ಇಂದು ಸಪ್ತಾಹ ಮುಕ್ತಾಯ
ಬಳ್ಳಾರಿ: ಜಿಲ್ಲೆಯಲ್ಲಿ ಮೇ 18ರಂದು ವಸ್ತು ಸಂಗ್ರಹಾಲಯದ ಸಪ್ತಾಹ ಹಮ್ಮಿಕೊಂಡಿದ್ದು, ಮೇ 24ರ ವರೆಗೆ ನಡೆಯಲಿದೆ. ಈ ಸಪ್ತಾಹ ಕಾರ್ಯಕ್ರಮದಡಿ ಜಿಲ್ಲೆಯಲ್ಲಿರುವ ಐತಿಹಾಸಿಕ, ಪಾರಂಪರಿಕ ಮಹತ್ವದ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಲಾಗುವುದು. ಜಿಲ್ಲೆಯ ಯಾವುದೇ ಭಾಗದಲ್ಲಿ ಪ್ರಾಚೀನ ಶಿಲಾ ಶಾಸನಗಳು, ವೀರಗಲ್ಲುಗಳು, ಸತಿಕಲ್ಲು, ಪ್ರಾಚೀನ ಶಿಲ್ಪಗಳು, ತಾಳೇಗರಿ, ನಾಣ್ಯಗಳು, ಆಯುಧಗಳು, ಕಂಚಿನ ವಿಗ್ರಹಗಳು ಮತ್ತಿತರ ಪ್ರಾಚೀನ ವಸ್ತುಗಳು ಕಂಡುಬಂದ್ದಲ್ಲಿ, ಇದ್ದಲ್ಲಿ ಕ್ಯೂರೇಟರ್, ಸರ್ಕಾರಿ ಪ್ರಾಚ್ಯ ವಸ್ತು ಸಂಗ್ರಹಾಲಯ, ಮದಲಘಟ್ಟ, ರಸ್ತೆ, ಹೂವಿನಹಡಗಲಿ, ಬಳ್ಳಾರಿ ಇವರಿಗೆ ಮಾಹಿತಿ ತಿಳಿಸಬೇಕು. ಮಾಹಿತಿಗಾಗಿ ದೂ. 08399 240080, ಮೊ. 99643 57859 ಅನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.
28ರೊಳಗೆ ಆಟೋಗೆ ಮೀಟರ್ ಅಳವಡಿಸಿ: ಡಿಸಿ ಆದೇಶ
ಬಳ್ಳಾರಿ: ನಗರದಲ್ಲಿ ಸಂಚರಿಸುವ ಎಲ್ಲ ಆಟೋರಿಕ್ಷಾಗಳಿಗೆ ಫೇರ್ ಮೀಟರ್ ಅಳವಡಿಸಲು ಮೇ 28ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಆದೇಶಿಸಿದ್ದಾರೆ. ಈ ಮೊದಲು ಏ.21ರೊಳಗೆ ಮೀಟರ್ ಅಳವಡಿಸಲು ಕಡ್ಡಾಯಗೊಳಿಸಲಾಗಿತ್ತು. ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಲಾಗಿದ್ದು, ಮೇ 29ರೊಳಗೆ ಫೇರ್ ಮೀಟರ್ ಅಳವಡಿಸದಿರುವ ಆಟೋಗಳನ್ನು ಜಪ್ತಿ ಮಾಡಿ ರು. 2000 ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಬೈಕ್ ಡಿಕ್ಕಿ: ಮಹಿಳೆ ಸಾವು
ಬಳ್ಳಾರಿ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಬೈಲೂರು ಗ್ರಾಮದ ರಾಮಕ್ಕ (65) ಎಂದು ಗುರುತಿಸಲಾಗಿದೆ. ಮೇ 22ರಂದು ಗ್ರಾಮದಲ್ಲಿ ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬಳ್ಳಾರಿ ಕಡೆಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

