ರಾಜ್ಯ ಮಟ್ಟಕ್ಕೆ ಆಯ್ಕೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರದ ಗಂ.ಭೀ. ಸರ್ಕಾರಿ ಪಪೂ ಕಾಲೇಜಿನ ಬಂಗಾರಿ ಮಂಜುನಾಥ 55 ಕೆಜಿ ಹಾಗೂ ಮರಿಯಮ್ಮನಹಳ್ಳಿ ಸರ್ಕಾರಿ ಪಪೂ ಕಾಲೇಜಿನ ಟಿ. ಶಶಿಕುಮಾರ 74 ಕೆಜಿ ವಿಭಾಗದ ಪಪೂ ಕಾಲೇಜು ಜಿಲ್ಲಾಮಟ್ಟದ ಬಾಲಕರ ಕುಸ್ತಿ ಪಂದ್ಯದಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಿರೇಹಡಗಲಿ ಕಾಲೇಜಿನ ಬಿ. ಒಂಕಾರ (50ಕೆಜಿ), ಹೊಸಪೇಟೆ ತಾಲೂಕಿನ ವ್ಯಾಸನಕೇರಿಯ ಸ್ಮಯೋರ್ ಕಾಲೇಜಿನ ವಿ. ಮಧುನಾಯ್ಕ (66ಕೆಜಿ), ಮಹೇಶ ಮ್ಯಾಗೇರಿ (60ಕೆಜಿ) ವಿಭಾಗದಲ್ಲಿ ಆಯ್ಕೆಗೊಂಡಿದ್ದಾರೆ. ಬಾಲಕಿಯರ ಕುಸ್ತಿ ಪಂದ್ಯದಲ್ಲಿ ಮರಿಯಮ್ಮನಹಳ್ಳಿ ಪ್ರಿಯದರ್ಶಿನಿ ಕಾಲೇಜಿನ ಜಿ. ಲತಾ (55ಕೆಜಿ) ಹಾಗೂ ನಾರಾಯಣದೇವರಕೆರೆ ಸೆರೆಗಾರ ನಾಗರತ್ನಾ (67ಕೆಜಿ) ಆಯ್ಕೆಯಾಗಿದ್ದಾರೆ ಎಂದು ಕಾಲೇಜು ಪ್ರಾಚಾರ್ಯ ಕೆ. ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾಂತ್ರಿಕ ಜೀವನ ರೋಗಕ್ಕೆ ಕಾರಣ
ಕುರುಗೋಡು: ಇಂದಿನ ಯಾಂತ್ರಿಕ ಜೀವನ ಕ್ರಮವು ನಾನಾ ರೋಗಗಳಿಗೆ ಕಾರಣವಾಗಿದೆ ಎಂದು ಬಳ್ಳಾರಿ ವಿಮ್ಸ್ನ ಶಸ್ತ್ರ ಚಿಕಿತ್ಸಾ ವಿಭಾಗದ ತಜ್ಞ ಡಾ.ಜಿ. ಶ್ಯಾಮಲಾ ತಿಳಿಸಿದರು. ಪಟ್ಟಣದ ದೊಡ್ಡ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸುವರ್ಣ ರಕ್ತ ಪರೀಕ್ಷಾ ಕೇಂದ್ರ, ಗುರುಕೃಪ ಮೆಡಿಕಲ್ಸ್ ಹಾಗೂ ಬಳ್ಳಾರಿಯ ವಿಮ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಮಧುಮೇಹ ರಕ್ತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನಂತರ ಕಾರ್ಯಕ್ರಮ ಸಂಯೋಜಕ ವಿಶ್ವನಾಥ ಮಾತನಾಡಿ, ಗ್ರಾಮೀಣ ಪ್ರದೇಶ ಬಡ ಜನರಿಗೆ ಅರ್ಥಿಕ ಹೊರೆ ತಪ್ಪಿಸಲು ಇಂತಹ ಕಾರ್ಯಕ್ರಮ ನೆರವಾಗಲಿದೆ ಮಾತ್ರವಲ್ಲದೆ ಪ್ರತಿಯೊಬ್ಬರು ಎಣ್ಣೆ ಪದಾರ್ಥ ಹಾಗೂ ಸಕ್ಕರೆ ಪದಾರ್ಥವನ್ನು ಮಿತವಾಗಿ ಬಳಸಬೇಕು ಎಂದರು. ಪಟ್ಟಣದ ರಾಘವಾಂಕ ಮಠದ ರಾಘವಾಂಕ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯತೆ ವಹಿಸಿ, ಆಶೀರ್ವಚನ ನೀಡಿದರು. ಈ ಸಂದರ್ಭ ಎಲಬುಕೀಲು ತಜ್ಞ ಡಾ.ಎಲ್. ರಾಘವರೆಡ್ಡಿ, ಶ್ರೀರಾಮ ರಂಗಾಪುರಂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗರಾಜ್, ಎಎಸ್ಐ ನಾಗರಾಜ್ ಮತ್ತಿತರರು ಇದ್ದರು. ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ವಿರೂಪಾಕ್ಷ, ಚೈತನ್ಯ ಜಾಗೃತಿ ವೇದಿಕೆ ಅಧ್ಯಕ್ಷ ಸಿ. ಶಿವರಾಮ್ ನಿರ್ವಹಿಸಿದರು. 260ಕ್ಕೂ ಹೆಚ್ಚು ಜನ ಶಿಬಿರದ ಉಪಯೋಗ ಪಡೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

