ಬಳ್ಳಾರಿ

ಗೊಂದಲದಲ್ಲೇ ನಡೆದ ಮಹಾಸಭೆ

Published On :

ಕುರುಗೋಡು: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 62ನೇ ವಾರ್ಷಿಕ ಮಹಾಜನ ಸಭೆ ಗೊಂದಲದಲ್ಲಿಯೇ ಜರುಗಿತು.
ಪ್ರಾರಂಭದಲ್ಲಿ ಸಂಘದ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ. ಚಂದ್ರಯ್ಯ ಮಾತನಾಡುತ್ತಿರುವಾಗ ಸಭೆಯ ಮಧ್ಯದಲ್ಲಿ ಎಚ್.ಎಂ. ವಿಶ್ವನಾಥಸ್ವಾಮಿ, ಮಾಬುಸಾಬ್ ಮಾತನಾಡಿ, ಈ ಹಿಂದೆ ಕಾರ್ಯನಿರ್ವಹಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ. ರುದ್ರಮುನಿಸ್ವಾಮಿ ಲಕ್ಷಾಂತರ ರು. ದುರ್ಬಳಕೆ ಮಾಡಿ ಸಂಘವನ್ನು ದಿವಾಳಿಗೆ ತಂದಿದ್ದಾರೆ. ಆದರೆ ಇನ್ನು ಆ ಹಣವನ್ನು ಸಂಘದ ಆಡಳಿತ ಮಂಡಳಿ ಯಾವುದೇ ಕ್ರಮ ಜರುಗಿಸಿಲ್ಲ. ಜತೆಗೆ ಅವರು ಮಾಡಿದ ದುರ್ಬಳಕೆ ಹಣವನ್ನು ಸಂಘಕ್ಕೆ ಯಾವಾಗ ಮರುಪಾವತಿ ಮಾಡಿಸುತ್ತೀರಿ ಮತ್ತು ಮರುಪಾವತಿ ಮಾಡಿ ತಕ್ಷಣ ರೈತರಿಗೆ ಸಾಲ ನೀಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುರುಗೋಡು ಬ್ಯಾಂಕಿನ ಕ್ಷೇತ್ರಾಧಿಕಾರಿ ಮಲಿಯಪ್ಪ, ತಮ್ಮೆಲ್ಲರ ಸಹಕಾರದಿಂದ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಸಂಘದಲ್ಲಿ ಈ ಹಿಂದೆ ಸಿಇಒ ಆಗಿದ್ದವರು 2011-12ನೇ ಸಾಲಿನಲ್ಲಿ ಹಣ ದುರುಪಯೋಗ ಮಾಡಿದ ಮೊತ್ತಕ್ಕೆ ಸದರಿಯವರ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ವ ಸದಸ್ಯರು, ಅಧಿಕಾರಿಗಳು ಮತ್ತು ರೈತರ ಸಮಕ್ಷಮದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ರೈತ ಮುಖಂಡ ಚಾನಾಳ್ ಆನಂದ್ ಅಧ್ಯಕ್ಷತೆ ವಹಿಸಿದ್ದರು. ನಾಡಗೌಡರ ಜಯದೇವಗೌಡ, ನೊಡಲ್ ಅಧಿಕಾರಿ ಜೆ. ರವೀಂದ್ರ, ಸಂಘದ ಅಧ್ಯಕ್ಷ ಟಿ. ಖಾಜಾಸಾಬ್, ಉಪಾಧ್ಯಕ್ಷ ಎನ್. ಸಣ್ಣಶೇಖಪ್ಪ, ನಿರ್ದೇಶಕರಾದ ಎನ್. ರಂಗಪ್ಪ, ರಾಜಾಪುರ ಆಂಜನೇಯ, ಚಂದ್ರಾಯಿ ದೊಡ್ಡಬಸಪ್ಪ, ಹಿರೇಓಣಿ ವಿರೂಪಣ್ಣ, ಪುರುಗೈ ನೀಲಮ್ಮ, ಬಿ. ಶೇಖರ್, ಸಂಘದ ಬಾದನಹಟ್ಟಿ, ಕುರುಗೋಡು, ಯಲ್ಲಾಪುರ ಗ್ರಾಮದ ಸಂಘದ ಸದಸ್ಯರು, ಮುಖಂಡರು, ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.