ಬಳ್ಳಾರಿ

ದುಶ್ಚಟ ಜೋಳಿಗೆಗಾಕಿ

Published On :

ಬಳ್ಳಾರಿ: ಖಾವಿಧಾರಿಗಳು ಜೋಳಿಗೆ ಹಿಡಿದು ಬಂದರೆ ದೇಣಿಗೆ ನೀಡಿರಿ ಎನ್ನುವ ಅರ್ಥ. ಅಂತೆಯೇ ಶುಕ್ರವಾರ 30ಕ್ಕೂ ಹೆಚ್ಚು ಸ್ವಾಮೀಜಿಗಳು ಜೋಳಿಗೆ ಹಿಡಿದು ಭಕ್ತರ ಮನೆ ಬಾಗಿಲಿಗೆ ಹೋಗಿ ದ್ದರು. ಆದರೆ ದೇಣಿಗೆ ಕೇಳಲು ಅಲ್ಲ ಭಕ್ತರು ತಮ್ಮಲ್ಲಿರುವ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿ ಎಂದು ಕೇಳಲು ಹೊರಟಿದ್ದರು. ಹೌದು, ಹಾನಗಲ್ಲ ಕುಮಾರ ಶಿವಯೋಗಿಗಳ 146ನೇ ಜಯಂತಿ ನಿಮಿತ್ತ ಶುಕ್ರವಾರ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿನ ಶ್ರೀ ಕಲ್ಯಾಣಸ್ವಾಮಿಗಳೊಂದಿಗೆ ಕೊಟ್ಟೂರುಮಠದ ಸಂಗನಬಸವ ಸ್ವಾಮೀಜಿ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಿವಯೋಗ ಮಂದಿರದ ಸಾಧಕರು ಗ್ರಾಮದಲ್ಲಿ ಜೋಳಿಗೆ ಹಿಡಿದು ಹೊರಟಾಗ ದುಶ್ಚಟಗಳಿಗೆ ಬಲಿಯಾದ ಕೆಲ ಯುವಕರು ಹಾಗೂ ವೃದ್ಧರು, ಮಧ್ಯವಯಸ್ಕರು ಸ್ವಯಂಪ್ರೇರಿತರಾಗಿ ಬಂದು ತಮ್ಮಲ್ಲಿದ್ದ ದುಶ್ಚಟಗಳನ್ನು ಚೀಟಿಯಲ್ಲಿ ಬರೆದು ಜೋಳಿಗೆಯಲ್ಲಿ ಹಾಕಿದರೆ ಇನ್ನು ಕೆಲವರು ಬೀಡಿ, ಸಿಗರೇಟನ್ನು ಜೋಳಿಗೆಗೆ ಹಾಕಿದರು.
ಕುಮಾರ ಶಿವಯೋಗಿಗಳ ಅಭಿಲಾಷೆ: ಹಂಪಿ ಹೇಮಕೂಟ ಸಿಂಹಾಸನಾಧೀಶ್ವರ ಶ್ರೀ ಸಂಗನಬಸವ ಸ್ವಾಮೀಜಿ ಮಾತನಾಡಿ, ದುಶ್ಚಟಗಳಿಂದ ದೂರವಾದ ಗ್ರಾಮ, ಸಮಾಜ ಇರಬೇಕು ಎಂಬುದು ಹಾನಗಲ್ಲ ಕುಮಾರ ಶಿವಯೋಗಿಗಳ ಅಭಿಲಾಷೆಯಾಗಿತ್ತು. ಸಮಾಜಕ್ಕೆ ವರವಾಗಬೇಕಿದ್ದ ಯುವಜನತೆ ದುಶ್ಚಟಗಳಿಗೆ ಬಲಿಯಾಗದೇ ಅವುಗಳನ್ನು ಜೋಳಿಗೆಗೆ ಹಾಕುವ ಮೂಲಕ ದೂರವಾಗಿ ಎಂದು ಕೇಳಿಕೊಂಡಿದ್ದೇವೆ. ಇದು ಜನಜಾಗೃತಿ ಪಾದಯಾತ್ರೆಯಾಗಿ ಎಂದರು.
