ಇಂದು ಜಾಗೃತಿ ಆಂದೋಲನ
ಬಳ್ಳಾರಿ: ಜಲ ಸಂರಕ್ಷಣೆ ರಾಷ್ಟೀಯ ಜಾಗೃತಿ ಆಂದೋಲನ ನಿಮಿತ್ತ ಜಲ ಸಂರಕ್ಷಣೆ ಕುರಿತಂತೆ ಅ. 23ರಂದು 'ನೀರಿನ ಉಳಿತಾಯ, ಭವಿಷ್ಯಕ್ಕೆ ತಳಪಾಯ' (ಖಛಢಜ ಗಿಛಡಿಜ್ಠ ಖಜ್ಛ್ಡ್ಠಜ ಋಜಛಡ್ಡ್ಠಿಜ) ಶೀರ್ಷಿಕೆಯಡಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 6, 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳು ಎ3, ಎ4 ಅಳತೆ ಡ್ರಾಯಿಂಗ್ ಹಾಳೆಯಲ್ಲಿ ಚಿತ್ರವನ್ನು ಬರೆದು, ತಮ್ಮ ಹೆಸರು, ತರಗತಿ, ವಿಳಾಸ ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ತಮ್ಮ ಶಾಲಾ ಮುಖ್ಯಗುರುಗಳ ಮುಖಾಂತರ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬಳ್ಳಾರಿಗೆ ಅ. 28ರೊಳಗಾಗಿ ಸಲ್ಲಿಸಿದಲ್ಲಿ ಜಿಲ್ಲಾ ಮಟ್ಟದ ಆಯ್ಕೆಗೆ ಪರಿಗಣಿಸಲಾಗುವುದು ಎಂದು ಡಿಡಿಪಿಐ ಟಿ. ನಾರಾಯಣ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಪಿಎಸ್ ಕಳವು
ಬಳ್ಳಾರಿ: ಎಪಿಎಂಸಿಯಲ್ಲಿ ಆವರಣದಲ್ಲಿರುವ ಕಾಟನ್ ಟೆಸ್ಟಿಂಗ್ ಲ್ಯಾಬ್ನಲ್ಲಿದ್ದ ಯುಪಿಎಸ್ ಕಳುವಾಗಿರುವ ಘಟನೆ ಮಂಗಳವಾರ ನಡೆದಿದೆ. ಎಪಿಎಂಸಿ ಆವರಣದಲ್ಲಿರುವ ಕಾಟನ್ ಅಸೋಸಿಯೇಷನ್ ಸಂಘಕ್ಕೆ ಸೇರಿದ ಕಾಟನ್ ಟೆಸ್ಟಿಂಗ್ ಲ್ಯಾಬ್ನಲ್ಲಿದ್ದ ರು. 24 ಸಾವಿರ ಮೌಲ್ಯದ ಯುಪಿಎಸ್ ಕಳುವಾಗಿದೆ. ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಠಾಣೆ ಪಿಎಸ್ಐ ಬಿ. ನಿರಂಜನ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತಾಗಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೂತನ ಶಾಖೆ ಉದ್ಘಾಟನೆ
ಹಗರಿಬೊಮ್ಮನಹಳ್ಳಿ: ಗ್ರಾಹಕರು ಬ್ಯಾಂಕ್ ಮೇಲಿಟ್ಟಿರುವ ಪ್ರೀತಿ, ವಿಶ್ವಾಸದಿಂದಲೇ ಕೇವಲ ರು. 8 ಸಾವಿರ ಬಂಡವಾಳದೊಂದಿಗೆ ಆರಂಭವಾದ ಸಿಂಡಿಕೇಟ್ ಬ್ಯಾಂಕ್ ಇಂದು ರು. 3,46,000 ಕೋಟಿ ಬಂಡವಾಳ ಹೊಂದುವ ಮೂಲಕ ದೇಶದ ಆಗ್ರಮಾನ್ಯ ಬ್ಯಾಂಕ್ಗಳಲ್ಲಿ ಒಂದಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಬಳ್ಳಾರಿ ವಲಯದ ಸಹಾಯಕ ಮಹಾಪ್ರಬಂಧಕ ಎ.ವಿ. ವಸಂತಕುಮಾರ ಹೇಳಿದರು. ತಾಲೂಕಿನ ಚಿಂತ್ರಪಳ್ಳಿ ಗ್ರಾಮದಲ್ಲಿ ನೂತನ ಶಾಖೆಗೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಬ್ಯಾಂಕ್ 88 ವರ್ಷ ಪೂರೈಸಿದ ಸವಿನೆನಪಿಗಾಗಿ ದೇಶದಾದ್ಯಂತ 88 ನೂತನ ಶಾಖೆಗಳನ್ನು ಆರಂಭಿಸಲಾಗಿದ್ದು, ಚಿಂತ್ರಪಳ್ಳಿ ಗ್ರಾಮದಲ್ಲಿ ನೂತನ ಶಾಖೆ ಆರಂಭಿಸಲಾಗಿದೆ ಎಂದರು. ಹಗರಿಬೊಮ್ಮನಹಳ್ಳಿ ಶಾಖೆಯ ಪ್ರಬಂಧಕ ಎಂ.ಎಚ್. ಸತ್ಯನಾರಾಯಣಶೆಟ್ಟಿ, ಹುಲ್ಮನಿ ದೇವೇಂದ್ರಪ್ಪ, ಮಹಾಲಿಂಗಪ್ಪ, ಬೆಳಕ್ಕಿ ರಾಮಪ್ಪ, ತಳವಾರ ಹುಲುಗಪ್ಪ, ಗ್ರಾಪಂ ಸದಸ್ಯ ಬಣಕಾರ ಸುರೇಶ, ಸಿಹಿನೀರು ಫಕ್ಕೀರಪ್ಪ, ಬಣಕಾರ ಗೋಣೆಪ್ಪ, ಸಿ. ರಾಮಪ್ಪ, ಮಡಿವಾಳರ ದೇವೇಂದ್ರಪ್ಪ, ಸೊನ್ನದ ಬಸವರಾಜ, ಎಚ್. ತಾರಾನಾಥ ಇದ್ದರು. ಡಿ.ಸಿ. ರುದ್ರೇಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

