ವೀರಶೈವ, ಲಿಂಗಾಯತ ಒಂದೇ ಮನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 12
ವೀರಶೈವ ಲಿಂಗಾಯತ ಎಂಬುದು ಒಂದೇ ಮನೆಯಂತಿದ್ದು, ಅದನ್ನು ದಯಮಾಡಿ ವಿಂಗಡಿಸಬೇಡಿ ಎಂದು ರಾಜ್ಯ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಎನ್. ತಿಪ್ಪಣ್ಣ ಮನವಿ ಮಾಡಿದರು.
ನಗರದ ಮಿಲ್ಲರ್ ಪೇಟೆಯ ಕಲ್ಯಾಣ ಸ್ವಾಮಿ ಮಠದಲ್ಲಿ ನಡೆಯುತ್ತಿರುವ ಶ್ರೀದೇವಿ ಪುರಾಣ ಪ್ರವಚನದ 7ನೇ ದಿನದ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೀರಶೈವ, ಲಿಂಗಾಯಿತ, ಲಿಂಗಾಧರ ಎಂದರೆ ಒಂದೇ. ಇವು ಬೇರೆ ಬೇರೆ ಅಲ್ಲ ಎಂಬ ದೃಷ್ಟಿಯಿಂದ ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆಯಾಗಿದೆ. ಈ ತಾರತಮ್ಯವನ್ನು ವಿದ್ವಾಂಸರೇ ಮಾಡುತ್ತಿದ್ದಾರೆ ಇದು ಸರಿಯಲ್ಲ. ದಯವಿಟ್ಟು ಭೇದ-ಭಾವ ಮಾಡಬೇಡಿ ಎಂದು ವಿನಂತಿಸಿದರು. ಇತ್ತೀಚಿನ ಬೆಳವಣಿಯಲ್ಲಿ ವೀರಶೈವ, ಲಿಂಗಾಯತ, ಬೇರೆ ಬೇರೆ ಎಂಬ ಅಪಸ್ವರ ತುಂಬಾ ವಿಷಾದನೀಯ ಎಂದರು.
ಕೊಟ್ಟೂರು ಚಾನುಕೋಟಿಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿದರು. ಕಲ್ಯಾಣ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಉಡಿತುಂಬುವ ಕಾರ್ಯಕ್ರಮದ ಭಕ್ತಿ ಸೇವೆಗೈದ ದೊಡ್ಡಗಟ್ಟಿ ಶಿವಪ್ಪ ಮತ್ತು ಓಂಕಾರಮ್ಮ ಮತ್ತಿತರರನ್ನು ಸನ್ಮಾನಿಸಲಾಯಿತು.
ಹೂವಿನ ಹಡಗಲಿ ಹಿರಿಯಶಾಂತ ವೀರಸ್ವಾಮೀಜಿ, ನಂದೀಪುರದ ಮಹೇಶ್ವರ ಸ್ವಾಮೀಜಿ, ಹತ್ತಿಗುಡುದೂರು ಗಿರಿಮಲ್ಲ ಶಿವಾಚಾರ್ಯರು, ದುಂಡಯ್ಯ ಸ್ವಾಮೀಜಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೋಭಾ ಬೆಂಡಿಗೇರೆ, ಬಿಜೆಪಿ ಮುಖಂಡ ಕೆ. ರಾಮಲಿಂಗಪ್ಪ, ಪಾಲಿಕೆ ಸದಸ್ಯೆ ನಾಗಲಕ್ಮೀ, ಸಾಹುಕಾರ್ ಸತೀಷ್ ಬಾಬು, ಕೋರಿ ವಿರೂಪಾಕ್ಷಪ್ಪ, ಬ್ರೂಸ್ಪೇಟೆ ಠಾಣೆಯ ಪಿಎಸ್ಐ ನಾಗರಾಜ್, ಅಕ್ಕಿ ಮಲ್ಲಿಕಾರ್ಜುನ, ಹಾಲೇಶ್ಗೌಡ ಮತ್ತಿತರರು ಉಪಸ್ಥಿತರಿದ್ದರು.
ಬಂಡ್ರಾಳು ಮೃತ್ಯುಂಜಯಸ್ವಾಮಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