ಕಲ್ಯಾಣ ಸ್ವಾಮೀಜಿ ಮಾತನಾಡಿದರು. ಶಿವಲಿಂಗಸ್ವಾಮಿ ಮಠದಶ್ರೀ, ಉರವಕೊಂಡ ಮಠದ ಡಾ. ಕರಿಬಸವರಾಜೇಂದ್ರ ಸ್ವಾಮೀಜಿ, ಹಾವನೂರಿನ ಶಿವಕುಮಾರಶ್ರೀ, ಹುಕ್ಕೇರಿಯ ಆನಂದಶ್ರೀ, ಯಮಕನಮರಡಿಯ ಗುರುಸಿದ್ದಶ್ರೀ, ಕಲ್ಲೂರಿನ ಶಂಭುಲಿಂಗಶ್ರೀ, ತಿಪ್ಪಾಯಿಕೊಪ್ಪದ ಮಹಾಂತಶ್ರೀ, ಕಲಕೇರಿಯ ಮಡಿವಾಳಶ್ರೀ, ಮತ್ತೂರಿನ ಗಿರೀಶಶ್ರೀ, ಅಗಳಖೇಡದ  ಶಿವಯೋಗಿಶ್ರೀ, ಬೀಳಗಿಯ ಗುರುಪಾದಶ್ರೀ, ಗುಣದಾಳದ ವಿವೇಕಶ್ರೀ, ಇಟಗಿಯ ಗುರುಶಾಂತಶ್ರೀ, ಗುರುಲಿಂಗಶ್ರೀ, ಹುಲಗಡ್ಡಿಯ ಸಿದ್ದಲಿಂಗಶ್ರೀ, ಹುಬ್ಬಳ್ಳಿಯ ಶಿವಾನಂದಶ್ರೀ, ಮೃತ್ಯುಂಜಯಶ್ರೀ, ತೇಲಸಂಗದ ವೀರೇಶಶ್ರೀ, ಹಾನಗಲ್ಲಿನ ಮಲ್ಲಿಕಾರ್ಜುನಶ್ರೀ, ತುಬಚಿಯ ಸಾವಳಗಿಶ್ರೀ, ಬಾಲೆಹೊಸೂರಿನ ಸಿದ್ಧಲಿಂಗಶ್ರೀ, ಕೊಟ್ಟೂರ ದೇಶಿಕರು, ಕಾಡಶೆಟ್ಟಿಹಳ್ಳಿಯ ಶಾಂತಕುಮಾರಶ್ರೀ, ತೆರದಾಳದ ಗುರುದೇವಶ್ರೀ ಇದ್ದರು. ಸದಾಶಿವ ಸ್ವಾಮಿಗಳು, ಹಾವೇರಿಯ ಹುಕ್ಕೇರಿಮಠ, ಬಸವಲಿಂಗ ಸ್ವಾಮಿಗಳು ಹಕ್ಕಿಆಲೂರು, ಅಸುಂಡಿ ನಾಗರಾಜ್, ಪಾಲಿಕೆ ಸದಸ್ಯ ಗುರುಲಿಂಗನಗೌಡ, ಅಕ್ಕಿ ಗಾಳೆಪ್ಪಗೌಡ, ಚಾವಡಿ ಸಣ್ಣರುದ್ರಗೌಡ, ಜೆ. ಮಂಜುನಾಥ, ಬಿ. ಚಂದ್ರಶೇಖರ್, ಎಸ್. ಸಣ್ಣಸಿದ್ದಪ್ಪ, ಕಂಪ್ಲಿ ಬಸವರಾಜ ಇದ್ದರು. ಮೃತ್ಯುಂಜಯ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.