ಬಳ್ಳಾರಿ

ನಾಳೆ ಸಹಕಾರ ಸಪ್ತಾಹ

Published On :

ಹೊಸಪೇಟೆ: 60ನೇ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಹಾಗೂ ಸಮಾರೋಪ ಸಮಾರಂಭ ನಗರದ ಬಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನ. 20ರಂದು ಬೆಳಗ್ಗೆ 11.30ಕ್ಕೆ ನಡೆಯಲಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್, ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಇಪ್ಕೋ ಸಹಕಾರ ರಸಗೊಬ್ಬರ ಸಂಸ್ಥೆ, ಸಹಕಾರ ಇಲಾಖೆ, ಜಿಲ್ಲೆಯ ಎಲ್ಲ ವರ್ಗದ ಸಹಕಾರಿ ಸಂಘಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹರಪ್ಪನಹಳ್ಳಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಪಿ. ರವೀಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜೆ.ಎಂ. ವೃಷಭೇಂದ್ರಯ್ಯ ಅಧ್ಯಕ್ಷತೆ ವಹಿಸುವರು.  ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ್ ರೆಡ್ಡಿ, ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಚೊಕ್ಕ ಬಸವನಗೌಡ, ಮುದ್ದಾಬಳ್ಳಿ ಶೇಖರಪ್ಪ, ಎಲ್.ಎಸ್. ಆನಂದ್, ಬಿ. ಚಂದ್ರಶೇಖರ್, ರಾಜಶ್ರೀ ಅಗಸರ್, ವಿಶ್ವನಾಥ ಹಿರೇಮಠ, ಬಂಡೆ ರಂಗಪ್ಪ, ಜಿ. ಕುಬೇರಪ್ಪ, ಆರ್.ಎಂ. ಕಲ್ಲೊಳ್ಳಿ, ಎಚ್.ಸಿ. ಬಸವರಾಜ್, ಡಾ. ಜಿ. ಉಮೇಶ್, ಬಿ. ಮಹೇಶ್ವರ, ರಾಜಾರೆಡ್ಡಿ, ಡಿ. ದೇವೇಂದ್ರಪ್ಪ, ಎಸ್. ಸಿದ್ದಯ್ಯ, ಚಂದ್ರಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಜಯನಗರ ಕಾಲೇಜು ಪ್ರಾಚಾರ್ಯ ಎಸ್.ಎಸ್. ಪೊಲೀಸ್‌ಪಾಟೀಲ್ ಮುಖ್ಯ ಭಾಷಣಕಾರರಾಗಿ ಆಗಮಿಸುವರು ಎಂದು ಬಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಕುಬೇರಪ್ಪ, ಜಿ.ಪಿ. ಪಾಂಡುರಂಗಪ್ಪ, ವಿ. ಶಂಕ್ರಾಚಾರ್ಯ ತಿಳಿಸಿದ್ದಾರೆ.
ಆರ್ಥಿಕ ಜನಗಣತಿ
ಕೂಡ್ಲಿಗಿ: ಪಟ್ಟಣದ 20 ವಾರ್ಡ್‌ಗಳಲ್ಲಿ 6ನೇ ಆರ್ಥಿಕ ಜನಗಣತಿಗೆ ಮುಖ್ಯಾಧಿಕಾರಿ ಫಿರೋಜ್‌ಖಾನ್ ಚಾಲನೆ ನೀಡಿದರು. ಸದರಿ 6ನೇ ಆರ್ಥಿಕ ಜನಗಣತಿಯ ಸಮೀಕ್ಷೆಯಲ್ಲಿ ಸೂಪರ್ ವೈಜರ್ ಆದ ಗಜಾಪುರ ಭರಮಪ್ಪ ಗಣತಿದಾರರಾದ ಎಂ. ಓಬಳೇಶ, ಎಚ್. ಶೆಕ್ಷಾವಲಿ ಸಾಬ್, ಎ. ನೂರುಲ್ಲಾ, ಬಿ. ರಾಮು, ಟಿ.ಎಂ. ಲಿಂಗಯ್ಯ, ಎಚ್.ವಿ. ಗುರುಮೂರ್ತಿ, ಎಂ. ಕೊಟ್ರೇಶ, ಪಿ. ಕೊಟ್ರೇಶ, ಬಿ. ರಾಘವೇಂದ್ರ, ರಮೇಶ, ಕೆ. ಗೀರೀಶ್, ಖಾಜಾ, ಎಂ. ಎಂ.ಬಸವರಾಜ, ಕೆ. ವೆಂಕಟೇಶ ಹಾಗೂ ಬಿ. ವಿಕಾಸ್ ಇದ್ದರು.
ಬೆಂಬಲ ಬೆಲೆ: ಸ್ವಾಗತ
ಬಳ್ಳಾರಿ: ಬತ್ತಕ್ಕೆ ರು. 1600 ಬೆಂಬಲ ಘೋಷಿಸಿರುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಜಿ. ಪುರುಷೋತ್ತಮಗೌಡ ಸ್ವಾಗತಿಸಿದ್ದಾರೆ. ಇದು ನ. 12ರಂದು ಸಿಂಧನೂರಿನಲ್ಲಿ ಬತ್ತಕ್ಕೆ ಬೆಂಬಲ ಬೆಲೆಗಾಗಿ ನಡೆದ ಬಳ್ಳಾರಿ, ಕೊಪ್ಪಳ, ದಾವಣಗೆರೆ, ರಾಯಚೂರು, ಯಾದಗಿರಿ ಜಿಲ್ಲೆಗಳ ರೈತರ ಸಮಾವೇಶಕ್ಕೆ ಸಂದ ಜಯವಾಗಿದೆ. ಸಮಾವೇಶದ ಆಗ್ರಹಕ್ಕೆ ಎಚ್ಚೆತ್ತ ಸರ್ಕಾರ ಸಚಿವ ಸಂಪುಟ ಸಭೆ ಕರೆದು ಬೆಂಬಲ ಬೆಲೆ ನೀಡಿದೆ. ಇದು ಕಡಿಮೆಯಾಗಲಿದ್ದು, ಬತ್ತಕ್ಕೆ ಬೆಲೆ ದೊರೆಯಬೇಕಿದೆ ಎಂದಿದ್ದಾರೆ.

