ಬಳ್ಳಾರಿ

ಮದ್ಯದಂಗಡಿ ಸ್ಥಳಾಂತರ ಬೇಡ

Published On :

ಹೂವಿನಹಡಗಲಿ: ತಾಲೂಕಿನ ಸೋಗಿ ಗ್ರಾಮಕ್ಕೆ ಮಂಜೂರಾಗಿದ್ದ ಸರ್ಕಾರಿ ಮದ್ಯದಂಗಡಿಯು ಆರಂಭವಾಗಿದ್ದು, ಗ್ರಾಮದ ಈಗಿರುವ ಸ್ಥಳದಲ್ಲೇ ಅಂಗಡಿಯನ್ನೇ ಮುಂದುವರೆಸಬೇಕೆಂದು ಡಾ.ಬಿ.ಆರ್. ಅಂಬೇಡ್ಕರ್ ಸಂಘದ ಸದಸ್ಯರು ತಹಸೀಲ್ದಾರ್ ಹಾಗೂ ತಾಲೂಕು ಅಬಕಾರಿ ನಿರೀಕ್ಷಕರಿಗೆ ಮನವಿಪತ್ರ ನೀಡಿ ಆಗ್ರಹಿಸಿದರು.
ಸೋಗಿ ಗ್ರಾಮಕ್ಕೆ 2010ರಲ್ಲಿ ಸರ್ಕಾರಿ ಮದ್ಯದಂಗಡಿ (ಎಂಎಸ್‌ಐಎಲ್) ಮಂಜೂರಾಗಿದ್ದು, ಸೂಕ್ತ ಸ್ಥಳ ಆಯ್ಕೆ ಮಾಡಿ ಪ್ರಾರಂಭಿಸಲಾಗಿತ್ತು. ಇದೀಗ ರಾಜಕೀಯ ವೈಷಮ್ಯದಿಂದ ಈ ಮದ್ಯದಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಕೆಲವರು ತಂತ್ರ ರೂಪಿಸಿರುವುದು ಸರಿಯಲ್ಲ ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ಈಗಿರುವ ಮದ್ಯದಂಗಡಿಯಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಸ್ಥಳಾಂತರಿಸಬೇಕೆಂಬ ಏಕಪಕ್ಷೀಯ ದೂರನ್ನು ತಹಸೀಲ್ದಾರ್ ಹಾಗೂ ತಾಲೂಕು ಅಬಕಾರಿ ನಿರೀಕ್ಷಕರು ಗಂಭೀರವಾಗಿ ಪರಿಗಣಿಸದೆ ಅದೇ ಸ್ಥಳದಲ್ಲಿ ಮುಂದುವರೆಸಬೇಕೆಂದು ಒತ್ತಾಯಿಸಿದ್ದಾರೆ.
ಹುನ್ನಾರವಿದೆ: ಸರ್ಕಾರಿ ಮದ್ಯದಂಗಡಿ (ಎಂಎಸ್‌ಐಎಲ್) ಮ್ಯಾನೇಜರ್‌ಗೆ ಗ್ರಾಮದ ಕೆಲವರು ಹಣದ ಆಮಿಷ ತೋರಿಸಿ ಅಂಗಡಿ ಸ್ಥಳಾಂತರಿಸಲು ಹುನ್ನಾರ ನಡೆಸಿದ್ದಾರೆ. ಈಗಿರುವ ಸ್ಥಳದಲ್ಲಿ ಯಾವುದೇ ಆಕ್ಷೇಪ, ಅಡೆತಡೆ ಇಲ್ಲದೆ ಯಾಕೆ ಸ್ಥಳಾಂತರ ಮಾಡಬೇಕು? ಇದರ ಹಿಂದಿರುವ ಕಾರಣವೇನೆಂದು ಪ್ರಶ್ನಿಸಿದ್ದಾರೆ.
ಈಗಾಗಲೆ ಸೋಗಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಸೂಕ್ತ ಸ್ಥಳದಲ್ಲಿ ಅಂಗಡಿ ಆರಂಭಿಸಲಾಗಿದೆ. ಆದರೆ ಈಗ ಜನಪ್ರತಿನಿಧಿಗಳು ಮತ್ತು ಸರ್ಕಾರ ಬದಲಾವಣೆಯಾದ ಕೂಡಲೆ ಊರಿನ ಕೆಲವರು  ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸ್ಥಳಾಂತರ ಮಾಡುತ್ತಿರುವುದು ಒಳ್ಳೆಯದಲ್ಲ ಎಂದಿದ್ದಾರೆ.
ಮನವಿಪತ್ರ ನೀಡಿದ ನಂತರವೂ ಮದ್ಯದಂಗಡಿ ಸ್ಥಳಾಂತರಕ್ಕೆ ಅಧಿಕಾರಿಗಳು ಮುಂದಾದರೆ ವಿರೋಧಿಸುವ ಜತೆಗೆ ಬೇರೆಡೆಗೆ ಮದ್ಯದಂಗಡಿ ತೆರಯಲು ಅವಕಾಶ ನೀಡುವುದಿಲ್ಲ ಎಂದು ತಹಸೀಲ್ದಾರ್‌ಗೆ ಸಲ್ಲಿಸದ ಮನವಿಪತ್ರದಲ್ಲಿ ಎಚ್ಚರಿಸಿದ್ದಾರೆ.
ನಂತರ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಡಿ. ನಾಗರಾಜ, ಎನ್. ವೀರೇಶ, ರಾಮಪ್ಪ, ನಿಂಗಪ್ಪ, ಬಸಪ್ಪ, ಹನುಮಂತ, ದುರುಗಪ್ಪ, ಬಿ. ಯಲ್ಲಪ್ಪ, ಎಸ್. ನಾಗರಾಜ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.