ಆಂಧ್ರ ವಿಭಜನೆ: ಪ್ರತಿಭಟನೆ
ಬಳ್ಳಾರಿ: ಅಖಂಡ ಆಂಧ್ರಪ್ರದೇಶ ವಿಭಜಿಸಬಾರದು ಎಂದು ಆಗ್ರಹಿಸಿ ಬಳ್ಳಾರಿಯಲ್ಲಿ ಸಮೈಖ್ಯ ಆಂಧ್ರ ಪರಿರಕ್ಷಣಾ ಸಮಿತಿ ಸದಸ್ಯರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಿದರು.
ಯಾವುದೇ ಕಾರಣಕ್ಕೂ ಅಖಂಡ ಆಂಧ್ರಪ್ರದೇಶವನ್ನು ವಿಭಜಿಸಬಾರದು, ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ, ಸೀಮಾಂಧ್ರ ರಾಜ್ಯಗಳನ್ನಾಗಿ ಹಾಗೂ ಹೈದರಾಬಾದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಇಂತಹ ವಿಭಜನೆ ಮಾಡಲು ಅವಕಾಶ ನೀಡದೆ, ವಿಶಾಲಾಂಧ್ರವಾಗಿ ಇರಬೇಕೆಂದು ಆಗ್ರಹಿಸಿದರು. ಸಮಿತಿಯ ಕೆ. ಚನ್ನಪ್ಪ, ಕೆ. ಕೋಟೇಶ್ವರರಾವ್, ಪಿ. ಧನಂಜಯ, ಪತ್ರಕರ್ತ ಜಿ. ಪ್ರಭಾಕರ, ಶ್ಯಾಮಸುಂದರ್ ಶೀಲಾ, ಪ್ರಸಾದ್, ಗೋಪಾಲ್, ಚೌಧರಿ, ರಾಮಾಂಜನೇಯಲು, ನಾಯ್ಡು ಸೇರಿದಂತೆ ಇತರರು ಇದ್ದರು.
ಸಮೈಖ್ಯ ಪರಿರಕ್ಷಣಾ ಪ್ರತಿಭಟನೆಗೆ ಜನತೆ ಆಶ್ಚರ್ಯ
ಬಳ್ಳಾರಿ: ಆಂಧ್ರಪ್ರದೇಶದ ಸಮಸ್ಯೆಗೆ ರಾಜ್ಯದ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸುವುದು ಸರಿಯೇ? ಎಂಬ ಕುರಿತು ಇದೀಗ ಚರ್ಚೆ ನಡೆಯುತ್ತಿದೆ.
ಬಳ್ಳಾರಿಯಲ್ಲಿ ಸಮೈಖ್ಯ ಆಂಧ್ರಪ್ರದೇಶಕ್ಕೆ ಹೋರಾಟ ನಡೆಯುತ್ತಿರುವುದು ಸರಿಯೇ? ಕಳೆದ ಹಲವು ದಿನಗಳಿಂದ ಆಂಧ್ರಪ್ರದೇಶದಲ್ಲಿ ಪ್ರತಿಭಟನೆ ಸೇರಿದಂತೆ ಈಗಲೂ ಆಂಧ್ರಪ್ರದೇಶದಲ್ಲಿ ಶಾಂತಾ ವಾತಾವರಣ ಇಲ್ಲ. ಅಲ್ಲಿನ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಳ್ಳಾರಿಯಲ್ಲಿ ಹೋರಾಟ ಮಾಡಲಾಗುತ್ತಿದೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದ ಮೂಲದ ಜಿಲ್ಲೆಯವರು ಬಳ್ಳಾರಿ ಜಿಲ್ಲೆಯಲ್ಲಿರುವುದರಿಂದ ಈ ರೀತಿಯ ಪ್ರತಿಭಟನೆಗಳು ಗೊಂದಲ ಸೃಷ್ಟಿಸುವುದಿಲ್ಲವೇ ಎಂಬ ಚರ್ಚೆಗಳು ನಡೆಯುತ್ತಿವೆ. ಹೋರಾಟ, ಪ್ರತಿಭಟನೆ ಜನಸಾಮಾನ್ಯರ ಹಕ್ಕು. ಇದನ್ನು ಯಾರು ತಡೆಯಲು ಸಾಧ್ಯವಿಲ್ಲ. ಆದರೆ ಹೋರಾಟ ನಮ್ಮ ಹಕ್ಕುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಇದ್ದರೆ ಅದಕ್ಕೆ ಅರ್ಥ ಸಿಗುತ್ತದೆ. ನೆರೆ ರಾಜ್ಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡುವುದು ಎಷ್ಟು ಸರಿ? ಎಂಬುದು ಸಾರ್ವಜನಿಕರ ಪ್ರಶ್ನೆ.
ಸರಿಯಲ್ಲ: ಈ ಕುರಿತು ಸಾಹಿತಿ ಕುಂ. ವೀರಭದ್ರಪ್ಪ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ನೆರೆ ಹೊರೆಯ ರಾಜ್ಯಗಳ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುವುದು ಸರಿಯಲ್ಲ. ನೆರೆ ರಾಜ್ಯಗಳ ಸಮಸ್ಯೆಗಳ ಕುರಿತು ನಮ್ಮ ರಾಜ್ಯದಲ್ಲಿ ಹೋರಾಟ ಮಾಡಿ, ಇಲ್ಲಿನ ಜನರಲ್ಲಿ ಗೊಂದಲ ಸೃಷ್ಟಿಸುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

