ಬಳ್ಳಾರಿ

ಆಂಜನೇಯ ಸ್ವಾಮಿ ರಥೋತ್ಸವ

Published On :

ಕೊಟ್ಟೂರು: ಯುಗಾದಿ ಹಬ್ಬದ ನಿಮಿತ್ತ ಪಟ್ಟಣದ ಉಜ್ಜಯಿನಿ ರಸ್ತೆಯ ಆಂಜನೇಯ ಸ್ವಾಮಿ ರಥೋತ್ಸವ ಮಂಗಳವಾರ ನಡೆಯಿತು.
ಪ್ರತಿ ವರ್ಷದ ಚಂದ್ರಮಾನ ಯುಗಾದಿ ದಿನ ನಡೆಯುವ ವಿಧಿಯಂತೆ ರಥೋತ್ಸವ ಸಕಲ ಬಿರುದಾವಳಿಗಳೊಂದಿಗೆ ಚಿರಿಬಿ ರಸ್ತೆ ವರೆಗೂ ಸಾಗಿ ದೇವಸ್ಥಾನಕ್ಕೆ ಸಂಜೆ ತಲುಪಿತು. ಭಕ್ತರು ರಥೋತ್ಸವದುದ್ದಕ್ಕೂ ಉತ್ತತ್ತಿ, ಹೂವು, ಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ಕೆಳಗೇರಿಯ ಆಂಜನೇಯ ದೇವಸ್ಥಾನ ಬಳಿ ಕಡುಬಿನ ಕಾಳಗ, ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಾಲ್ಮೀಕಿ ಜನಾಂಗದ ಯುವಕರು ಬಿಸಿ ಕಡುಬುಗಳನ್ನು ಬೀಸುತ್ತಾ ಸಾಗಿದರು.
ಕಾಣದ ಚಂದ್ರ: ಯುಗಾದಿ ಬಿದಿಗಿ ದಿನ ಹಿಂದೂಗಳು ಚಂದ್ರದರ್ಶನ ಮಾಡುವ ಪದ್ಧತಿಯಂತೆ ಇಲ್ಲಿನ ಜನ ಮಂಗಳವಾರ ಸಂಜೆ ವರೆಗೆ ಚಂದ್ರದರ್ಶನಕ್ಕೆ ಕಾದರು. ರಾತ್ರಿ 8ರ ವರೆಗೂ ಚಂದ್ರದರ್ಶನಕ್ಕಾಗಿ ತದೇಕಚಿತ್ತರಾಗಿ ಆಕಾಶದತ್ತ ನೋಡುತ್ತಿದ್ದರೂ ಚಂದ್ರದರ್ಶನ ಆಗಲೇ ಇಲ್ಲ. ಮೋಡ ಮುಸುಕಿದ ವಾತಾವರಣ ಏರ್ಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಜನ ನಿರಾಸೆಗೊಂಡರು. ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಸ್ವಾಮಿ ದರ್ಶನ ಪಡೆದರು. ಸಂಪ್ರದಾಯದಂತೆ ಗುರು-ಹಿರಿಯರಿಗೆ ನಮಸ್ಕರಿಸಿ ಪುನೀತರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.