ಬಳ್ಳಾರಿ

ಹೇಳಿಕೆ ಹಿಂಪಡೆದ ಚಂದ್ರಪ್ಪ

Published On :

ಹೂವಿನಹಡಗಲಿ: ತಾಲೂಕಿನ ಹಿರೇಕೊಳಚಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ ವಜಾ ಪ್ರಕರಣದಲ್ಲಿ ಇನ್ನೊಬ್ಬ ಕಾರ್ಯಕರ್ತೆಯನ್ನು ನೇಮಿಸಲು ಆಮಿಷಯೊಡ್ಡಿ ಅವರಿಂದ ರು. 40 ಸಾವಿರ ಹಣ ಪಡೆದಿದ್ದಾರೆಂಬ ಹೇಳಿಕೆಯನ್ನು ಹಿಂಪಡೆದಿರುವುದಾಗಿ ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷ ಎಸ್. ಚಂದ್ರಪ್ಪ ತಳಕಲ್ಲು ಸ್ಪಷ್ಟಪಡಿಸಿದ್ದಾರೆ.
ಈಚಗೆ ತಾಲೂಕು ಅಂಗವಿಕಲರ ಸಂಘ ಹಾಗೂ ಎಐಟಿಯುಸಿ ಜಂಟಿ ಪ್ರತಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ್ದರು. ಆದರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ಸ್ಪಷ್ಟಪಡಿಸುತ್ತಾ, ಈ ಹೇಳಿಕೆಯು ಊಹಾಪೋಹಗಳಿಂದ ಕೂಡಿದ್ದಾಗಿದೆ, ಈ ಹೇಳಿಕೆಯಿಂದ ಆ ಭಾಗದ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿಯರು ಮನನೊಂದಿದ್ದರೆ ವಿಷಾದಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಐಟಿಯುಸಿ ತಾಲೂಕು ಸಂಚಾಲಕ ಮತ್ತಿಹಳ್ಳಿ ಬಸವರಾಜ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.