ಬಳ್ಳಾರಿ

ಇಂದು ಜಿಲ್ಲಾ ಕವಿಗೋಷ್ಠಿ

Published On :

ಹಗರಿಬೊಮ್ಮನಹಳ್ಳಿ: ಮಾರುತಿ ಸ್ಪೋರ್ಟ್ಸ್ ಕ್ಲಬ್ 24ನೇ ವಿನಾಯಕ ಪ್ರತಿಷ್ಠಾಪನೆ ನಿಮಿತ್ತ ಸೆ. 11ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಗುರುಭವನದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಹಮ್ಮಿಕೊಂಡಿದೆ. ಪ್ರಗತಿಪರ ಚಿಂತಕಿ ಡಾ. ಮಲ್ಲಿಕಾಘಂಟಿ ಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದು, ಕೂಡ್ಲಿಗಿಯ ಡಾ. ವೆಂಕಟಗಿರಿ ದಳವಾಯಿ, ಸಿದ್ದರಾಮ ಹಿರೇಮಠ, ಹೂವಿನಹಡಗಲಿಯ ಸುರೇಶ್ ಅಂಗಡಿ, ನಾಗರಾಜ ಮುಲ್ಕಿಒಡೆಯರ್, ಕೊಟ್ಟೂರಿನ ಸೈಫ್‌ಜಾನ್ಸ್, ನಾಗರಾಜ ಬಣಕಾರ, ಬಳ್ಳಾರಿಯ ಕೆ. ಶಿವಲಿಂಗಪ್ಪ, ಕೆ.ವಿ. ನಾಗರೆಡ್ಡಿ, ತೆಕ್ಕಲಕೋಟೆ ವೀರೇಂದ್ರ ರಾವಿಹಾಳ, ಸಿರುಗುಪ್ಪದ ದಿವಾಕರ ನಾರಾಯಣ, ಹೊಸಪೇಟೆ ಜಂಭುನಾಥ, ಟಿ.ಎಂ. ಉಷಾರಾಣಿ, ತೂಲಹಳ್ಳಿ ಮಲ್ಲಿಕಾರ್ಜುನ, ತಾಲೂಕಿನ ಮೇಟಿ ಕೊಟ್ರಪ್ಪ, ಹುರಕಡ್ಲಿ ಶಿವಕುಮಾರ, ಉಪ್ಪಾರ ಬಸಪ್ಪ, ಶಿವಾನಂದ ಶಿಶುವಿನಹಳ್ಳಿ, ಎ.ಆರ್. ಪಂಪಣ್ಣ, ಹನಸಿ ಅಜ್ಜಪ್ಪ, ಜೆ. ನಾಗರಾಜ, ಪರಮೇಶ್ವರಯ್ಯ ಸೊಪ್ಪಿಮಠ, ಅಂಬಿಗರ ಮಂಜುನಾಥ, ಓಂಪ್ರಕಾಶ, ಜಗದಂಬಾ, ಅಮರೇಶ ಸೊನ್ನದ, ಜಯಶಂಕರ ಪ್ರಸಾದ್, ಬಾದಾಮಿ ನಟರಾಜ, ನಾಗರಾಜನ ಕ್ರಾಳತಾಂಡ, ಮೌನೇಶ ಗದ್ದಿಕೇರಿ ಸೇರಿದಂತೆ ಕವಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಮಹಾ ಉತ್ಸವ
ಹೊಸಪೇಟೆ: ರೋಟರಿ ಕ್ಲಬ್ ಹಾಗೂ ರೋಟರಿ ಇನ್ನರ್‌ವ್ಹೀಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಮಹಾ ಉತ್ಸವ ಯುವಜನರ ಕಾರ್ಯಶೀಲತೆ ಕಾರ್ಯಕ್ರಮ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸೆ. 12ರಂದು ನಡೆಯಲಿದೆ. ಮಹಿಳಾ ಲೋಕದ ಸಂಪಾದಕಿ ಸಾವಿತ್ರಿ ಮುಜುಮದಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸರಾವ್, ಕಾರ್ಯದರ್ಶಿ ಸಯ್ಯದ್ ಮೆಹಮೂದ್, ಇನ್ನರ್‌ವ್ಹಿಲ್ ಕ್ಲಬ್ ಅಧ್ಯಕ್ಷೆ ಡಾ. ಮಾಧವಿ ದೇವಿ, ಕಾರ್ಯದರ್ಶಿ ಮೇಘನಾ, ಯುತ್ ಸರ್ವೀಸ್ ಚೇರ್‌ಮನ್ ಎ.ಎಸ್. ಕಿಶೋರ್, ಯುವಜನ ಉತ್ಸವದ ಸಪ್ತಾಹದ ಚೇರ್‌ಮನ್ ಮಣಿ ವಿಷ್ಣು, ಯುವಜನ ಉತ್ಸವದ ಚೇರಮನ್ ಡಾ.ಪಿ. ಮುನಿವಾಸುದೇವ ರೆಡ್ಡಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸಂಘಕ್ಕೆ ಆಯ್ಕೆ
ಕೂಡ್ಲಿಗಿ: ತಾಲೂಕಿನ ಕೆ. ಗಜಾಪುರ ಗ್ರಾಮದ ಗಂಗಾಮತ ಸಂಘದ ಅಧ್ಯಕ್ಷರನ್ನಾಗಿ ಗಾಳೆಪ್ಪನವರ ಭೀಮಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಾರಿಕರ ಮಂಜುನಾಥ ಇವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷ ಬಾರಿಕರ ಸಿದ್ದಪ್ಪ, ಉಪಾಧ್ಯಕ್ಷ ಬಿ. ಶಿವರಾಮಪ್ಪ, ನೀರಗಂಟಿ ಮಂಜುನಾಥ, ಖಜಾಂಚಿ ಬಾರಿಕರ ವಿಶ್ವನಾಥ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ. ಕೊಟ್ರೇಶ್, ಅಂಬಳಿ ಲೋಕಪ್ಪ, ನೀರಗಂಟಿ ಸಿದ್ದಪ್ಪ, ತಿಮ್ಮಲಾಪುರ ಹುಲುಗಪ್ಪ, ಕುಪ್ಪಿನಕೆರೆ ಅಂಜಿನಪ್ಪ, ಗಂಗಪ್ಪ, ಕುಮಾರಸ್ವಾಮಿ, ಗುಂಡಪ್ಪನವರ ಹನುಮಂತಪ್ಪ, ಜೆ. ಮಂಜುನಾಥ, ಅಂಬಳಿ ಹನುಮಂತಪ್ಪ, ನೀರಗಂಟಿ ರಮೇಶ್, ಟಿ. ಪ್ರಕಾಶ್, ಗಾಳೆಪ್ಪನವರ ವೆಂಕಟೇಶ್, ಗೂಳೆಪ್ಪನವರ ಮಂಜುನಾಥ, ಬಿ. ಸುನೀಲ, ಬಿ. ರಾಜು ಆಯ್ಕೆಯಾಗಿದ್ದಾರೆ.

