಗೌಡ, ಕೆ. ದಿವಾಕರ್, ನಿಂಗೇಶ್, ಮರಿಯಮ್ಮನಹಳ್ಳಿಯ ಪಿಡಿಓ ಉಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

