ಬಳ್ಳಾರಿ

ಮಂಜುನಾಥ ನಾಯಕ್‌ಗೆ ಐಎಎಸ್ ಗರಿ

Published On :

ಬಳ್ಳಾರಿ: ಕೇಂದ್ರ ಆಡಳಿತ ನ್ಯಾಯಾಧೀಕರಣದ ಆದೇಶದ ಮೇರೆಗೆ ಜಿಲ್ಲಾ ಪಂಚಾಯಿತಿ ಸಿಇಒ ಮಂಜುನಾಥ ನಾಯಕ್ ಅವರಿಗೆ 2008 ಎ ಬ್ಯಾಚ್ ಅವಧಿಗೆ ಪೂರ್ವಾನ್ವಯವಾಗುವಂತೆ ಐಎಎಸ್ ಸೇವೆಗೆ ನೇಮಕಾತಿ ಅಧಿಸೂಚನೆ ಆದೇಶವನ್ನು ಕೇಂದ್ರ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ನರೇಂದ್ರಗೌತಮ್ ಹೊರಡಿಸಿದ್ದಾರೆ. ಮಂಜುನಾಥ ನಾಯಕ್ ಅವರಿಗೆ 2008 ಎ ಬ್ಯಾಚಿನಲ್ಲಿ ಮೊದಲಿಗರಾಗಿ ಪೂರ್ವಾನ್ವಯದಿಂದ ಅನ್ವಯವಾಗುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಆದೇಶ ಇಂದಿನಿಂದಲೇ ಅನುಷ್ಠಾನವಾಗುಂತೆ ಸ್ಪಷ್ಟಪಡಿಸಲಾಗಿದೆ ಎಂದು ಜಿಪಂ ಸಿಇಒ ಮಂಜುನಾಥ ನಾಯಕ್ ತಿಳಿಸಿದ್ದಾರೆ. ಆದೇಶ ಬಂದ ಹಿನ್ನೆಲೆಯಲ್ಲಿ ಮಂಜುನಾಥ್ ನಾಯಕ್ ಅವರಿಗೆ ಜಿಲ್ಲಾ ವಾರ್ತಾಧಿಕಾರಿ ಶ್ರೀನಿವಾಸ ಅವರು ಪುಷ್ಪಗುಚ್ಚ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು.
ವಾಲ್ಮೀಕಿ ಜಯಂತಿ
ಕೂಡ್ಲಿಗಿ: ಕೂಡ್ಲಿಗಿ ತಾಲೂಕು ಮೂಲೆಕಟ್ಟಿನ ಗ್ರಾಮ ತಮ್ಮಯ್ಯನಗುಡ್ಡದಲ್ಲಿ ವಾಲ್ಮೀಕಿ ಸಮುದಾಯದಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಗ್ರಾಪಂ ಸದಸ್ಯ ಬಿ. ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡ ಎ. ಅಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಜುಮ್ಮೋಬನಹಳ್ಳಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ತಿಪ್ಪೇಸ್ವಾಮಿ, ಕಾರ್ಯದರ್ಶಿ ಈಶ್ವರಯ್ಯ, ಬಿಲ್ ಕಲೆಕ್ಟರ್ ಗೋವಿಂದರಾಜ್, ಬಿ. ಓಬಣ್ಣ, ಪೆದ್ದೋಬಯ್ಯ, ಹರಪ್ಪನಹಳ್ಳಿ ಓಬಣ್ಣ, ಷಂಶುದ್ದೀನ್, ತಿಪ್ಪೇಸ್ವಾಮಿ, ಚಂದ್ರಶೇಖರ, ತಮ್ಮಪ್ಪ ಉಪಸ್ಥಿತರಿದ್ದರು. ನಂತರ ಗ್ರಾಮದಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಗೂಡ್ಸ್ ರೈಲು ಡಿಕ್ಕಿ: ಸಾವು
ಬಳ್ಳಾರಿ: ಬಹಿದೆರ್ಸೆಗೆ ಹೋದ ವ್ಯಕ್ತಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಸೋಮವಾರ ನಗರದ ಅಂಬೇಡ್ಕರ್ ವೃತ್ತ ಕೆಳಗಡೆ ರೇಲ್ವೆ ಕೆಳಸೇತುವೆಯಲ್ಲಿ ಸಂಭವಿಸಿದೆ.
ಮೃತನನ್ನು ದೇವಿನಗರದ ನಿವಾಸಿ ಮೋಹನ್ ರಾವ್ (51) ಎಂದು ಗುರುತಿಸಲಾಗಿದೆ. ಈ ಕುರಿತು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.