ಬಳ್ಳಾರಿ

ತರಬೇತಿಗೆ ಅರ್ಜಿ ಆಹ್ವಾನ

Published On :

ಬಳ್ಳಾರಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಣ ಬೋಧಿಸಲು ವಿಶೇಷ ಶಿಕ್ಷಣ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಪಿಯು ವಿದ್ಯಾರ್ಹತೆ ಹೊಂದಿರಬೇಕು. ಮೈಸೂರಿನ ಹೆಲನ್ ಕಿಲ್ಲರ್ ಅಂಧ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಅಂಧ ಮಕ್ಕಳ ವಿಶೇಷ ಶಿಕ್ಷಣ ಡಿಇಡಿ ಎಸ್‌ಇ (ವಿಐ) ಹಾಗೂ ಶ್ರವಣ ದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶ್ರವಣದೋಷವುಳ್ಳ ವಿಶೇಷ ಶಿಕ್ಷಣ ಡಿಇಡಿ ಎಸ್‌ಇ (ಎಚ್‌ಐ) ತರಬೇತಿ ನೀಡಲಾಗುತ್ತದೆ.  ಆಸಕ್ತಿ ಹೊಂದಿದವರು ಜೂ. 1ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಪ್ರವೇಶ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪ್ರಾದೇಶಿಕ ಭಾಷೆಯಲ್ಲಿಯೂ ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ಜೂ. 22ರಿಂದ 30ರವರೆಗೆ ಆನ್‌ಲೈನ್ ಪ್ರವೇಶ ಪರೀಕ್ಷೆ ನಡೆಯಲಿದೆ. ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ ಢಿಢಿಢಿ.್ಠಝಛಛ್ಛ್ಟ್ಡಿಟ್ಛ್ಝಿಟ.ಟ್ಝ್ಛಿ.್ಝಟಿ ಹಾಗೂ ಢಿಢಿಢಿ.ಡಛಡಿಢಛಡ್ಟಿಟಿಟ್ಝಟಿಜಜ್ಢಛಟಡ.್ಛ್ಟಟ, ಡಿಡಿಠ:ಙಙಢಿಢಿಢಿ.ಡಛಡಿಢಛಡ್ಟಿಟಿಟ್ಝಟಿಜಜ್ಢಛಟಡ.್ಛ್ಟಟ ಅನ್ನು ಸಂಪರ್ಕಿಸಬಹುದು ಅಥವಾ  ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ದೂ.ಸಂ-08392-267886, ಉಪನಿರ್ದೇಶಕರು (ತರಬೇತಿ), ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರ ಪುಲಕೇಶಿ ರಸ್ತೆ, ತಿಲಕನಗರ, ಮೈಸೂರು, ದೂ.ಸಂ-0821-2491600ಗೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.