ಮನಸೆಳೆದ ಸಂಗೀತ ಕಾರ್ಯಕ್ರಮ
ಹೂವಿನಹಡಗಲಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸ್ಥಳೀಯ ಪ್ರಾಯೋಜಿತ ಮತ್ತು ಪಪಂ ಕಾರ್ಯಕ್ರಮದಡಿ ಸಾಂಸ್ಕೃತಿಕ ಕಾರ್ಯಕ್ರಮ ತಾಲೂಕಿನ ಹೊಳಗುಂದಿ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ಜರುಗಿತು.
ಸುಗಮ ಸಂಗೀತ ಗಾಯನದ ರಸದೌತಣ, ತತ್ವಪದ, ಜಾನಪದ, ಭಜನಾ ಹಾಡುಗಳ ಸುಗಮ ಸಂಗೀತ ನೆರೆದಿದ್ದ ಸಂಗೀತಾಸ್ತರಿಗೆ ರಸದೌತಣವನ್ನು ಸೋಗಿ ವೈ. ಮಲ್ಲಪ್ಪ, ಕೆ. ಹೇಮಣ್ಣ ನಡೆಸಿಕೊಟ್ಟರು.
ಸೋಗಿ ಗವಾಯಿ ವೈ. ಮಲ್ಲಪ್ಪ ಮಾತನಾಡಿ, ವೈಜ್ಞಾನಿಕತೆ ಮುಂದುವರಿದಂತೆ ಮನುಷ್ಯ ತನ್ನ ಮನೋರಂಜನಾ ಚಟುವಟಿಕೆಗಳನ್ನು ಬದಲಾಯಿಸುತ್ತಿದ್ದಾನೆ. ದೂರದರ್ಶನ, ರೇಡಿಯೋ, ಚಲನಚಿತ್ರ ಹಾಗೂ ಪಾಶ್ಚಿಮಾತ್ಯರ ಪ್ರಭಾವದಿಂದ ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿವೆ ಎಂದರು.
ಸುಗಮ ಸಂಗೀತ, ಜಾನಪದ ಗೀತೆಗಳು ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿವೆ. ಕಲೆ, ಸಂಗೀತ, ಸಾಹಿತ್ಯ ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯವಾಗಬೇಕಿದೆ ಎಂದರು.
ಸೋಗಿಯ ಕೆ. ಹೇಮಣ್ಣ, ಸಂಗೀತಾ, ವೀಣಾ ಸುಗ್ಗಿ ಹಾಡು, ಜಾನಪದ ಗೀತೆಗಳನ್ನು ಹಾಡಿ ಮನರಂಜಿಸಿದರು. ಶಿಕ್ಷಕ ಎ. ಚಂದ್ರಪ್ಪ ತಬಲ ಸಾಥ್ ನೀಡಿದರು. ಎ.ಎಂ. ಕೊಟ್ರಯ್ಯ ಸಂಗೀತ ಗಾಯನ ನಡೆಸಿಕೊಟ್ಟರು. ಸಭೆಯಲ್ಲಿ ಎಚ್.ಎಂ. ಮಲ್ಲಿಕಾರ್ಜುನಯ್ಯ, ಎಂ. ವಾಮದೇವಪ್ಪ, ಬ್ರಹ್ಮಪ್ಪ, ಎಂ. ಹೇಮಣ್ಣ, ಎಸ್. ಕೊಟ್ರೇಶ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

