ಇಂದು ಆರಾಧನಾ ಮಹೋತ್ಸವ
ಹೊಸಪೇಟೆ: ಶ್ರೀಮಧ್ವ-ದಾಸಸಾಹಿತ್ಯ ಪ್ರತಿಷ್ಠಾನ ಹಾಗೂ ದಾಸವಾಣಿ ವೈಭವ ಸಮಿತಿ ಆಶ್ರಯದಲ್ಲಿ ವಿಜಯದಾಸರ 258ನೇ ಆರಾಧನಾ ಮಹೋತ್ಸವ ನಗರದ ಮಹಿಳಾ ಸಮಾಜ ಶಾಲೆಯ ಆವರಣದಲ್ಲಿ ನ. 12ರಂದು ಸಂಜೆ 5-30ಕ್ಕೆ ನಡೆಯಲಿದೆ. ಮಂತ್ರಾಲಯದ ಶ್ರೀಪಾದಂಗಳವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರಾಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮಂತ್ರಾಲಯ ಸಂಸ್ಕೃತ ವಿದ್ಯಾಪೀಠದ ಡಾ. ಕಡಪ ರಾಘವೇಂದ್ರಚಾರ್ಯ, ಶ್ರೀಮಧ್ವ ದಾಸಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಗುರುರಾಜ ದಿಗ್ಗಾವಿ, ಮತ್ತು ದಾಸವಾಣಿ ವೈಭವ ಸಮಿತಿ ಅಧ್ಯಕ್ಷ ಬಾಲಾಜಿಸಿಂಗ್, ಸ್ಥಳೀಯ ಎಸ್ಎಲ್ವಿ ಯಾತ್ರಿ ನಿವಾಸದ ಮಾಲೀಕ ಸುರೇಶ್ ಪ್ರಭು ಭಾಗವಹಿಸುವರು. ವಿಶೇಷ ಉಪನ್ಯಾಸ ಹಾಗೂ ರಾಯಚೂರಿನ ಹರಿದಾಸ ಹವ್ಯಾಸಿ ಕಲಾವಿದರ ಸಂಘದಿಂದ ಶ್ರೀವಿಜಯದಾಸರು ನಾಟಕ ಪ್ರದರ್ಶನಗೊಳ್ಳಲಿದೆ.
ಇಂದು ವಿಜಯದಾಸರ ಆರಾಧನೆ
ಹೊಸಪೇಟೆ: ಇಲ್ಲಿನ ದಾಸ ಸಾಹಿತ್ಯ (ತಿ.ತಿ.ದೇ.) ಭಜನಾ ಮಂಡಳಿಗಳ ಸಮೂಹದಿಂದ ವಿಜಯದಾಸರ 258ನೇ ಆರಾಧನಾ ಮಹೋತ್ಸವ ಸಮಾರಂಭ ನ. 12ರಂದು ಬೆಳಗ್ಗೆ 10 ಗಂಟೆಗೆ ನಗರದ ವಿಜಯ ಚಿತ್ರಮಂದಿರ ಸಮೀಪದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಲಿದೆ. ಆರಾಧನೆ ಮಹೋತ್ಸವ ನಿಮಿತ್ತ ಪಂಡಿತರಿಂದ ವಿಜಯ ದಾಸರ ಜೀವನ ಚರಿತ್ರೆ ಉಪನ್ಯಾಸ ಹಾಗೂ ಭಜನಾ ಮಂಡಳಿಗಳಿಂದ ದಾಸರ ಕೀರ್ತನೆ ಮೇಲಿನ ಹಾಡಿನ ಸ್ಪರ್ಧೆ, ಅಂತಾಕ್ಷರಿ ಸ್ಪರ್ಧೆ ಮತ್ತು ರಸಪ್ರಶ್ನೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿಜೇತ ಭಜನಾ ಮಂಡಳಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ತಿರುಪತಿಯ ದಾಸ ಸಾಹಿತ್ಯ ಪ್ರಾಜೇಕ್ಟ್ನ ಜಿಲ್ಲಾ ಸಂಚಾಲಕ ಮಧ್ವಾಚಾರ್ಯ ಎಚ್. ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ
ಹೂವಿನಹಡಗಲಿ: ಅರ್ಹತಾ ಜ. 1, 2014ಕ್ಕೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ 88 ಹಡಗಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ)ಗಳಿಗೆ ಹಕ್ಕು ಮತ್ತು ಆಕ್ಷೇಪಣೆಗಳು ಅಂದರೆ ಸೇರ್ಪಡೆ, ತೆಗೆದು ಹಾಕುವಿಕೆ, ಸ್ಥಳಾಂತರ ಕ್ರಮವಾಗಿ ನಮೂನೆ- 6, 7, 8, 8ಎ, ಅರ್ಜಿ ಸಲ್ಲಿಸಲು ಅ. 30ರಿಂದ ನ. 29ರ ವರೆಗೆ ಸಲ್ಲಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

