ಮನೆಗಳು ಶ್ರೀಮಂತ, ಮನಸ್ಸು ಬಡ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 3
ಹಿಂದೆ ಋಷಿ ಮುನಿಗಳ ಮನೆಗಳು ಬಯಲು ಆಲಯಗಳು, ಕುಟಿರಗಳೇ ಆಗಿದ್ದವು. ಅವರ ಮನಸ್ಸುಗಳು ಮಾತ್ರ ಶ್ರೀಮಂತಿಕೆಯಿಂದ ಕೂಡಿದ್ದವು. ಆದರೆ ಇಂದು ನಮ್ಮ ಮನೆಗಳು ಶ್ರೀಮಂತಿಕೆಯಲ್ಲಿವೆ ಮನಸ್ಸುಗಳು ಮಾತ್ರ ಬಡತನದಿಂದ ಬಳಲುತ್ತಿರುವುದು ದೌರ್ಭಾಗ್ಯ ಎಂದು ಬೆಳಗಾವಿ ಜಿಲ್ಲೆ ಸಂಶಿಯ ಬ್ರಹ್ಮಾನಂದ ಆಶ್ರಮದ ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಜಿಲ್ಲಾ ಗಂಗಾಮತ ಸಂಘ, ವೇದವ್ಯಾಸ ಮಹರ್ಷಿ ಗುರುಪೀಠ, ಕೂಡ್ಲಿಗಿ ತಾಲೂಕು ಗಂಗಾಮತ ಸಂಘ, ಗುಡೇಕೋಟೆ ಗಂಗಾಮತ ಸಂಘದವರು ಆಯೋಜಿಸಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಮನಸ್ಸು ಮಲಿನ: ಸಕಲ ಪಾಪಗಳನ್ನು ತೊಳೆಯುವ ಗಂಗೆ ಇಂದು ಮಲಿನವಾಗುತ್ತಿದ್ದು, ಎಲ್ಲಿ ನೋಡಿದರೂ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಮಲಿನವಾಗುತ್ತಿದೆ. ಅಲ್ಲದೇ ಜನತೆಯ ಮನಸ್ಸುಗಳು ಸಹ ಮಲಿನವಾಗುತ್ತಿರುವುದು ದುರ್ದೈವದ ಸಂಗತಿ. ಜಗತ್ತಿನ ಇತರೆ ರಾಷ್ಟ್ರಗಳ ಜನತೆ ಭಾರತದ ಆಧ್ಯಾತ್ಮಿಕ, ಶಾಂತಿ, ನೆಮ್ಮದಿ ಕಡೆಗೆ ಒಲವು ತೋರುತ್ತಿದ್ದರೆ ನಮ್ಮ ದೇಶದ ಜನತೆಯೇ ಆಧ್ಯಾತ್ಮದ ಕಡೆಗೆ ಮುಖ ಮಾಡದೆ ವಿಕೃತಿಯ ಬೆನ್ನು ಹತ್ತಿ ಅದಕ್ಕೆ ಮಾರು ಹೋಗಿರುವುದು ಸಮಾಜದ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಗಂಗಾಮತ ಸಂಘದ ಅಧ್ಯಕ್ಷ ಬಿ. ಮೌಲಾಲಿ ಕಾರ್ಯಕ್ರಮ ಉದ್ಘಾಟಿಸಿದರು. ಕೂಡ್ಲಿಗಿ ತಾಲೂಕು ಗಂಗಾಮತ ಸಂಘದ ಅಧ್ಯಕ್ಷ ಬೇಕರಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಿರಿಯ ಮುಖಂಡರಾದ ಗುರುಸ್ವಾಮಿ, ಎಳ್ಳಾರ್ತಿ ಸಿದ್ದಪ್ಪ, ತಾಪಂ ಮಾಜಿ ಸದಸ್ಯ ಗುಡೇಕೋಟೆ ರಾಜಣ್ಣ, ಕೆ. ನಾಗರಾಜ, ರಾಜ್ಯ ಗಂಗಾಮತ ಸಂಘದ ಸಂಘಟನಾ ಕಾರ್ಯದರ್ಶಿ ಕಟ್ಟೆ ವಿರೂಪಾಕ್ಷಿ, ವಿಜಯಲಕ್ಷ್ಮಿ, ಕಾಂತರಾಜ್, ಬಾರಿಕರ ಮಂಜುನಾಥ, ಬಿ. ಶಿವರಾಮಪ್ಪ, ಭೀಮಪ್ಪ, ಎಂ. ಹುಲಿರಾಜಪ್ಪ, ರುದ್ರಪ್ಪ, ಎಂ. ಶ್ರೀನಿವಾಸ್, ಕೆ. ಕುಬೇರ, ಎರ್ರಿಸ್ವಾಮಿ, ಸುಂಕಣ್ಣ, ಎಣ್ಣೆ ಶಿವಣ್ಣ, ಎಳೆನೀರು ಗಂಗಣ್ಣ, ಮಹಾಂತೇಶ್ ಇದ್ದರು. ಗಂಗಾಮತ ಸಂಘದ ಜಿಲ್ಲಾ, ತಾಲೂಕು, ಗ್ರಾಮದ ಮುಖಂಡರನ್ನು ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

