ಹಿಂಗಾರು ಬೀಜ ದಿನೋತ್ಸವ-13
ಬಳ್ಳಾರಿ: ಹಗರಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಿಂಗಾರು ಬೀಜ ದಿನೋತ್ಸವ- 2013 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಬೀಜ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿಶಂಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಂಗಾರು ಹಂಗಾಮು ಪೂರ್ವದಲ್ಲಿ ಬೀಜ ದಿನೋತ್ಸವ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಕಾರ್ಯಕ್ರಮದಲ್ಲಿ ರೈತರು ಕೃಷಿ ವಿಶ್ವವಿದ್ಯಾಲಯದ ತಜ್ಞರಿಂದ ತಾಂತ್ರಿಕ ಮಾಹಿತಿ ಪಡೆದು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಉತ್ತಮ ಬೀಜ ಬಳಸಿ: ಸಹಾಯಕ ಪ್ರಾಧ್ಯಾಪಕ (ಬೀಜ ವಿಜ್ಞಾನ) ಎಸ್.ಎಂ. ಪ್ರಶಾಂತ ಮಾತನಾಡಿ, ರೈತರು ತಾವೇ ಉತ್ಪಾದಿಸಿದ ಧಾನ್ಯಗಳನ್ನು ಬೀಜಗಳಾಗಿ ಉಪಯೋಗಿಸುವುದರಿಂದ ಬೀಜದ ಗುಣಮಟ್ಟ ಕುಸಿಯುತ್ತಿದ್ದು, ವೈಜ್ಞಾನಿಕವಾಗಿ ಉತ್ಪಾದನೆಗೊಂಡ, ಸಂಸ್ಕರಿಸಿದ, ಬೀಜೋಪಚಾರ ಮಾಡಿದ ಬೀಜಗಳನ್ನು ಬಳಸಬೇಕು. ರೈತರಿಗೆ ಬೀಜ ಗ್ರಾಮ ಯೋಜನೆ ಬಗ್ಗೆ ತಿಳಿಸಿದ ಅವರು, ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಿಂಗಾರು ಬಿತ್ತನೆಗೆ ಜೋಳ ಹಾಗೂ ಕಡಲೆ ಬೀಜಗಳು ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದರು
ಕ್ಷೇತ್ರ ಅಧೀಕ್ಷಕ ಡಾ. ಆನಂದ ಶಂಕರ ಕಾಂಬಳೆ ಮಾಹಿತಿ ನೀಡಿದರು. ಕೇಂದ್ರದ ಮುಖ್ಯಸ್ಥ ಡಾ.ಜಿ. ರವಿಶಂಕರ ಅಧ್ಯಕ್ಷತೆ ವಹಿಸಿ ಕಡಲೆ ಬೆಳೆಯ ಸಮಗ್ರ ಬೇಸಾಯ ಪದ್ಧತಿಗಳ ಬಗ್ಗೆ ವಿವರಣೆ ನೀಡಿದರು. ಹಿರಿಯ ವಿಜ್ಞಾನಿ ಡಾ.ಎಸ್.ಟಿ. ಯಂಜೇರಪ್ಪ ಅವರು ಹಿಂಗಾರು ಬೆಳೆಗಳಲ್ಲಿ ಬರುವ ರೋಗಗಳು ಹಾಗೂ ಅವುಗಳ ನಿರ್ವಹಣೆ ಬಗ್ಗೆ ಹಾಗೂ ವಿಷಯ ತಜ್ಞ (ಕೀಟಶಾಸ್ತ್ರ) ಡಾ.ವಿ. ಆನಂದಕುಮಾರ್ ಹಿಂಗಾರು ಬೆಳೆಗಳ ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ರಮೇಶ್ ಬಿ.ಕೆ., ಕೆ.ಜೆ. ಹೇಮಲತಾ, ಕವಿತಾ ಉಳ್ಳಿಕಾಶಿ, ವಿಜಯಶೇಖರ ಮಾತನಾಡಿದರು. ಬಳ್ಳಾರಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸುಮಾರು 100ಕ್ಕೂ ಹೆಚ್ಚು ರೈತರು ಇದ್ದರು. ಡಾ. ರಮೇಶ ಸ್ವಾಗತಿಸಿದರು. ಎಸ್.ಎಂ. ಪ್ರಶಾಂತ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

