ಬಳ್ಳಾರಿ

ಟಿಬಿ ಬೋರ್ಡ್ ನೌಕರರ ಧರಣಿ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ. 20
ಪೂರ್ಣ ಪ್ರಮಾಣದ ಸೇವಾ ಪದ್ಧತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತುಂಗಭದ್ರಾ ಮಂಡಳಿ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಇಲ್ಲಿನ ಟಿಬಿ ಬೋರ್ಡ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನೌಕರರ ಸಂಘದ ಚೇರ್‌ಮನ್, ಮಾಜಿ ಸಚಿವ ಎಂ. ದಿವಾಕರ ಬಾಬು, ತುಂಗಭದ್ರಾ ಮಂಡಳಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ನೌಕರರ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳು ತಕ್ಷಣ ಮುಂದಾಗಬೇಕು. ಬೇಡಿಕೆಗಳು ಈಡೇರದೆ ಹೋದಲ್ಲಿ ಧರಣಿ ಮುಂದುವರಿಯಲಿದೆ ಎಂದರು.
ಬೇಡಿಕೆ ಈಡೇರಿಸಿ: ಈಗ ಜಾರಿಯಲ್ಲಿರುವ ಪೆನ್ಷನ್, ಗ್ರಾಚ್ಯುಟಿ, ಇತರೆ ಸೌಲಭ್ಯಗಳ ವಿತರಣಾ ವೇಳೆಯಲ್ಲಿ ಕಡಿತಗೊಳ್ಳುತ್ತಿರುವ ಪದ್ಧತಿ ರದ್ದುಪಡಿಸಬೇಕು. ಪೂರ್ಣ ಪ್ರಮಾಣದ ಸೇವಾ ಪದ್ಧತಿ ಅನುಷ್ಠಾನಕ್ಕೆ ತರಬೇಕು. ಮಂಡಳಿ ಅಧೀನದಲ್ಲಿರುವ ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸಬೇಕು. ಅಗತ್ಯ ಸಿಬ್ಬಂದಿ ನೇಮಿಸಬೇಕು. ನೌಕರರ ವಸತಿಗೃಹಗಳನ್ನು ದುರಸ್ತಿಗೊಳಿಸಬೇಕು. ನೌಕರರ ಕಾಲೋನಿಯಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಮಂಡಳಿಯ ಅಧೀನದ ಖಾಲಿ ನಿವೇಶನಗಳನ್ನು ಹೊರಗಿನವರು ಅತಿಕ್ರಮ ಮಾಡುತ್ತಿದ್ದು, ಇದನ್ನು ತಡೆಯಲು ಖಾಲಿ ನಿವೇಶನಗಳನ್ನು ಮಂಡಳಿ ನೌಕರರ ಗೃಹ ನಿರ್ಮಾಣ ಸಂಘಕ್ಕೆ ವರ್ಗಾವಣೆ ಮಾಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ನೌಕರರ ಸಂಘದ ಅಧ್ಯಕ್ಷ ಎಂ. ಹನುಮಣ್ಣ, ಕಾರ್ಯದರ್ಶಿ ಟಿ.ಕೆ. ಗೋಪಾಲಕೃಷ್ಣ, ಕೆ. ಶ್ರೀನಿವಾಸಲು, ವೀರೇಶ್, ಜೆ. ಪ್ರವೀಣ್, ವರ್ಮಾ, ನಗರಸಭಾ ಸದಸ್ಯೆ ಧನಲಕ್ಷ್ಮಿ, ಗೋವಿಂದರಾಜು ಇತರ ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.