ಯುವಜನೋತ್ಸವ ಮುಂದೂಡಿಕೆ
ಕೊಪ್ಪಳ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಹಾಗೂ ಕೊಪ್ಪಳ ಕ್ರೀಡಾ ಇಲಾಖೆ, ಗಂಗಾವತಿ ಹಾಗೂ ಮಹಾಲಕ್ಷ್ಮಿ ಕಲಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಅ. 20ರಂದು ಕೊಪ್ಪಳ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮವು ಗಂಗಾವತಿಯ ಎಂ.ಎನ್.ಎಂ. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲು ಯೋಜಿಸಲಾಗಿತ್ತು. ಆದರೆ, ಕಾರ್ಯಕ್ರಮವನ್ನು ಅನಿವಾರ್ಯ ಕಾರಣದಿಂದ ಅ. 26ಕ್ಕೆ ಮುಂದೂಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೈ.ಸುದರ್ಶನರಾವ್ ತಿಳಿಸಿದ್ದಾರೆ.
ಜಾನಪದ ನೃತ್ಯ, ಜಾನಪದ ಗೀತೆ, ನಾಟಕ (ಹಿಂದಿ,ಇಂಗ್ಲಿಷ್), ಭರತನಾಟ್ಯ, ತಬಲ ಸೋಲೋ, ಕೊಳಲು, ಶಾಸ್ತ್ರೀಯ ಸಂಗೀತ, ವೀಣಾ, ಆಶುಭಾಷಣ, ಕುಚುಪುಡಿ ನೃತ್ಯ, ಗಿಟಾರ್ ಸೋಲೋ, ಹಾರ್ಮೋನಿಯಂ ಸೇರಿದಂತೆ ಒಟ್ಟು ಹದಿನಾರು ಸ್ಪರ್ಧೆಗಳನ್ನು ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಸಂಘಟಿಸಲಾಗುವುದು. ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ತಾಲೂಕಿನ ಯುವಕ-ಯುವತಿಯರ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ವಯೋವುತಿ ದೃಢೀಕರಣ ಪತ್ರದೊಂದಿಗೆ ಅ. 26 ರೊಳಗೆ ಗಂಗಾವತಿ ಎಂ.ಎನ್.ಎಂ. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯ ಸಂಘಟಕರಲ್ಲಿ ಹೆಸರು ನೋಂದಾಯಿಸಬೇಕು.
ಹೆಚ್ಚಿನ ಮಾಹಿತಿಗೆ ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಗಳಾದ ಗಂಗಾವತಿ ತಿಪ್ಪಯ್ಯ ಸ್ವಾಮಿ ಹಿರೇಮಠ ಮೊ. 9008363670, ಕೊಪ್ಪಳ ಎನ್.ಎಸ್. ಪಾಟೀಲ್ ಮೊ. 9980852735, ಯಲಬುರ್ಗಾ ಹನುಮಂತಪ್ಪ ಮೊ.8970288857, ಕುಷ್ಟಗಿ ಮಲ್ಲಿಕಾರ್ಜುನ ಮೊ. 9663058660 ಹಾಗೂ ಸಂಘಟಕ ಲಕ್ಷ್ಮಿ ಮೊ. 9986583845 ಅವರಲ್ಲಿ ನೋಂದಾಯಿಸಬೇಕು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

