ನಾಳೆ ಉಪನ್ಯಾಸ ಕಾರ್ಯಕ್ರಮ
ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗವು ಮೇ 20ರಂದು ಬೆಳಗ್ಗೆ 11.30ಕ್ಕೆ ವಿವಿಯ ವಿಚಾರ ಸಂಕಿರಣ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆ-2013 ಒಂದು ವಿಶ್ಲೇಷಣೆ ಕುರಿತು ಧಾರವಾಡದ ಕರ್ನಾಟಕ ವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹರೀಶ್ ರಾಮಸ್ವಾಮಿ ಉಪನ್ಯಾಸ ನೀಡಲಿದ್ದಾರೆ. ವಿವಿಯ ಕುಲಪತಿ ಪ್ರೊ. ಮಂಜಪ್ಪ ಹೊಸಮನೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವೀರಬ್ರಹ್ಮೇಂದ್ರ ಸ್ವಾಮಿ ಆರಾಧನೆ
ಬಳ್ಳಾರಿ: ನಗರದ ಪ್ರಭಾಸ್ ಚಿತ್ರಮಂದಿರದ ಬಳಿಯಿರುವ ಗಣೇಶ ದೇವಸ್ಥಾನದಲ್ಲಿ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಯ ಆರಾಧನೆ ಮತ್ತು 30ನೇ ವಾರ್ಷಿಕೋತ್ಸವ ಜರುಗಲಿದೆ.ಈಗಾಗಲೇ ಆರಾಧನೆ ಪ್ರಾರಂಭವಾಗಿದ್ದು, ನಿರಾಫಾಟಂ ಪದ್ಮಾವತಿ, ಮದ್ವಿರಾಟ್ ಪೋತುಲೂರಿ ವೀರಬ್ರಹ್ಮೇಂದ್ರರ ಸಂಪೂರ್ಣ ಜೀವನ ಚರಿತ್ರೆ ಹಾಗೂ ಹರಿಕತೆ ನಡೆಸಿಕೊಡಲಿದ್ದಾರೆ. ಮೇ 20ರಂದು ಸೋಮವಾರ ಬೆಳಗ್ಗೆ 10ಕ್ಕೆ ವೀರಬ್ರಹ್ಮೇಂದ್ರ ಸ್ವಾಮಿಗಳ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಪದವೀಧರರ ವೇದಿಕೆ ಸಭೆ
ಕೂಡ್ಲಿಗಿ: ಸ್ನಾತಕೋತ್ತರ ಪದವೀಧರರ ವೇದಿಕೆಯ ಸಭೆ ಹಾಗೂ ಉದ್ಘಾಟನಾ ಕಾರ್ಯಕ್ರಮ ಮೇ 19ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಗ್ಗೆ 9.30ಕ್ಕೆ ಸಭೆ ಕರೆಯಲಾಗಿದೆ. ಸಭೆಗೆ ಎಲ್ಲ ಸ್ನಾತಕೋತ್ತರ ಪದವೀಧರರು ಸಭೆಗೆ ಹಾಜರಾಗುವಂತೆ ವೇದಿಕೆ ಅಧ್ಯಕ್ಷ ಎಸ್. ಚಾರೇಶ್, ಕಾರ್ಯದರ್ಶಿ ಕೆ. ನಾಗರಾಜ್ ಪ್ರಕಟಣೆಯಲ್ಲಿ ಕೋರಿದ್ದಾರೆ. ಕೂಡ್ಲಿಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಸ್ನಾತಕೋತ್ತರ ಪಧವೀದರರು ಈಗಾಗಲೇ ಈ ವೇದಿಕೆ ಮೂಲಕ ಸಂಘಟನೆಗೊಂಡಿದ್ದು, ಮೂರು ಬಾರಿ ಪೂರ್ವಭಾವಿ ಸಭೆಗಳನ್ನು ನಡೆಸಿದೆ. ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ವೇದಿಕೆಯನ್ನು ಬಲಪಡಿಸಲು ಪದವೀಧರರು ಒಗ್ಗೂಡಬೇಕಿದೆ. ಹೊಸ ಸ್ನಾತಕೋತ್ತರ ಪದವೀಧರ ಸದಸ್ಯರ ಸೇರ್ಪಡೆ ಸಹ ಸಭೆಯಲ್ಲಿ ಇರುತ್ತದೆ. ಅದೇ ರೀತಿ ಸಮಾಜಕ್ಕೆ ಈ ವೇದಿಕೆ ಮೂಲಕ ಒಳ್ಳೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷ ಎಸ್. ಚಾರೇಶ್-9481304792 ಹಾಗೂ ಕಾರ್ಯದರ್ಶಿ ಕೆ. ನಾಗರಾಜ- 9886012008 ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಪ್ರಶಸ್ತಿಗೆ ಪುಸ್ತಕ ಆಹ್ವಾನ
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಿವಮೊಗ್ಗ ಜಿಲ್ಲೆ ಹೊಂಬುಜ ಜೈನಮಠದ ದೇವೇಂದ್ರ ಕೀರ್ತಿಭಟ್ಟಾರಕ ಸ್ವಾಮೀಜಿ ಸ್ಥಾಪಿಸಿರುವ ದೇವೇಂದ್ರಕೀರ್ತಿ ದತ್ತಿ ಪ್ರಶಸ್ತಿ ನೀಡಲು ಅರ್ಹ ಲೇಖಕರಿಂದ ಜೈನ ಧರ್ಮಕ್ಕೆ ಸಂಬಂಧಿಸಿದ ಶ್ರೇಷ್ಠ ಗ್ರಂಥಗಳನ್ನು ಆಹ್ವಾನಿಸಲಾಗಿದೆ ಎಂದು ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ತಿಳಿಸಿದ್ದಾರೆ. ಪ್ರಶಸ್ತಿ ರು. 6000 ನಗದು ಒಳಗೊಂಡಿರುತ್ತದೆ. ಪ್ರಶಸ್ತಿಗಾಗಿ ಕಳುಹಿಸುವ ಪುಸ್ತಕಗಳು 2012ರ ಜನವರಿ-ಡಿಸೆಂಬರ್ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಜೈನ ಧರ್ಮದ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಕಲೆ, ಗ್ರಂಥ ಸಂಪಾದನಾ ಶಾಸ್ತ್ರಕ್ಕೆ ಅನುಸಾರವಾಗಿ ಸಂಪಾದಿಸಿದ ಪ್ರಾಚೀನ ಗ್ರಂಥಗಳು, ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಗ್ರಂಥಗಳು, ಶಾಸ್ತ್ರ ಗ್ರಂಥಗಳಿಗೆ ಬರೆದ ಟೀಕಾ ಗ್ರಂಥಗಳು, ಜೈನ ಜಾನಪದಾಧಿಗಮಕಕ್ಕೆ ಸಂಬಂಧಿಸಿದ ಗ್ರಂಥಗಳು ಪ್ರಶಸ್ತಿ ಪರಿಶೀಲನೆಗೆ ಅರ್ಹವಿರುತ್ತದೆ. ಆಸಕ್ತರು ಜೂ. 30ರೊಳಗಾಗಿ ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 ಇವರಿಗೆ 3 ಪ್ರತಿಗಳನ್ನು ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ-080-26623584ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

