ಗಮನ ಸೆಳೆದ ಜಾನಪದ ಗೀತೆ ಗಾಯನ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರಿಶಿಷ್ಟ ಜಾತಿ ಪ್ರಾಯೋಜಿತ ಕಾರ್ಯಕ್ರಮದಡಿ ನಗರದ ಬಸವ ಭವನದ ಆವರಣದಲ್ಲಿ ದಸರಾ ಸಂಭ್ರಮದ ನಿಮಿತ್ತ ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು.
ಇಲಾಖೆಯೊಂದಿಗೆ ಸಿ. ಅಶ್ವತ್ಥ್ಥ್ ಕಲಾ ಬಳಗ, ಮಂಜುನಾಥ ಲಲಿತ ಕಲಾ ಬಳಗ, ಜ್ಞಾನಜ್ಯೋತಿ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಿಮ್ಮಲಾಪುರದ ಹನುಮಯ್ಯ ಮತ್ತು ತಂಡ ಪ್ರಸ್ತುತಪಡಿಸಿದ ಜಾನಪದ ಗೀತೆ ಗಾಯನ ಎಲ್ಲರ ಮನ ಸೆಳೆಯಿತು. ನಂತರ ನಡೆದ ಯಲ್ಲನಗೌಡ ಶಂಕರಬಂಡೆ ಹಾಡಿದ ನಾಡಗೀತೆಗೆ, ಮಂಜುನಾಥ ಗೋವಿಂದವಾಡ ಅವರು ಕುಂಚವನ್ನು ಪ್ರದರ್ಶಿಸಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಆಕರ್ಷಣೆ ನೀಡಿತು. ಕಲಾವಿದರಾದ ದೊಡ್ಡಬಸವ ಕಗ್ಗಲ್, ಕವಿತಾ ಹಾಗೂ ವಸಂತಕುಮಾರ್, ಅಲಕಾ ದೇಶಪಾಂಡೆ, ಅಶ್ವಿನಿ, ಅಮಾತಿ ಬಸವರಾಜ್ ಸಂಗೀತ ನಮನ ಸಲ್ಲಿಸಿದರು. ಬಸವರಾಜ್ ಬುಡ್ಡಿ ಕೀಬೋರ್ಡ್, ಉಮೇಶ್ ಸಂಡೂರು ಹಾಗೂ ಸುಧಾಕರ್ ತಬಲಾ, ಫ್ರಾನ್ಸಿಸ್ ಗಿಟಾರ್, ಸುರೇಶ್ ರಿಧಮ್ ಪ್ಯಾಡ್ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ದಿ. ಜಾಲಿಬೆಂಚಿ ದೊಡ್ಡಬಸವಾರ್ಯ ಗವಾಯಿಗಳ ಪತ್ನಿ ಪಾರ್ವತಮ್ಮ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