ಜಾನುವಾರುಗಳನ್ನು ಆರೈಕೆ ಮಾಡಿ
ಹೊಸಪೇಟೆ: ಜಾನುವಾರುಗಳನ್ನು ಮನೆಯಲ್ಲಿರುವ ಮನುಷ್ಯರಂತೆ ಸರಿಯಾಗಿ ಆರೈಕೆ ಮಾಡುವ ಮೂಲಕ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಟಿ. ಮಹದೇವಪ್ಪ ಹೇಳಿದರು.
ನಗರದ ಅನಂತಶಯನಗುಡಿಯಲ್ಲಿ ಸೋಮವಾರ ಪಶುವೈದ್ಯಕೀಯ ಸೇವಾ ಇಲಾಖೆ, ಥಿಯೋಸಫಿಕಲ್ ಸೊಸೈಟಿ ಹಮ್ಮಿಕೊಂಡಿದ್ದ ಜಾನುವಾರು ರೋಗಗಳ ತಪಾಸಣೆ ಹಾಗೂ ಕಾಲುಬಾಯಿ ರೋಗ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನಂತಶಯನಗುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮೂಲಿಮನಿ ಭರಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಕುಲಾಯಪ್ಪ, ಎಸ್.ಪಿ. ಬಸವರಾಜಪ್ಪ,ಥಿಯೋಸಫಿಕಲ್ ಸೊಸೈಟಿ ಕಾರ್ಯದರ್ಶಿ ಅಶೋಕ ಜೀರೆ, ಸದಸ್ಯ ಬಿಸಾಟಿ ಸೋಮಪ್ಪ, ಎನ್.ಎಸ್. ರೇವಣಸಿದ್ದಪ್ಪ, ಡಾ.ಕೆ. ಹನುಮಂತರಾವ್, ಕಾಂತಪ್ಪ, ಡಿ.ಎನ್. ಸುಜಾತಾ ರೇವಣಸಿದ್ದಪ್ಪ, ಜಗದೀಶ್ ಸೇರಿದಂತೆ ಇತರರು ಇದ್ದರು. ಉಚಿತ ಶಿಬಿರದಲ್ಲಿ ಅನಂತಶಯನಗುಡಿ ಮತ್ತು ಕೊಂಡನಾಯಕನಹಳ್ಳಿ ಗ್ರಾಮದ ರೈತರ ಮನೆಗಳಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ಮತ್ತು ಲಸಿಕೆ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.