ಸಮಾಜಮುಖಿ ಕೆಲಸ ಮಾಡಿ: ಶ್ರೀ
ಹೂವಿನಹಡಗಲಿ: ಪ್ರತಿಯೊಬ್ಬರೂ ಸಮಾಜಮುಖಿ ಕೆಲಸ ಮಾಡಬೇಕು ಎಂದು ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಶಾಖಾ ಗವಿಮಠದಲ್ಲಿ ಆಯೋಜಿಸಲಾಗಿದ್ದ 59ನೇ ಮಾಸಿಕ ಶಿವಾನುಭವದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು. ಜನಪದ ಸಾಹಿತ್ಯ ಜೀವನದ ಹಾಸುಹೊಕ್ಕಾಗಿದೆ. ಪ್ರಸ್ತುತ ದಿನಗಳಲ್ಲಿ ಅದು ಮರೆಯಾಗುತ್ತಿರುವುದು ವಿಷಾದನೀಯ ಎಂದರು.
ಜನಪದ ಸಾಹಿತ್ಯದ ಮೂಲಕ ತಾಯಂದಿರು ಮಕ್ಕಳಿಗೆ ನೀತಿಪಾಠ ಬೋಧಿಸುತ್ತಿದ್ದರು. ಯುವಜನತೆ ಸಮಾಜಕ್ಕೆ ಕೀತಿ ತರುವ ನಿಟ್ಟಿನಲ್ಲಿ ಬೆಳೆಯಬೇಕಿದೆ ಎಂದರು.
ವಿಷಪೂರಿತ, ರಾಸಾಯನಿಕಯುಕ್ತ ಆಹಾರ ಸೇವಿಸುವುದನ್ನು ಬಿಟ್ಟು ಸಾವಯವ ಗೊಬ್ಬರ ಬಳಸಿ, ಬೆಳೆಸಿದ ಉತ್ತಮ ಪೌಷ್ಟಿಕ ಆಹಾರ ಸೇವಿಸಿ ಎಂದರು. ಸಾಹಿತಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಡಾ. ನಿಂ.ಗು. ಸೊಲಗಿ ಜನಪದ ಸಾಹಿತ್ಯ ಹಾಗೂ ಸಾಮಾಜಿಕ ಮೌಲ್ಯಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಬದುಕಿನ ಬಹುಭಾಗ ಜಾನಪದದಿಂದ ಕೂಡಿದೆ. ತ್ರಿಪದಿಗಳು ಸಮಾಜದ ಪ್ರತಿಬಿಂಬಗಳಾಗಿ ಬೆಳೆದಿವೆ. ಪ್ರಸ್ತುತ ವಿಘಟಿತ ಕುಟುಂಬಗಳಿಗೆ ಮೌಲ್ಯ ಒದಗಿಸುವಲ್ಲಿ ಜನಪದ ಸಾಹಿತ್ಯದ ಪಾತ್ರ ಹಿರಿದಾಗಿದೆ ಎಂದರು.
ಜನಪದ ತ್ರಿಪದಿಗಳನ್ನು ಸರ್ವದಾಟಿಯಲ್ಲಿಯೂ ಹಾಡಬಹುದು. ಸುಖ-ಶಾಂತಿ ಜೀವನಕ್ಕೆ ಜನಪದ ಬದುಕೇ ಮೂಲವಾಗಿದೆ. ಹುಟ್ಟಿನಿಂದ ಸಾಯುವವರೆಗೂ ನಂಟು ಹೊಂದಿರುವ ಜನಪದದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದಕ್ಕೊಂದು ಅರ್ಥ ಸಿಗುತ್ತದೆ ಎಂದರು. ಕಂಜೂರಿ ವಾದ್ಯದೊಂದಿಗೆ ಕೆಲ ಜನಪದ ತ್ರಿಪದಿಗಳನ್ನು ವಿವಿಧ ದಾಟಿಗಳ ಮೂಲಕ ಲಯಬದ್ದವಾಗಿ ಹಾಡಿ ಮನರಂಜಿಸಿದರು. ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಸಿ. ರಾಮಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯ ಕೆ. ಕೊಟ್ರೇಶ, ಬಿ. ರವಿಕುಮಾರ, ಗದ್ದಿಕೆರಿ ರುದ್ರಮ್ಮ, ಎಂ. ಸುರೇಶ ಉಪಸ್ಥಿತರಿದ್ದರು. ಬಿ. ರಾಧಾ ಎಚ್. ಶಿವರಾಂ ಅವರನ್ನು ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ 2012-2013ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಗೀತ ಶಿಕ್ಷಕ ಬಿ.ಬಿ. ಸೋಮಶೇಖರ ಪ್ರಾರ್ಥಿಸಿದರು. ಶರಣಯ್ಯ ಸ್ವಾಗತಿಸಿದರು. ಕೀರ್ತಿ, ಅಂಬಿಕಾ ವಚನಗಾಯನ ನಡೆಸಿಕೊಟ್ಟರು. ಡಾ. ಎಚ್.ಕೆ. ಮಹೇಶ, ಬಸವಲಿಂಗಯ್ಯ ನಿರೂಪಿಸಿದರು.
ಇಂದು ಪರಮೇಶ್ವರ ನಾಯ್ಕ್ ಪ್ರವಾಸ
ಬಳ್ಳಾರಿ: ರಾಜ್ಯ ಕಾರ್ಮಿಕ ಖಾತೆ ರಾಜ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಅವರು ಜೂ. 13ರಂದು ಮಧ್ಯಾಹ್ನ 3ಕ್ಕೆ ಜಿಲ್ಲೆಯ ಹೂವಿನಹಡಗಲಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಜೂ. 14ರಂದು ಹಡಗಲಿಯಲ್ಲಿ ಪ್ರವಾಸ ಕೈಗೊಂಡು ವಾಸ್ತವ್ಯ ಮಾಡಲಿದ್ದಾರೆ. ಜೂ. 15ರಂದು ಬೆಳಗ್ಗೆ 11ಕ್ಕೆ ಹಡಗಲಿಯಿಂದ ದಾವಣಗೆರೆಗೆ ಹೊರಡಲಿದ್ದಾರೆ. ಜೂ. 16ರಂದು ಬೆಳಗ್ಗೆ 10.30ಕ್ಕೆ ಹಡಗಲಿಗೆ ಆಗಮಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಧ್ಯಾಹ್ನ 12.30ಕ್ಕೆ ಹಡಗಲಿಯಿಂದ ಬಳ್ಳಾರಿಗೆ ತೆರಳಲಿದ್ದಾರೆ. 3 ಗಂಟೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡಲಿದ್ದಾರೆ. ಜೂ. 17ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಮಧ್ಯಾಹ್ನ 3.30ಕ್ಕೆ ಬೆಂಗಳೂರಿಗೆ ನಿರ್ಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

