ಬಳ್ಳಾರಿ

ಚಲಪತಿ ಕೊಲೆ: ನಾಲ್ವರ ಬಂಧನ

Published On :

ಬಳ್ಳಾರಿ:  ನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಸರ್ಕಾರಿ ಅತಿಥಿಗೃಹ ಬಳಿ ಮಂಗಳವಾರ ಸಂಜೆ ನಡೆದ ಸಫಾಯಿ ಕರ್ಮಚಾರಿ ಸಂಘದ ಕಾರ್ಯದರ್ಶಿ ಚಲಪತಿ ಕೊಲೆಗೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದ್ದು, ಬಂಧಿತರಿಂದ ಬೈಕ್, ಕಬ್ಬಿಣದ ರಾಡುಗಳು, ರಕ್ತದ ಕಲೆಯಿರುವ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಚಂದ್ರಗುಪ್ತ ಹೇಳಿದರು.
ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.  ದೇವೇಂದ್ರ, ಯರ್ರಿಸ್ವಾಮಿ, ಕಿರಣ್, ಹನುಮಂತ ಬಂಧಿತ ಆರೋಪಿಗಳಾಗಿದ್ದಾರೆ. ಈ ಆರೋಪಿಗಳು ಮೃತ ಚಲಪತಿಯ ಎರಡನೇ ಪತ್ನಿಯ ಸಂಬಂಧಿಕರಾಗಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. ಬಂಧಿತರಿಂದ ಇನ್ನಷ್ಟು ಮಾಹಿತಿ ಕಲೆಹಾಕಿ ಕೊಲೆಗೆ ಸಂಬಂಧಪಟ್ಟಂತೆ ಸಹಕರಿಸಿದವರನ್ನು, ಯೋಜಿಸಿದವರನ್ನು ಬಂಧಿಸಲಾಗುತ್ತದೆ.  ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ಮೃತ ಚಲಪತಿ ಇಲ್ಲಿನ ನರ್ಸಿಂಗ್ ಕಾಲೇಜ್‌ನ ಶಿಕ್ಷಕಿ, ಬಂಧಿತ ಆರೋಪಿ ದೇವೇಂದ್ರಪ್ಪರ ಮಗಳು ಜೀವಿತಳನ್ನು ಹಲವು ದಿನಗಳ ಹಿಂದೆ ಎರಡನೇ ಮದುವೆಯಾಗಿದ್ದಾನೆ. ಈ ವಿಷಯವಾಗಿ ಎರಡೂ ಕುಟುಂಬಗಳಿಂದ ವಿರೋಧ ವ್ಯಕ್ತವಾಗಿದೆ. ಆದರೂ, ಅಕ್ರಮ ಸಂಬಂಧ ಮುಂದುವರಿದ ಕಾರಣ ಜೂ. 4ರಂದು ಕೊಲೆಗೈಯ್ಯಲಾಗಿದೆ. ಕೇವಲ ಎರಡನೇ ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಬ್ರೂಸ್‌ಪೇಟೆ ಠಾಣೆಯ ಪಿಐ ನಿರಂಜನ್ ಕುಮಾರ್ ನೇತೃತ್ವದ ವಿಶೇಷ ತಂಡಕ್ಕೆ ನಗದು ಬಹುಮಾನವನ್ನು ಘೋಷಿಸಲಾಯಿತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.