ಬಳ್ಳಾರಿ

ಆರೆಸ್ಸೆಸ್ ಬೈಠಕ್ ಆರಂಭ

Published On :

ಬಳ್ಳಾರಿ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಆರ್ಎಸ್)ದ ಸರಸಂಘದ ಚಾಲಕ ಮೋಹನ್ ಭಾಗವತ್ ಅವರ ನೇತೃತ್ವದಲ್ಲಿ ಬಳ್ಳಾರಿ ಕೊಟ್ಟೂರು ಸ್ವಾಮಿ ಮಠದಲ್ಲಿ ಶನಿವಾರ ನಡೆದ ಆರ್ಆರ್ಎಸ್ ಬೈಠಕ್ ನಡೆಯಿತು.
ಬೈಠಕ್ನಲ್ಲಿ ರಾಜಕೀಯ ಬಗ್ಗೆ ಚರ್ಚೆಯಾಗಿಲ್ಲ. ಬದಲಾಗಿ ಸಂಘಟನೆಯ ಬಗ್ಗೆ, ಸಮಾಜ ಒಳಿತಗಾಗಿ ದೇಶಕ್ಕೆ ಹಿತಕ್ಕಾಗಿ ಏನು ಮಾಡಬೇಕೆಂಬುದರ ಕುರಿತಾಗಿ ಚರ್ಚೆ ನಡೆಯಿತು. ಬೆಳಿಗ್ಗೆ 9 ಗಂಟೆಯಿಂದ ಆರಂಭವಾದ ಬೈಠಕ್ ಸಂಜೆ 6.15ರ ವರೆಗೆ ನಡೆಯಿತು.
ಬೈಠಕ್ನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಆರ್. ಅಶೋಕ್, ಈಶ್ವರಪ್ಪ, ಸಿ.ಟಿ. ರವಿ, ಬಿಜೆಪಿ ಮುಖಂಡರಾದ ಸಂತೋಷ್ ಜಿ, ಪ್ರಹ್ಲಾದ್ ಜೋಷಿ, ನಳಿನ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರು ಭಾಗವಹಿಸಿದ್ದರು. ಎಬಿವಿಪಿಯ ರಘುನಂದನ್, ರವಿಕುಮಾರ್, ಭಾರತೀಯ ಮಜ್ದೂರ್ ಸಂಘದ ಬಿ.ಕೆ. ಸದಾಶಿವ, ರಾಮಕೃಷ್ಣ ಪಂಜರು, ಆರ್. ಶೇಷಾದ್ರಿ, ಕೆ.ಎಂ. ಸೂರ್ಯನಾರಾಯಣ ರಾವ್, ಮಲ್ಲಾರಿ ಜೋಯಿಷರು, ಗೌರಿಪ್ರಸಾದ್, ಹಿಂದು ಜಾಗರಣ ವೇದಿಕೆಯ ಜಗದೀಶ್ ಕಾರಂತ, ಕೃಷ್ಣಮೂರ್ತಿ, ಭಾರತೀಯ ಕಿಸಾನ್ ಸಂಘದ ಜಯರಾಂ, ಎಳಂದೂರ್ ರಂಗನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವನವಾಸಿ ಕಲ್ಯಾಣ, ಸೇವಾ ಭಾರತಿ, ಸ್ವದೇಶ ಜಾಗರಣ್ ಮಂಚ್, ಸಂಸ್ಕೃತಿ ಭಾರತಿ, ರಾಷ್ಟ್ರೋತ್ಥಾನ ಪರಿಷತ್, ಮಾಧ್ಯಮಿಕ ಶಿಕ್ಷಕರ ಸಂಘ, ಪೂರ್ವ ಸೈನಿಕ್ ಪರಿಷತ್, ಭಾರತ ವಿಕಾಸ್ ಪರಿಷತ್, ಅದಿವಕ್ತ ಪರಿಷತ್ ಸೇರಿದಂತೆ 25ಕ್ಕೂ ಸಂಘಟನೆಗಳ ರಾಜ್ಯದ ಎಲ್ಲಾ ಪ್ರಾಂತ ಮಟ್ಟದ ಜವಾಬ್ದಾರಿಯ ವ್ಯಕ್ತಿಗಳು ಭಾಗವಹಿಸಿದ್ದರು.
ಬೈಠಕ್ನಲ್ಲಿ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.