ಬಳ್ಳಾರಿ

ಜಿಪಂಗೆ ಶೋಭಾ ಅಧ್ಯಕ್ಷೆ: ಸಂತಸ

Published On :

ಕೂಡ್ಲಿಗಿ: ಬಳ್ಳಾರಿ ಜಿಪಂ ಇತಿಹಾಸದಲ್ಲೇ ಗಂಗಾಮತಸ್ಥ (ಬೆಸ್ತ) ಜನಾಂಗದವರು ಇದೂವರೆಗೂ ಅಧ್ಯಕ್ಷರಾಗಿದ್ದಿಲ್ಲ. ಈ ಬಾರಿ ಕಾಂಗ್ರೆಸ್‌ನ ಮುಖಂಡರು, ಜಿಪಂನ ಸದಸ್ಯರು ಹಿಂದುಳಿದ ಸಮಾಜದ ಮಹಿಳೆ ಶೋಭಾ ಬೆಂಡಿಗೇರಿ ಅವರನ್ನು ಜಿಪಂ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ ಎಂದು ಜಿಲ್ಲಾ ಗಂಗಾಮತಸ್ಥ ಸಂಘದ ಅಧ್ಯಕ್ಷ ಬಿ. ಮೌಲಾಲಿ ಹೇಳಿದರು. ಅವರು ಗುರುವಾರ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಈ ಮೊದಲೆ ಶೋಭಾ ಬೆಂಡಿಗೇರಿ ಅವರು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಜಿಪಂ ಅಧ್ಯಕ್ಷರಾಗಬೇಕಿತ್ತು. ಆದರೆ ರಾಜಕೀಯ ಮೇಲಾಟಗಳಿಂದ ಅವರಿಗೆ ಅವಕಾಶ ತಪ್ಪಿತು. ಈ ಬಾರಿ ಶೋಭಾ ಅವರಿಗೆ ಅಧ್ಯಕ್ಷ ಸ್ಥಾನ ನೀಡಿರುವುದು ಸಾಮಾಜಿಕ ನ್ಯಾಯ ಎತ್ತಿ ಹಿಡಿದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಬಾಬುರಾವ್ ಚಿಂಚನಸೂರ, ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ ಹಾಗೂ  ಎಲ್ಲ ಜಿಪಂ ಸದಸ್ಯರಿಗೂ ಜಿಲ್ಲಾ ಗಂಗಾಮತಸ್ಥ ಸಂಘ ಋಣಿಯಾಗಿದೆ ಎಂದರು. ಜಿಲ್ಲಾ ಗಂಗಾಮತ ಸಂಘದ ಮುಖಂಡ ಗುರುಸ್ವಾಮಿ, ಶ್ರೀನಿವಾಸಗಿರಿ,  ಎಳ್ಳಾರ್ತಿ ಸಿದ್ದಪ್ಪ, ಮುದ್ದಾಪುರ ಈಶಣ್ಣ, ತಾಲೂಕು ಗಂಗಾಮತ ಸಂಘದ ಅಧ್ಯಕ್ಷ ಬೇಕರಿ ಸುರೇಶ್, ಕಾರ್ಯದರ್ಶಿ ಕಾಂತರಾಜ್, ಗಾಳೆಪ್ಪನವರ ಭೀಮಪ್ಪ, ಬಾರಿಕರ ಮಂಜುನಾಥ, ಕಟ್ಟೆ ವಿರೂಪಾಕ್ಷಿ, ಹುಲಿ ರಾಜಪ್ಪ, ಕೆ. ನಾಗರಾಜ, ಶ್ರೀನಿವಾಸ್, ಕುಬೇರ, ಹೊನ್ನೂರಪ್ಪ ಶೋಭಾ ಬೆಂಡಿಗೇರಿ ಆಯ್ಕೆಗೆ ಸಂತಸ ವ್ಯಕ್ತಪಡಿಸಿದರು.
ಕರವೇಗೆ ನೇಮಕ
ಬಳ್ಳಾರಿ: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ಯ ಗೌತಮ್ ನಗರ ಘಟಕದ ಅಧ್ಯಕ್ಷರಾಗಿ ಕೆ. ಮೌನೇಶ್ ನೇಮಕವಾಗಿದ್ದಾರೆ. ಕರವೇ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡರ ಸೂಚನೆ ಮೇರೆಗೆ ಬಳ್ಳಾರಿ ನಗರದಲ್ಲಿ ಸಂಘಟನೆಯನ್ನು ಬಲಪಡಿಸುವ ಹಿನ್ನಲೆಯಲ್ಲಿ ನೇಮಕದ ಆದೇಶ ಹೊರಡಿಸಿರುವ ಕರವೇ ಜಿಲ್ಲಾಧ್ಯಕ್ಷ ಕುರುಗೋಡು ಚನ್ನಬಸವರಾಜ ಅವರು, ಸ್ಥಳೀಯ ಗೌತಮ್ ನಗರ ಘಟಕದ ಅಧ್ಯಕ್ಷರನ್ನಾಗಿ ಕೆ. ಮೌನೇಶ್ ಅವರನ್ನು ನೇಮಕ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.