ಸಮಸ್ಯೆಗಳತ್ತ ಗಮನ ಹರಿಸಲಿ
ಹೂವಿನಹಡಗಲಿ: ಪತ್ರಿಕೆಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವತ್ತ ಗಮನ ಹರಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ ತಿಳಿಸಿದರು.
ಪಟ್ಟಣದ ದಾವಣಗೆರೆ ಕಾನ್ವೆಂಟ್ ಶಾಲೆಯಲ್ಲಿ ಪಾಕ್ಷಿಕವೊಂದರ ದಶಮಾನೋತ್ಸವ ಹಾಗೂ ಜೈನ್ ಶೇಷನಗೌಡ ಒಂದು ನೆನಪು, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಹಾಸ್ಯಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಸ್ಥಳೀಯ ಪಾಕ್ಷಿಕ ಪತ್ರಿಕೆಗಳನ್ನು ನಿರಂತರವಾಗಿ ಪ್ರಕಟಿಸುವುದು ಕಷ್ಟದ ಕೆಲಸ. ಆರ್ಥಿಕ ಬವಣೆ ನಡುವೆ ತಾಲೂಕಿನ ವಿವಿಧ ಸಮಸ್ಯೆಗಳ ಕುರಿತು ವರದಿ ಮಾಡಿ ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ಮೂಲಕ ಸಮಸ್ಯೆಗಳಿಗೆ ತಿಲಾಂಜಲಿ ಎಳೆದಿದ್ದಾರೆಂದರು.
ಪುಸ್ತಕ ಬಿಡುಗಡೆ: ಕವಿಯತ್ರಿ ಡಾ. ಅಂಜನಾ ಕೃಷ್ಣಪ್ಪ ಅವರ ಕವನ ಸಂಕಲನ ಜೀವನ ಹೂಬನ ಎಂಬ ಕೃತಿಯನ್ನು ಸಾಹಿತಿ ಎಚ್. ಶೇಷಗಿರಿರಾವ್ ಬಿಡುಗಡೆ ಮಾಡುತ್ತಾ, ಸಾಹಿತ್ಯ ಲೋಕಕ್ಕೆ ಮಹಿಳಾ ಕವಿಯತ್ರಿಯರ ಸಾಹಿತ್ಯ ಸೇವೆ ಅನನ್ಯ ಎಂದರು. ಜೈನ ಸಮಾಜದ ಅಧ್ಯಕ್ಷ ರೇವಡಿ ಪಾಶ್ವನಾಥ ಕಾರ್ಯಕ್ರಮ ಉದ್ಘಾಟಿಸಿದರು, ಕಸಾಪ ನಿಟಕ ಪೂರ್ವ ಅಧ್ಯಕ್ಷೆ ಕೌಶಲ್ಯಬಾಯಿ, ಮುಖ್ಯ ಶಿಕ್ಷಕಿ ಹೇಮಾವತಿ, ಡಾ. ಅಂಜನಾ ಕೃಷ್ಣಪ್ಪ, ಪಾಕ್ಷಿಕದ ಸಂಪಾದಕ ನಾಗರಾಜ ಮಲ್ಕಿಒಡೆಯರ್ ಇದ್ದರು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸಾಧನೆ ಗೈದ ಸಾಧಕರಿಗೆ ಪತ್ರಿಕೆ ದಶಮಾನೋತ್ಸವ ಅಂಗವಾಗಿ ಸನ್ಮಾನಿಸಲಾಯಿತು. ಪತ್ರಕರ್ತ ಕೆ. ಸೋಮಶೇಖರ, ಪ್ರಗತಿಪರ ರೈತ ಸೊಪ್ಪಿನ ಕೊಟ್ರೇಶ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ. ಶಂಕ್ರಮ್ಮ ಪಾಟೀಲ್, ಸಾಹಿತ್ಯ ಕ್ಷೇತ್ರದ ಡಾ. ಅಂಜನಾ ಕೃಷ್ಣಪ್ಪ, ವರ್ತಕ ಅಮರೇಶ ಶೆಟ್ಟಿ, ನಿವೃತ್ತ ತಹಸೀಲ್ದಾರ್ ಚಾಂದಸಾಹೇಬ್, ಪ್ರೇಮ ಅಡ್ಡ ಚಿತ್ರದ ನಟ ರಾಮು ಇವರನ್ನು ಸನ್ಮಾನಿಸಲಾಯಿತು. ಜೀವನ ಹೂಬನ ಕೃತಿ ಕುರಿತು ಕೆ. ವೆಂಕಟೇಶ ಮಾತನಾಡಿದರು, ಎಚ್. ಚಂದ್ರಪ್ಪ ಪ್ರರ್ಥಿಸಿದರು, ಸುರೇಶ ಅಂಗಡಿ, ಎಂ. ಚಿದಾನಂದ ನಿರ್ವಹಿಸಿದರು. ನಂತರ ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಕವಿಗಳು ತಮ್ಮ ಕವಿತಾ ವಾಚನ ಮಾಡಿದರು. ನಂತರ ಗುರುರಾಜ ಬಾವಾಜಿ ಇವರು ಹಾಸ್ಯಗೋಷ್ಠಿ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

