ಅನ್ಯರ ಟೀಕೆ ಬೇಡ: ಸಚಿವ ಪಿಟಿಪಿ
ಹೂವಿನಹಡಗಲಿ: ಕಾಡು, ನಾಡುಗಳಲ್ಲಿ ವಾಸ ಮಾಡುತ್ತಿರುವ ಪ್ರಾಣಿಗಳೆ ಗುಣದಲ್ಲಿ ಮೇಲು. ಆದರೆ ಮಾನವ ಅದಕ್ಕಿಂತ ಕೀಳಾಗಿದ್ದು, ಪ್ರಾಣಿಗಳಿಗೆ ಸೂಕ್ಷ್ಮತೆ ಹಾಗೂ ಸಂದರ್ಭದ ಅರಿವಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾರ್ಮಿಕವಾಗಿ ನುಡಿದರು.
ತಾಲೂಕು ಕ್ರೀಡಾಂಗಣದಲ್ಲಿ ಕನಕ ಜಯಂತಿ ನಿಮಿತ್ತ ತಾಲೂಕು ಕನಕ ಯುವಸೇನೆ ಆಯೋಜಿಸಿದ್ದ ರಾಜ್ಯ ಮಟ್ಟದ ಟಗರಿನ ಕಾಳಗಕ್ಕೆ ಚಾಲನೆ ನೀಡಿ ಮಾತನಾಡಿ, ಮಾನವರಾದ ನಾವು ಜವಾಬ್ದಾರಿ ಮರೆತು ಇನ್ನೊಬ್ಬರ ಅವಹೇಳನ, ಟೀಕೆ ಮಾಡುವುದೆ ಕೆಲಸ ಎಂದುಕೊಳ್ಳುತ್ತೇವೆಂದು ಸಚಿವರು ಪರೋಕ್ಷವಾಗಿ ಹಿತಶತ್ರುಗಳ ನಡೆ ಪ್ರಾಸ್ತಾಪಿಸಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದರು.
ಭಾಷಣದುದ್ದಕ್ಕೂ ಯಾರನ್ನೋ ಗುರಿಯಾಗಿರಿಸಿ ಜರಿಯುತ್ತ, ಒಬ್ಬ ವ್ಯಕ್ತಿ ಮೊದಲು ತನ್ನ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ, ತಾನು ಎಷ್ಟರಮಟ್ಟಿಗೆ ಪ್ರಾಮಾಣಿಕನಾಗಿದ್ದೇನೆ ಎಂಬುದನ್ನು ಅರಿತು ಮತ್ತೊಬ್ಬರ ಬಗ್ಗೆ ಟೀಕೆ ಮಾಡಬೇಕೆಂದರು.
ರಾಜ್ಯ ಮಟ್ಟದ ಟಗರಿನ ಕಾಳಗಕ್ಕೆ ಪ್ರೋತ್ಸಾಹಿಸಿದ ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಎಪಿಎಂಸಿ ಮಾಜಿ ಅಧ್ಯಕ್ಷ ಪಿ. ವಿಜಯಕುಮಾರ್, ಎಂ. ಪರಮೇಶ್ವರಪ್ಪ, ಬಿ. ಹನುಮಂತಪ್ಪ ಅವರನ್ನು ಸಚಿವರು ಸನ್ಮಾನಿಸಿದರು.
ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಅರವಳ್ಳಿ ವೀರಣ್ಣ, ಕೋಡಿಹಳ್ಳಿ ಮುದುಕಪ್ಪ, ಅಟವಾಳಗಿ ಕೊಟ್ರೇಶ್, ಜ್ಯೋತಿ ಮಲ್ಲಣ್ಣ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ, ಈಟಿ ಹನುಮೇಶ್, ಜಿಪಂ ಸದಸ್ಯ ಜಿ. ವಸಂತ, ಕನಕ ಬ್ಯಾಂಕಿನ ಅಧ್ಯಕ್ಷ ಈಟಿ ಲಿಂಗರಾಜ್, ಗುರುವಿನ ರವೀಂದ್ರ ಇದ್ದರು. ಶಿಕ್ಷಕ ಎಂ. ನಾಗರಾಜ್ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

