ಸದಾಶಿವ ವರದಿ ಜಾರಿಗೆ ಒತ್ತಾಯ
ಕೂಡ್ಲಿಗಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಮಾದಿಗ ಮೀಸಲು ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳು ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ಧರಣಿ ನಡೆಸಿದವು.
ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಚ್.ಪಿ. ದುರುಗಪ್ಪ ಮಾತನಾಡಿ, ಶತಮಾನಗಳಿಂದಲೂ ತುಳಿತಕ್ಕೊಳಗಾದ ಮಾದಿಗ ಸಮುದಾಯ ರಾಜ್ಯದಲ್ಲಿ 86 ಲಕ್ಷ ಜನಸಂಖ್ಯೆ ಹೊಂದಿದೆ. ಹೀಗಿದ್ದರೂ ಇದುವರೆಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಸಬಲತೆ ಸಾಧಿಸಲು ಸಾಧ್ಯವಾಗದೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ಮಾದಿಗರ ನ್ಯಾಯಸಮ್ಮತ ಸದಾಶಿವ ಆಯೋಗದ ಜಾರಿಗೆ ಧ್ವನಿ ಎತ್ತಿದ್ದ ಸಿದ್ದರಾಮಯ್ಯ ಈಗ ಸಿಎಂ ಆಗಿರುವುದರಿಂದ ಕೂಡಲೆ ವರದಿಯನ್ನು ಯಥಾವತ್ತು ಜಾರಿಗೆ ತರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿ ನ್ಯಾಯ ದೊರಕಿಸುವಂತೆ ಒತ್ತಾಯಿಸಿದರು.
10450 ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರನ್ನಾಗಿ ನೇಮಕ ಮಾಡಬೇಕು. ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ಕಾಯಂಗೊಳಿಸಬೇಕು. ಎಲ್ಲ ಇಲಾಖೆಯ ದಿನಗೂಲಿ ಸಫಾಯಿ ಕರ್ಮಚಾರಿ ಮತ್ತು ಅಂಶಕಾಲಿಕ ನೌಕರರನ್ನು ಕಾಯಂ ಮಾಡಬೇಕು. ಚರ್ಮ ಕುಶಲಕರ್ಮಿ ಕೆಲಸಗಾರರಿಗೆ ವಿಶೇಷ ಸಾಲ ಸೌಲಭ್ಯ ಒದಗಿಸಬೇಕು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಾಘವೇಂದ್ರ ಸಾಲುಮನಿ, ಗೌರವ ಅಧ್ಯಕ್ಷ ಜಿ. ಸಿಡ್ಲಪ್ಪ, ಕೆ. ತಿಪ್ಪೇಸ್ವಾಮಿ, ಜಿ. ದಂಡೆಪ್ಪ, ಎನ್. ಮರಿಸ್ವಾಮಿ, ತಿಮ್ಮಾರೆಡ್ಡಿ, ಯು. ಬಸವರಾಜ, ಡಿಎಸ್‌ಎಸ್‌ನ ಎಸ್. ದುರುಗೇಶ್, ಪರಶುರಾಮ್, ಶಿವರಾಜ, ಹೊಸಹಳ್ಳಿ ಗಂಗಾಧರ, ಗೆದ್ದಲಗಟ್ಟೆ ಹನುಮೇಶ್, ತಿಮ್ಮನಹಳ್ಳಿ ಬಸವರಾಜ್, ಕೆ. ಮಹೇಶ, ಎನ್. ನಾಗರಾಜ, ಶಿವು ಸಾಸಲವಾಡ, ಎಸ್.ಜಿ. ನಾಗರಾಜ, ಎಚ್. ವೆಂಕಟೇಶ್, ಪಿ. ಬಸವರಾಜ, ಟಿ. ಸಿದ್ದೇಶ್, ಎಂ. ಅಂಜಿನಪ್ಪ, ಕುಪ್ಪಿನಕೇರಿ ಅಂಜಿನಪ್ಪ ಇದ್ದರು. ನಂತರ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿಪತ್ರ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

