ವೈಚಾರಿಕ ಜಾಗೃತಿಗೆ ರಂಗಕಲೆ
ಹೊಸಪೇಟೆ: ಜನರಲ್ಲಿ ವೈಚಾರಿಕತೆ ಮೂಡಿಸುವಲ್ಲಿ ರಂಗಕಲೆ ಸಮರ್ಥ ಮಾಧ್ಯಮವಾಗಿದೆ ಎಂದು ಸ್ಥಳೀಯ ಮುಖಂಡ ಕುಪ್ಪಿನಕೆರೆ ಮಂಜುನಾಥ ಹೇಳಿದರು.
ತಾಲೂಕಿನ ಮರಿಯಮ್ಮನಹಳ್ಳಿಯ ಎಸ್ಎಲ್ಎನ್ಎ ಶಿಕ್ಷಣ ಸಂಸ್ಥೆಯ ಪ್ರಿಯದರ್ಶಿನಿ ಕಾಲೇಜು ಆವರಣದಲ್ಲಿ ಸ್ಥಳೀಯ ಸೃಷ್ಟಿ ಕಲಾಬಳಗ, ಜೆಸಿಐ ಮರಿಯಮ್ಮನಹಳ್ಳಿ ಕಲಾ, ನಾಟ್ಯಕಲಾ ರಂಗ ಸಂಯುಕ್ತಾಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಧಾರವಾಡ ಆಟ-ಮಾಟ ತಂಡದವರು ಪ್ರಸ್ತುತ ಪಡಿಸಿದ 'ಊರು ಸುಟ್ಟರೂ ಹನುಮಪ್ಪ ಹೊರಗೆ' ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ನಾಟಕ ಕಲೆ ಮನುಷ್ಯನ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವ ಸಾಮರ್ಥ್ಯ ಪಡೆದಿದೆ. ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡ ವ್ಯಕ್ತಿಗಳು ಸದಾ ಕ್ರಿಯಾಶೀಲತೆಯಿಂದ ಮತ್ತು ಉತ್ತಮ ಮನಸ್ಥಿತಿ ಹೊಂದಿರುತ್ತಾರೆ. ಶಾಲಾ-ಕಾಲೇಜುಗಳಿಂದಲೇ ವಿದ್ಯಾರ್ಥಿಗಳು ರಂಗ ಚಟುವಟಿಕೆ ಅಳವಡಿಸಿಕೊಂಡು ಪ್ರತಿಭಾವಂತರಾಗಿ ಗುರುತಿಸಿಕೊಳ್ಳಬೇಕು. ಮರಿಯಮ್ಮನಹಳ್ಳಿಯಲ್ಲಿ ರಂಗ ಚಟುವಟಿಕೆ ನಿರಂತರವಾಗಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಹೊಸಪೇಟೆಯ ವಿಜಯನಗರ ಕಾಲೇಜಿನ ಉಪನ್ಯಾಸಕ ನಿರಂಜನ, ರಂಗಕರ್ಮಿ ಮ.ಬ. ಸೋಮಣ್ಣ ಮಾತನಾಡಿದರು.
ಉಪನ್ಯಾಸಕ ಸೋಮೇಶ್ ಉಪ್ಪಾರ್ ಸ್ವಾಗತಿಸಿದರು. ಹೊಸಪೇಟೆಯ ರಂಗ ಸಂಘಟಕ ನಾಗಭೂಷಣ, ಮರಿಯಮ್ಮನಹಳ್ಳಿಯ ಲಲಿತ ಕಲಾರಂಗದ ಅಧ್ಯಕ್ಷ ಹುರುಕೊಳ್ಳಿ ಮಂಜುನಾಥ, ಕಲಾವಿದ ಬಿ. ಯೋಗೇಶ್ವರ, ಪ್ರಿಯದರ್ಶಿನಿ ಕಾಲೇಜಿನ ಪ್ರಾಚಾರ್ಯ ಎಂ. ಅಶೋಕ್, ಆಟ-ಮಾಟ ತಂಡದ ಮುಖಂಡ ನಂ. ಯತೀಶ್, ಮಹದೇವ ಹಡಪದ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ನಂತರ ಧಾರವಾಡದ ಆಟ-ಮಾಟ ತಂಡದ ಕಲಾವಿದರಿಂದ ಹನುಮಂತ ಹಾಲಿಗೇರಿ ಅವರು ಬರೆದಿರುವ 'ಊರು ಸುಟ್ಟರೂ ಹನುಮಪ್ಪ ಹೊರಗೆ' ನಗೆ ನಾಟಕ ಪ್ರದರ್ಶನಗೊಂಡಿತು. ನಂ. ಯತೀಶ್ ಕೊಳ್ಳೆಗಾಲ ನಿರ್ದೇಶನದ ಈ ನಾಟಕದಲ್ಲಿ ಧನಂಜಯ ರಂಗಸಮುದ್ರ, ಮಾರಪ್ಪ ಬಿ.ಆರ್. ಬೆಜ್ಜಿಹಳ್ಳಿ, ಉಮೇಶ್ ಪಾಟೀಲ್, ನಂ. ಯತೀಶ್, ಮಹದೇವ ಹಡಪದ, ಗೀತಾ ವಿ. ಮೋಹಿತೆ. ಅನಿಲ್ ರೇವೂರ, ರೇಖಾ ರಾ. ಹೊಂಗಲ ಇತರರು ಅಭಿನಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

