ಜನ್ಮಾಷ್ಟಾಮಿ: ಛದ್ಮವೇಷ
ಕೊಟ್ಟೂರು: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇತ್ತೀಚೆಗೆ ಪಟ್ಟಣದ ಆರ್.ಎಂ.ಕೆ. ಪೂರ್ವ ಮತ್ತು ವಸತಿಯುತ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರುನೃತ್ಯ ಮತ್ತು ಛದ್ಮವೇಷ ನೋಡುಗರ ಗಮನ ಸೆಳೆದವು. ಸಂಸ್ಥೆಯ ಅಧ್ಯಕ್ಷ ಆರ್.ಎಂ. ಗುರುಬಸವಸ್ವಾಮಿ, ಡಾ.ಎಸ್. ಕೊಟ್ರೇಶ್, ಸಂಸ್ಥೆಯ ಕಾರ್ಯದರ್ಶಿ ಆರ್.ಎಂ. ಕೊಟ್ರೇಶ್, ಬಸವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದರು.
ಟ್ಯ್ರಾಕ್ಟರ್ ಉರುಳಿ 9 ಕಾರ್ಮಿಕರಿಗೆ ಗಾಯ
ಕೂಡ್ಲಿಗಿ: ತಾಲೂಕಿನ ಗುಡೇಕೋಟೆ ಠಾಣಾ ವ್ಯಾಪ್ತಿಯ ಸಂಡೂರು ತಾಲೂಕು ಚೋರನೂರು ಕೆರೆ ಹತ್ತಿರ ಟ್ರ್ಯಾಕ್ಟರ್ವೊಂದು ಚಾಲಕನ ನಿಯಂತ್ರಣ ತಪ್ಪಿ ತಗ್ಗಿಗೆ ಉರುಳಿದ ಪರಿಣಾಮ 9 ಕಾರ್ಮಿಕರಿಗೆ ಗಾಯಗಳಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡಿರುವ ಬಸಮ್ಮ, ಭೀಮೇಶ, ಜಯಪ್ಪ ಇವರನ್ನು ಕೂಡ್ಲಿಗಿಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳ್ಳಾರಿ ವಿಮ್ಸ್ಗೆ ಕಳುಹಿಸಲಾಗಿದ್ದು, ಸಿದ್ಲಿಂಗಪ್ಪ, ಮಹಾಂತೇಶ, ನಿಂಗೇಶ, ಉಮ್ಮಕ್ಕ, ರತ್ನಮ್ಮ, ವಿಜಯಮ್ಮ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯ ಡಾ. ಮಧು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಟ್ರ್ಯಾಕ್ಟರ್ ಸಂಡೂರು ತಾಲೂಕು ಸೋವೇನಹಳ್ಳಿ ಗ್ರಾಮದ ಲಕ್ಷ್ಮೀಪತಿ ಅವರಿಗೆ ಸೇರಿದೆ ಎನ್ನಲಾಗಿದ್ದು, ಪಕ್ಕದ ಚೋರನೂರು ಗ್ರಾಮದಲ್ಲಿ ಕೆಲಸ ಮುಗಿಸಿಕೊಂಡು ಸಂಜೆ ವಾಪಾಸ್ ಸೋವೆನಹಳ್ಳಿಗೆ ಬರುವಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ. ಗಾಯಗೊಂಡವರಲ್ಲಿ 7 ಗಾಯಾಳುಗಳು ಸೋವೆನಹಳ್ಳಿ ಗ್ರಾಮದವರಾಗಿದ್ದು, ಉಳಿದಿಬ್ಬರು ಕೂಡ್ಲಿಗಿ ಪಟ್ಟಣದವರು. ಸ್ಥಳಕ್ಕೆ ಗುಡೇಕೋಟೆ ಪಿಎಸ್ಐ ನವೀನ್ಗೌಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

