ಸೋಲು ಗೆಲವಿನ ಲೆಕ್ಕಾಚಾರ
ಹೂವಿನಹಡಗಲಿ: ಹೂವಿನಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 10 ಅಭ್ಯರ್ಥಿಗಳ ಹಣೆ ಬರಹವನ್ನು ಪರಮಾಧಿಕಾರದ ಮೂಲಕ ಮತದಾರ ಭಾನುವಾರ ಬರೆದಿದ್ದು, ಈಗಾಗಲೇ ಮತಯಂತ್ರದಲ್ಲಿ ಭವಿಷ್ಯ ಭದ್ರವಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸೋಲು ಗೆಲವಿನ ಲೆಕ್ಕಾಚಾರ ನಡೆಯುತ್ತಿದೆ.
ಈ ಬಾರಿ ಚುನಾವಣಾ ಆಯೋಗವು ಕಠಿಣ ಕ್ರಮ ಮತ್ತು ಅಕ್ರಮ ತಡೆಯುವಲ್ಲಿ ಬಿಗಿ ನಿಲುವು ತೆಗೆದುಕೊಂಡ ಹಿನ್ನೆಲೆಯಲ್ಲಿ ಮತದಾರರಿಗೆ ಯಾವುದೇ ಭಯ ಭೀತಿ ಇಲ್ಲದೇ ತಂಡ ತಂಡವಾಗಿ ಬಂದು ಸುಡು ಬಿಸಿಲನ್ನು ಲೆಕ್ಕಿಸದೇ ಮತದಾನ ಮಾಡಿರುವ ಪರಿಣಾಮ ಕ್ಷೇತ್ರದಲ್ಲಿ ಶೇ. 73.40ರಷ್ಟು ಮತದಾನವಾಗಿದೆ.
ಭಾನುವಾರ ರಾತ್ರಿಯಿಂದಲೇ ಅಭ್ಯರ್ಥಿಗಳು ಕ್ಷೇತ್ರದಲ್ಲಾಗಿರುವ ಶೇಕಡಾವಾರು ಮತದಾನದ ಲೆಕ್ಕಾಚಾರದ ಮೇಲೆ ಸೋಲು ಗೆಲವು ಕುರಿತು ಬಲವಾದ ಚರ್ಚೆ ನಡೆಯುತ್ತಿದೆ. ಕಳೆದ ಸಲಕ್ಕಿಂತ ಈ ಬಾರಿ ಶೆ. 2ರಷ್ಟು ಮತದಾನ ಹೆಚ್ಚಳವಾಗಿದೆ. ಪಟ್ಟಣದ ಮತದಾರರು ಮತದಾನ ಮಾಡುವಲ್ಲಿ ಹಿಂದೆ ಬಿದ್ದರೆ ಇತ್ತ ಗ್ರಾಮೀಣ ಪ್ರದೇಶದ ಎಲ್ಲ ಬೂತ್‌ಗಳಲ್ಲಿಯೂ ಉತ್ತಮ ಮತದಾನವಾಗಿದೆ. ಕ್ಷೇತ್ರದಲ್ಲಿ ಹಂಪಸಾಗರದ ಬೂತ್‌ಯೊಂದರಲ್ಲಿ ಅತಿ ಹೆಚ್ಚು ಶೇ. 84.32, ಹೂವಿನಹಡಗಲಿಯ ಟಿಡಿವಿ ಶಾಲಾ ಬೂತ್‌ನಲ್ಲಿ ಅತಿ ಕಡಿಮೆ ಶೇ. 48.72ರಷ್ಟು ಮತದಾನವಾದ ವರದಿಯಾಗಿದೆ.
ಇಡೀ ಕ್ಷೇತ್ರದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಮತದಾರರ ಚಿತ್ತ ಮೇ 8ರತ್ತ ನೆಟ್ಟಿದ್ದು, ಬಳ್ಳಾರಿಯಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮತಗಳ ಎಣಿಕೆಗೆ ಒಂದು ದಿನ ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಸೋಲು ಗೆಲವು ಕುರಿತು ಅನೇಕ ಕಡೆಗಳಲ್ಲಿ ಬೆಟ್ಟಿಂಗ್ ಜೋರಾಗಿಯೇ ನಡೆಯುತ್ತಿದೆ. ಈಗಾಗಲೇ ಈ ಹಿಂದೆ ನಡೆದಿರುವ ಚುನಾವಣೆಗಳ ಪ್ರಕಾರ ಹೂವಿನಹಡಗಲಿ ಕ್ಷೇತ್ರದಲ್ಲಿ ಗೆದ್ದವರ ಪಕ್ಷದ ಸರ್ಕಾರ ರಚನೆಯಾಗುತ್ತದೆ ಎಂಬುದು ಸಾಬೀತಾಗಿದೆ. ಈ ಬಾರಿ ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷ ಮತ್ತು ಪಕ್ಷೇತರರು ಸೇರಿದಂತೆ 10 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರಿಂದ ಸೋಲು ಗೆಲವಿನ ಲೆಕ್ಕಾಚಾರಗಳು ಅಭ್ಯರ್ಥಿ ಮತ್ತು ಮತದಾರರಲ್ಲಿ ಬಾರಿ ಕುತೂಹಲ ಮೂಡಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

