ಬಳ್ಳಾರಿ

ಕುಮಾರೇಶ್ವರರ ಕೊಡುಗೆ ಅಪಾರ

Published On :

ಬಳ್ಳಾರಿ: ವೀರಶೈವ ಸಮಾಜದ ಸಮಗ್ರ ಅಭಿವೃದ್ಧಿಗೆ ಹಾನಗಲ್ಲ ಕುಮಾರ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ ಎಂದು ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಹೇಳಿದರು.
ನಗರದ ಕೊಟ್ಟೂರುಸ್ವಾಮಿ ಮಠದ ಹಾನಗಲ್ಲ ಕುಮಾರೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹಾನಗಲ್ಲ ಕುಮಾರೇಶ್ವರ ಶಿವಯೋಗಿಗಳ 146ನೇ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದರು.
ಗಡಿ ಜಿಲ್ಲೆ ಬಳ್ಳಾರಿಯಲ್ಲಿ ಅತ್ಯಂತ ದಮನೀಯ ಸ್ಥಿತಿಯಲ್ಲಿದ್ದ ವೀರಶೈವ ಸಮಾಜವನ್ನು ಮೇಲೆತ್ತಿ, ಸಮಾಜದ  ಪುನರುತ್ಥಾನ ಮಾಡಿದರು. ಅವರು ಪ್ರಾತಃ ಸ್ಮರಣೀಯರಾಗಿದ್ದಾರೆ. ಶೈಕ್ಷಣಿವಾಗಿ ಅಭಿವೃದ್ಧಿ ಹೊಂದಬೇಕೆಂಬ ಅವರ ಕನಸು ವೀರಶೈವ ವಿದ್ಯಾವರ್ಧಕ ಸಂಘದ ರೂಪದಲ್ಲಿ ನನಸಾಗಿದೆ.
ರಾಜ್ಯದಲ್ಲಿ ವೀರಶೈವರು ಪ್ರಮುಖ ಶಕ್ತಿಯಾಗಿ ಬೆಳೆಯಲು ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಸಮಾಜ ಪ್ರಮುಖ ಪಾತ್ರವಹಿಸುವಂತೆ ಮಾಡುವಲ್ಲಿ ಕುಮಾರೇಶ್ವರರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಹೊಸ ಪೀಳಿಗೆ ಯುವಕರು ವೀರಶೈವ ಧರ್ಮದ ಆಚಾರ, ವಿಚಾರ, ಸನ್ನಡತೆಗಳನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಮಠಾಧೀಶರು ಉಪಸ್ಥಿತಿ: ವಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಉರವಕೊಂಡ ಶಿವಲಿಂಗ ಮಠದ ಡಾ. ಕರಿಬಸವರಾಜೇಂದ್ರ ಸ್ವಾಮೀಜಿ, ಕಲ್ಯಾಣಸ್ವಾಮಿ ಮಠದ ಕಲ್ಯಾಣಸ್ವಾಮಿ ನೇತೃತ್ವ ವಹಿಸಿದ್ದರು. ಹಾವನೂರಿನ ಶಿವಕುಮಾರ ಸ್ವಾಮೀಜಿ, ಹುಕ್ಕೇರಿಯ ಆನಂದದೇವರು, ಯಮಕನಮರಡಿಯ ಗುರುಸಿದ್ದ ದೇವರು, ಕಲ್ಲೂರಿನ ಶಂಭುಲಿಂಗ ದೇವರು, ತಿಪ್ಪಾಯಿಕೊಪ್ಪದ ಮಹಾಂತದೇವರು, ಕಲಕೇರಿಯ ಮಡಿವಾಳ ದೇವರು, ಮತ್ತೂರಿನ ಗಿರೀಶ ದೇವರು, ಅಗಳಖೇಡದ ಶಿವಯೋಗಿ ಸ್ವಾಮೀಜಿ, ಬೀಳಗಿಯ ಗುರುಪಾದ ದೇವರು, ಗುಣದಾಳದ ವಿವೇಕ ದೇವರು, ಇಟಗಿಯ ಗುರುಶಾಂತ ದೇವರು, ಗುರುಲಿಂಗ ದೇವರು, ಹುಲಗಡ್ಡಿಯ ಸಿದ್ದಲಿಂಗ ದೇವರು, ಹುಬ್ಬಳ್ಳಿಯ ಶಿವಾನಂದ ದೇವರು, ಮೃತ್ಯುಂಜಯ ದೇವರು, ತೇಲಸಂಗದ ವೀರೇಶ ದೇವರು, ಹಾನಗಲ್ಲಿನ ಮಲ್ಲಿಕಾರ್ಜುನ ದೇವರು, ತುಬಚಿಯ ಸಾವಳಗಿ ದೇವರು, ಬಾಲೆಹೊಸೂರಿನ ಸಿದ್ದಲಿಂಗ ದೇವರು, ಕೊಟ್ಟೂರು ದೇಶಿಕರು, ಕಾಡಶೆಟ್ಟಿಯ ಶಾಂತಕುಮಾರ ದೇವರು ಸೇರಿದಂತೆ ಇನ್ನಿತರೆ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಎಂಎಲ್‌ಸಿ ಮೃತ್ಯುಂಜಯ ಜಿನಗಾ, ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಕೆ.ಎಂ. ವಿಶ್ವನಾಥಸ್ವಾಮಿ, ಸಾಹುಕಾರ್ ಸತೀಶ್‌ಬಾಬು, ಎಸ್. ಇಂದುಶೇಖರ್, ಎಸ್. ಗುರುಲಿಂಗನಗೌಡ, ಗೋನಾಳ ವಿರೂಪಾಕ್ಷಗೌಡ, ಹಲಕುಂದಿ ವಿಜಯಕುಮಾರಗೌಡ, ಕೂರ್ಲಗುಂದಿ ಬಸವರಾಜ, ಪಿ.ಎಸ್. ಸೋಮಲಿಂಗನಗೌಡ, ಅಸುಂಡಿ ನಾಗರಾಜ ಇತರರು ಇದ್ದರು. ಶಾಂತಕುಮಾರ ದೇವರು ಪ್ರಾರ್ಥಿಸಿದರು, ಗುರುದೇವ ದೇವರು ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.