2ಎಗೆ ಸೇರಿಸಲು ಆದಿಬಣಜಿಗರ ಒತ್ತಾಯ
ಹೊಸಪೇಟೆ: ಆದಿ ಬಣಜಿಗ ಸಮುದಾಯವನ್ನು ಪ್ರವರ್ಗ 2ಎಗೆ ಮೀಸಲಾತಿ ಅಡಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗರ ಸಂಘವು ಭಾನುವಾರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಶಂಕ್ರಪ್ಪಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
15 ವರ್ಷಗಳಿಂದ ಈ ಹಕ್ಕು ಒತ್ತಾಯಿಸುತ್ತಾ ಬಂದಿದ್ದರೂ ಎಲ್ಲಾ ಸರ್ಕಾರಗಳು ಸುಳ್ಳು ಭರವಸೆ ನೀಡುತ್ತಾ ಬಂದಿದ್ದು, ಆದಿ ಬಣಜಿಗ ಸಮುದಾಯದ ಸಮೀಕ್ಷೆ ನಡೆಸಲು 2004 ರಲ್ಲಿ ಎಸ್. ಸಿದ್ದಗಂಗಯ್ಯ ಅಧ್ಯಕ್ಷತೆಯಲ್ಲಿ ವಿಶೇಷ ಆಯೋಗ ರಚಿಸಿತ್ತು. ಈ ಆಯೋಗವು ರಾಜ್ಯಾದ್ಯಂತ ಸಮೀಕ್ಷೆ ನಡೆಸಿ, ಆದಿ ಬಣಜಿಗ ಸಮುದಾಯವು ಹಿಂದುಳಿದ ವರ್ಗಕ್ಕೆ ಸೇರಿಸಬೇಕೆಂದು ವರದಿ ನೀಡಿದೆ.
ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮತ್ತು ಉತ್ತರ ಕರ್ನಾಟಕದ 55-60 ವಿಧಾನಸಭೆ ಮತಕ್ಷೇತ್ರಗಳಲ್ಲಿ ಹಾಗೂ ಬೀದರ್, ಗುಲ್ಬರ್ಗ, ಬಿಜಾಪುರ, ಚಿಕ್ಕೋಡಿ, ಹಾವೇರಿ ಮತ ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರರಾಗಿದ್ದಾರೆ. ಈ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆಯಾಗಬೇಕೆಂದು ಸಂಘದ ಅಧ್ಯಕ್ಷ ಆರ್.ಬಿ. ಶಂಕರಗೌಡ, ಪ್ರಧಾನ ಕಾರ್ಯದರ್ಶಿ ರವಿ ಜಿ. ಕೋಟಿ, ಉಪಾಧ್ಯಕ್ಷ ಮಲ್ಲಿನಾಥ ಬಿರಾದಾರ, ಆರ್.ಜಿ. ಚುಳಕಿ, ಎಸ್.ಪಿ. ಬಿರಾದಾರ, ಗುರುಬಸಪ್ಪ ಪಾಟೀಲ್, ಗೌರವಾಧ್ಯಕ್ಷ ವಿ.ಎನ್. ನೀಲಪ್ಪ ಗೌಡರ್ ಸೇರಿದಂತೆ ಇತರೆ ಪದಾಧಿಕಾರಿಗಳು ನಗರಕ್ಕೆ ಆಗಮಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಶಂಕ್ರಪ್ಪ ಅವರಿಗೆ ಮನವಿಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.