ಟಿವಿ ಅರ್ಭಟಕ್ಕೆ ರಂಗಕಲೆ ಬಲಿ
ಹಗರಿಬೊಮ್ಮನಹಳ್ಳಿ: ವಿದ್ಯುನ್ಮಾನ ಮಾಧ್ಯಮಗಳ ಅರ್ಭಟದಿಂದಾಗಿ ದೇಶಿ ರಂಗಭೂಮಿ ಕಲೆ ಕಣ್ಮರೆಯಾಗುವ ಹಂತಕ್ಕೆ ತಲುಪಿದೆ. ಶಾಲಾ, ಕಾಲೇಜುಗಳಲ್ಲಿ ರಂಗಭೂಮಿ, ನಾಟಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದು ಇಲ್ಲಿನ ಪೊಲೀಸ್ ಠಾಣೆಯ ಪಿಎಸೈ ಕಾಶೀನಾಥ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಮಾರುತಿ ಸ್ಪೋರ್ಟ್ಸ್ ಕ್ಲಬ್ ವಿನಾಯಕ ಪ್ರತಿಷ್ಠಾಪನೆ ನಿಮಿತ್ತ ಬುಧವಾರ ರಾತ್ರಿ ಆಯೋಜಿಸಿದ್ದ ಮಕ್ಕಳನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಿನಿಮಾ ಜನಪ್ರಿಯಗೊಂಡ ಮೇಲೆ ರಂಗಭೂಮಿ ಕಡೆಗೆ ಜನರ ಆಸಕ್ತಿಕಡಿಮೆಯಾಗಿದೆ. ಅದರಲ್ಲೂ ಇತ್ತೀಚಿಗೆ ವಿವಿಧ ಟಿವಿ ಚಾನಲ್‌ಗಳ ಅರ್ಭಟ ಶುರುವಾದ ಮೇಲಂತೂ ನಮ್ಮ ನಾಟಕ ಮತ್ತು ರಂಗಭೂಮಿಯನ್ನು ಕೇಳುವವರೆ ಇಲ್ಲದಂತಾಗಿ, ಈ ಕಲೆಯನ್ನೆ ನಂಬಿರುವ ಕಲಾವಿದರು ಬದುಕಿನ ಬಂಡಿ ಎಳೆಯಲು ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ ಎಂದರು.
ದೇಶಿ ಕಲೆ ಬಗ್ಗೆ ಆಸಕ್ತಿ ಬೆಳೆಸಿ: ತೋಟಗಾರಿಕಾ ಸಹಾಯಕ ನಿರ್ದೇಶಕ ಜಿ. ಪರಮೇಶ್ವರ ಮಾತನಾಡಿ, ಪ್ರೋತ್ಸಾಹವಿಲ್ಲದೆ ನಾಟಕಗಳು ಸೊರಗುತ್ತಿವೆ. ಮಕ್ಕಳಿಗೆ ಆಧುನಿಕ ಶೈಲಿಯ ನೃತ್ಯ ಕಲಿಸುವ ಬದಲು ಅವರಲ್ಲಿ ದೇಶಿಯ ರಂಗಭೂಮಿ ಕಡೆಗೆ ಹೆಚ್ಚು ಒಲವು ಮೂಡಿಸುವ ವಾತಾವರಣವನ್ನು ಶಾಲಾ, ಕಾಲೇಜಿನಲ್ಲಿ ನಿರ್ಮಿಸಬೇಕು. ಆ ಮೂಲಕ ಮಕ್ಕಳನ್ನು ಉತ್ತಮ ಕಲಾವಿದರನ್ನಾಗಿ ರೂಪಿಸಿ, ರಂಗಭೂಮಿ ಕಲೆಯನ್ನು ಮುಂದಿನ ಪೀಳಿಗೆವರೆಗೂ ಉಳಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಾಣಿ ಶಿವಶಂಕರಗೌಡ, ಗ್ರಾಪಂ ಸದಸ್ಯ ಬಾರಿಕರ ನಿಂಗಪ್ಪ, ಶ್ರೀನಿವಾಸ ಕಟ್ಟಿಮನಿ, ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಮೃಗರಾಜ ಸೊನ್ನದ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ರಂಗ ನಿರ್ದೇಶಕ ಜಿ.ಎಸ್. ಮಂಜುನಾಥ ಸೇರಿದಂತೆ ಹಲವರು ಭಾಗವಹಿಸಿದ್ದರು. ಬಾರಿಕರ ಗಂಗಾಧರ ಸ್ವಾಗತಿಸಿದರು. ಬಡಲಡಿಕಿ ಮಂಜುನಾಥ ವಂದಿಸಿದರು.
ನಂತರ ಪಶ್ಚಾತಾಪ, ತೆನಾಲಿ ರಾಮಕೃಷ್ಣ ಸೇರಿದಂತೆ ಹಲವು ಹಾಸ್ಯ ನಾಟಕಗಳನ್ನು ಮಕ್ಕಳು ರಂಗದ ಮೇಲೆ ಮನೋಜ್ಞವಾಗಿ ಪ್ರಸ್ತುತ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

